Advertisement

ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ

01:37 PM Jun 16, 2022 | Team Udayavani |

ಬಳ್ಳಾರಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮಗ್ರಾಪಂಗಳಲ್ಲೇ ಇದ್ದುಕೊಂಡು ಜನರ ಸಮಸ್ಯೆಗಳಿಗೆತಕ್ಷಣ ಸ್ಪಂದಿಸಬೇಕು ಎಂದು ಸಾರಿಗೆ, ಜಿಲ್ಲಾಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.ನಗರದ ಜಿಪಂನ ನಜೀರ್‌ ಸಭಾಂಗಣದಲ್ಲಿಬುಧವಾರ ನಡೆದ ಬಳ್ಳಾರಿ ಜಿಲ್ಲೆ ಗ್ರಾಪಂಗಳ ಅಭಿವೃದ್ಧಿಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು.

Advertisement

ಗ್ರಾಮೀಣ ಜನ ಪಿಡಿಒಗಳು ಯಾವುದೇಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತುಕೇಂದ್ರ ಸ್ಥಾನದಲ್ಲಿರಲ್ಲ ಎಂಬ ದೂರುಗಳು ಸೇರಿದಂತೆವಿವಿಧ ರೀತಿಯ ದೂರುಗಳು ಕೇಳಿಬರುತ್ತಿದ್ದು,ಇದಕ್ಕೆ ಯಾವುದೇ ರೀತಿಯ ಅವಕಾಶ ನೀಡದೇಪಂಚಾಯ್ತಿಯಲ್ಲಿ ಇದ್ದುಕೊಂಡು ಜನರ ಸಮಸ್ಯೆಗಳಿಗೆತಕ್ಷಣ ಸ್ಪಂದಿಸಿ; ತಳಹಂತದಲ್ಲಿರುವ ತಾವು ಸರಿಯಾಗಿಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರುಬರಲಿದೆ ಎಂದರು.

ನರೇಗಾ, ಗ್ರಾಮೀಣ ಕುಡಿಯುವ ನೀರು ಮತ್ತುನೈರ್ಮಲ್ಯ ಯೋಜನೆ, ಸ್ವತ್ಛ ಭಾರತ ಮಿಶನ್‌, ತೆರಿಗೆವಸೂಲಾತಿ, 15ನೇ ಹಣಕಾಸು ಯೋಜನೆ, ವಸತಿಯೋಜನೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿವಿವಿಧ ಯೋಜನೆಗಳನ್ನು ವಿಶೇಷ ಮುತುವರ್ಜಿವಹಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಕೆಲಸವನ್ನು ಪಿಡಿಒಗಳು ಮಾಡಬೇಕು; ಪ್ರಗತಿವಿಷಯದಲ್ಲಿ ನಿರ್ಲಕ್ಷé ತೋರಿದಲ್ಲಿ ನಿರ್ದಾಕ್ಷಿಣ್ಯಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next