Advertisement

ಬಾಲ್‌ ಬ್ಯಾಡ್ಮಿಂಟನ್‌: ಆಳ್ವಾಸ್‌ ವಿದ್ಯಾರ್ಥಿಗಳ ಅಮೋಘ ಸಾಧನೆ

12:30 AM Jan 17, 2019 | |

ಮೂಡುಬಿದಿರೆ: ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜರಗಿದ 64ನೇ ರಾಷ್ಟ್ರೀಯ ಪದವಿ ಪೂರ್ವ ಕಾಲೇಜುಗಳ ಬಾಲ್‌ ಬ್ಯಾಡ್ಮಿಂಟನ್‌ಕೂಟ ಹಾಗೂ ಮಚಲಿಪಟ್ನಂನ ಕೃಷ್ಣ  ವಿ.ವಿ. ಆಶ್ರಯದಲ್ಲಿ ವಿಜಯವಾಡದಲ್ಲಿ ಜರಗಿದ ಅಖೀಲ ಭಾರತಅಂತರ್‌ ವಿ.ವಿ. ಮಹಿಳಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಮೋಘ ಪ್ರದರ್ಶನ ದಾಖಲಿಸಿದ್ದಾರೆ. 

Advertisement

ಕರ್ನಾಟಕ ರಾಜ್ಯ ಹಾಗೂ ಮಂಗಳೂರು ವಿ.ವಿ. ತಂಡಗಳು ಚಾಂಪಿಯನ್‌ಶಿಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

12 ವರ್ಷಗಳ ಬಳಿಕ ಮಿಂಚಿದ ಕರ್ನಾಟಕ
64ನೇ ರಾಷ್ಟ್ರೀಯ ಪ.ಪೂ. ಕಾಲೇಜುಗಳ ಬಾಲ್‌ಬ್ಯಾಡ್ಮಿಂಟನ್‌ ಕೂಟದಲ್ಲಿ ರಾಜ್ಯ ತಂಡ 12 ವರ್ಷಗಳ ಬಳಿಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ರಾಜ್ಯ ತಂಡದಲ್ಲಿ ಆಡಿದ ಪ್ರಮುಖ 5 ಮಂದಿ ಆಟಗಾರರು ಆಳ್ವಾಸ್‌ ಪ.ಪೂ. ಕಾಲೇಜಿನವರು. ಈ ಕೂಟದಲ್ಲಿ ಕಂಚಿನ ಪದಕ ಪಡೆದ ರಾಜ್ಯ ಬಾಲಕರ ತಂಡದಲ್ಲಿ ಆಡಿದ್ದ ಪ್ರಮುಖ 5 ಮಂದಿ ಆಟಗಾರರು ಆಳ್ವಾಸ್‌ವಿದ್ಯಾರ್ಥಿಗಳು.

ಮಂಗಳೂರು ವಿ.ವಿ. ಚಾಂಪಿಯನ್‌
ಅಖೀಲ ಭಾರತ ಅಂತರ್‌ ವಿ.ವಿ. ಮಹಿಳಾ ಬಾಲ್‌ ಬಾ¾ಡಿಂಟನ್‌ ಕೂಟದಲ್ಲಿ  ಮಂಗಳೂರು ವಿ.ವಿ. ಸತತ 15ನೇ ಬಾರಿಗೆ ಲೀಗ್‌ಅರ್ಹತೆ ಪಡೆದಿರುವುದಲ್ಲದೆ, ನಿರಂತರ 5 ಹಾಗೂ ಒಟ್ಟು 8ನೇ ಸಲ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ವಿಜೇತ ಮಂಗಳೂರು  ವಿ.ವಿ. ತಂಡದ ಎಲ್ಲ 10 ಮಂದಿ ಆಟಗಾರ್ತಿಯರು ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿಯರು ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ  ಡಾ| ಎಂ. ಮೋಹನ ಆಳ್ವ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next