Advertisement

Balia; ವಧು-ವರರಾಗಿ ಬಂದರೆ 2000 ರೂ.; ಭಾರೀ ವಿವಾಹ ವಂಚನೆ ಬಯಲು

11:55 AM Feb 04, 2024 | Team Udayavani |

ಹೊಸದಿಲ್ಲಿ: ಬೃಹತ್ ವಿವಾಹ ವಂಚನೆಯಲ್ಲಿ ಭಾಗಿಯಾದ ಕಾರಣಕ್ಕೆ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

Advertisement

ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುಮಗಳು ಹಾರ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಹಗರಣ ಬಯಲಾಗಿದೆ. ಕೆಲವು ಪುರುಷರು ತಮ್ಮ ಮುಖಗಳನ್ನು ಮರೆಮಾಚಿ ವರನಂತೆ ನಿಂತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು.

ಜನವರಿ 25ರಂದು ಬಲಿಯಾ ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಸಮಾರಂಭ ನಡೆದಿತ್ತು.

ಈ ಸಮಾರಂಭದಲ್ಲಿ ಸುಮಾರು 568 ಜೋಡಿಗಳು ವಿವಾಹವಾದರು ಎಂದು ಅಧಿಕಾರಿಗಳು ಹೇಳುತ್ತಾರೆ, ಆದರೆ ವಧು ಮತ್ತು ವರರಂತೆ ಪೋಸ್ ನೀಡಲು ಹಲವರಿಗೆ ಹಣ ನೀಡಲಾಗಿದೆ ಎಂದು ಕಂಡುಬಂದಿದೆ.

ವಧು-ವರರ ಪೋಸ್ ಕೊಡಲು ಪುರುಷ ಮತ್ತು ಮಹಿಳೆ ಇಬ್ಬರಿಗೂ  500 ರಿಂದ 2,000 ರೂ ಸಂಭಾವನೆ ನೀಡಲಾಗಿದೆ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ. “ಕೆಲವು ಮಹಿಳೆಯರಿಗೆ ಯಾರೂ ಇರಲಿಲ್ಲ. ಅವರೇ ಮಾಲೆ ಧರಿಸಿದ್ದರು. ಜನರಿಗೆ 500 ರಿಂದ 2,000 ರೂ ವರೆಗೆ ಹಣ ನೀಡಲಾಗುತ್ತಿದೆ ಎಂದು ನಮಗೆ ತಿಳಿದು ಬಂದಿದೆ,” ಎಂದು ವಿಮಲ್ ಕುಮಾರ್ ಪಾಠಕ್ ಹೇಳಿದರು.

Advertisement

“ನಾನು ಮದುವೆಯನ್ನು ನೋಡಲು ಅಲ್ಲಿಗೆ ಹೋಗಿದ್ದೆ. ಅವರು ನನ್ನನ್ನು ಅಲ್ಲೇ ಕೂರಿಸಿದರು. ಅವರು ನನಗೆ ಹಣ ನೀಡುವುದಾಗಿ ಹೇಳಿದರು. ಹೀಗೆ ಹಲವರನ್ನು ವಧು- ವರರಾಗಿ ಕೂರಿಸಲಾಯಿತು” ಎಂದು 19 ವರ್ಷದ ರಾಜ್ ಕುಮಾರ್ ಎಂಬಾತ ಹೇಳಿದರು.

ಬಿಜೆಪಿ ಶಾಸಕ ಕೇತ್ಕಿ ಸಿಂಗ್ ಅವರು ಈ ಸಮುದಾಯ ವಿವಾಹಕ್ಕೆ ಮುಖ್ಯ ಅತಿಥಿಯಾಗಿದ್ದರು.

ಸರ್ಕಾರಿ ವೆಬ್‌ಸೈಟ್ ಪ್ರಕಾರ, ಈ ಯೋಜನೆಯಡಿ ಸರ್ಕಾರವು 51,000 ರೂ. ನೀಡುತ್ತದೆ. ಇದರಲ್ಲಿ 35,000 ರೂ ಹುಡುಗಿಗೆ, 10,000 ರೂ ಮದುವೆಯ ಸಾಮಗ್ರಿಗಳನ್ನು ಖರೀದಿಸಲು ಮತ್ತು 6,000 ರೂ ಕಾರ್ಯಕ್ರಮಕ್ಕೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next