ಹೊಸಪೇಟೆ: ರಾಜ್ಯಾದ್ಯಂತ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂಗೆ ಶನಿವಾರ ಹೊಸಪೇಟೆ ನಗರ ಸಂಪೂರ್ಣ ಸ್ತಬ್ಧವಾಗಿ, ರಸ್ತೆಗಳು ಖಾಲಿ, ಖಾಲಿಯಾಗಿ ಬಣಗುಡುತ್ತಿತ್ತು. ಔಷ ಧಿ ಅಂಗಡಿ ಹಾಗೂ ಆಸ್ಪತ್ರೆ ಮತ್ತು ಬಸ್ ಸಂಚಾರ ಹೊರತುಪಡಿಸಿ ಉಳಿದಂತೆ ಎಲ್ಲ ಅಂಗಡಿ-ಮುಂಗಟ್ಟು ಬಂದ್ ಆಗಿದ್ದವು.
ಬೆಳಗ್ಗೆ ಹತ್ತರೊಳಗೆ ಹೋಟೆಲ್‌ಗಳಲ್ಲಿ ಉಪಾಹಾರ ಪಾರ್ಸೆಲ್ ಪಡೆಯಲು ಜನರು ಕ್ಯೂನಲ್ಲಿ ನಿಂತಿದ್ದರು. ಅಲ್ಲದೇ, ತರಕಾರಿಕೊಳ್ಳಲು ಕೂಡ ಎಪಿಎಂಸಿಗೆ ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸಿದ್ದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ದೃಶ್ಯ ಕಂಡು ಬಂತು. ಹತ್ತುಗಂಟೆ ಆಗುತ್ತಿದ್ದಂತೆಯೇ ಲ್ಡಿಗಿಳಿದ ಪೊಲೀಸರು ತರಕಾರಿ ಮಾರ್ಕೆಟ್, ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.
ಪ್ರಯಾಣಿಕರ ಕೊರತೆ: ವೀಕೆಂಡ್ ಕರ್ಫ್ಯೂ ಇದ್ದರೂ ದೂರದ ಊರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸಿದವು. ವೀಕೆಂಡ್ ಕರ್ಫ್ಯೂ ಹೇರಿದ್ದರಿಂದ ಜನರು ಸ್ವಯಂಪ್ರೇರಿತರಾಗಿ ಹೊರಬಾರದ್ದರಿಂದ ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಆದರೆ, ದೂರದ ಊರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೂ ಪ್ರಯಾಣಿಕರು ಬಸ್‌ನಿಲ್ದಾಣದತ್ತ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ, ಹೆಚ್ಚಿನ ಬಸ್‌ಗಳು ಸಂಚಾರ ಮಾಡಲಿಲ್ಲ
ಪ್ರಯಾಣಿಕರ ಬರ: ಹೊಸಪೇಟೆಯ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಹೊಡೆಯುತ್ತಿತ್ತು. ನಗರದ ಕೇಂದ್ರೀಯ ಬಸ್‌ನಿಲ್ದಾಣದಲ್ಲಿ ಬಸ್‌ಗಳು ಸಾಲಾಗಿ ನಿಂತಿದ್ದರು ಊರುಗಳಿಗೆ ತೆರಳಲು ಪ್ರಯಾಣಿಕರ ಬರ ಇತ್ತು. ಬೆರಳೆಣಿಕೆಯ ಆಟೋಗಳು ಮಾತ್ರ ಓಡಾಟ ನಡೆಸಿದವು. ಪೊಲೀಸರು ಸಿಟಿ ರೌಂಡ್ಸ್ ಹೊಡೆದರು.
ಅನಗತ್ಯವಾಗಿ ಹೊರಗಡೆ ಬರಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ನಗರಸಭೆ ಸಿಬ್ಬಂದಿ ಕೂಡ ನಗರದಲ್ಲಿ ಸಿಟಿ ರೌಂಡ್ಸ್ ಹಾಕಿ ಅಂಗಡಿಗಳನ್ನು ತೆರೆದಿದ್ದರೆ ಮುಚ್ಚಿಸುತ್ತಿದ್ದು ಕಂಡು ಬಂದಿತು. ವೀಕೇಂಡ್ ಕರ್ಫ್ಯೂಗೆ ಇಡೀ ನಗರ ಸ್ತಬ್ಧಗೊಂಡಿತ್ತು