Advertisement

ರೈತರ ಅಭಿವೃದ್ಧಿಗೆ ಕೆಎಂಎಫ್ ನಿಂದ ಹಲವು ಯೋಜನೆಗಳು ಜಾರಿ : ಬಾಲಚಂದ್ರ ಜಾರಕಿಹೊಳಿ

09:20 PM May 12, 2022 | Team Udayavani |

ಮೂಡಲಗಿ : ದೇಶದಲ್ಲಿಯೇ ಸಹಕಾರಿ ವಲಯದಲ್ಲಿ ಎರಡನೇ ಸ್ಥಾನದಲ್ಲಿರುವ ಕೆಎಂಎಫ್ ರೈತರ ಆರ್ಥಿಕ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ‌ ಬಾಲಚಂದ್ರ ಜಾರಕಿಹೊಳಿ ಅವರು ರೈತ ಸಮುದಾಯಕ್ಕೆ ಸಲಹೆ ಮಾಡಿದರು.

Advertisement

ಮೂಡಲಗಿ ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ಜರುಗಿದ ವಿವಿಧ ಯೋಜನೆಗಳ 19.50 ರೂ.‌ ಮೊತ್ತದ ಚೆಕ್ಕುಗಳನ್ನು ವಿತರಿಸಿ ಮಾತನಾಡಿದ ಅವರು, ಕೆಎಂಎಫ್ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದು, ಇದಕ್ಕೆ ರೈತ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಶಿಂಧಿಕುರಬೇಟ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ 5 ಲಕ್ಷ, ಖಾನಾಪುರ, ಮುನ್ಯಾಳ, ಹುಣಶ್ಯಾಳ ಪಿವೈ (ಬಸವ ನಗರ) ಸಹಕಾರಿ ಸಂಘಗಳ ಕಟ್ಟಡಕ್ಕೆ ತಲಾ 2.50 ಲಕ್ಷ ರೂ, ಶಿವಾಪೂರ(ಹ) ಸಂಘದ ಕಟ್ಟಡಕ್ಕೆ 2 ಲಕ್ಷ ರೂ ಸೇರಿದಂತೆ 14.50 ಲಕ್ಷ ರೂಪಾಯಿ ಚೆಕ್ಕಗಳನ್ನು ವಿತರಿಸಿದರು.

ರಾಸುಗಳನ್ನು ಕಳೆದುಕೊಂಡ ಆರು ಜನ ರೈತರಿಗೆ ತಲಾ 50 ಸಾ.ರೂ ಗಳಂತೆ ಒಟ್ಟು 3 ಲಕ್ಷ ರೂಗಳ ರಾಸು ವಿಮೆ ಚೆಕ್ಕುಗಳನ್ನು ವಿತರಿಸಿದರು. ಜೊತೆಗೆ ಕಲ್ಯಾಣ ಸಂಘದ 2 ಲಕ್ಷ ಸೇರಿ ಒಟ್ಟು 19.50 ಲಕ್ಷ ರೂ ಗಳ ಚೆಕ್ಕುಗಳನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು.

ಇದನ್ನೂ ಓದಿ : ಮುದ್ದೇಬಿಹಾಳ : ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Advertisement

ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೆಶಕ ಮಲ್ಲು ಪಾಟೀಲ್, ಹಲವು ಮುಖಂಡರು, ಮೂಡಲಗಿ ಉಪ ಕೇಂದ್ರ ಅಧಿಕಾರಿ ರವಿ‌ ತಳವಾರ, ವಿಸ್ತರಣಾಧಿಕಾರಿ ವಿಠ್ಠಲ ಲೋಕುರಿ, ಸಚಿನ್ ಪಡದಲ್ಲಿ, ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳು, ಹಾಲು ಉತ್ಪಾದಕ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next