Advertisement
ಹತ್ತು ಭಾಷೆ, ಜೈನ ಆಗಮನದ 5 ಸಾವಿರ ಶ್ಲೋಕಗಳು, ಭಗವದ್ಗೀತೆ, ಖುರಾನ್, ಬೈಬಲ್‌ನಲ್ಲಿ ಪಾಂಡಿತ್ಯ, ನೂರು ಜನರ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವ ಛಾತಿ… ಇಷ್ಟು ಸಾಮರ್ಥ್ಯ ಪಡೆಯಲು ಹಲವಾರು ವರ್ಷಗಳ ಕಠಿಣ ಸಾಧನೆ, ತಪಸ್ಸು, ಅವಿರತ ಪ್ರಯತ್ನ ಅಗತ್ಯ ಎನ್ನುವುದು ಒಪ್ಪತಕ್ಕ ಮಾತು. ಆದರೆ, ಸೂರತ್ ನಿಂದ ಬೆಂಗಳೂರಿಗೆ ಬಂದಿರುವ, ಅವಳಿ ಬಾಲಮುನಿ ಗಳು ಈ ಮಾತನ್ನು ಸುಳ್ಳು ಮಾಡಿದ್ದಾರೆ. 9ನೇ ವಯಸ್ಸಿಗೆ ಜೈನ ಸನ್ಯಾಸತ್ವ ಸ್ವೀಕರಿಸಿದ, ನಮಿಚಂದ್ರಸಾಗರ್ ಮತ್ತು ನೇಮಿಚಂದ್ರ ಸಾಗರ್‌ಗೆ ಈಗ ಕೇವಲ ಹತ್ತು ವರ್ಷ. ಆಟವಾಡುವ ವಯಸ್ಸಿನಲ್ಲಿ ದೀಕ್ಷೆ ಸ್ವೀಕರಿಸಿದ್ದೇ ಒಂದು ದೊಡ್ಡ ಸಾಧನೆಯಾದರೆ, ಕೇವಲ ಒಂದು ವರ್ಷದಲ್ಲಿ ಇವರು ತೋರಿದ ಬೌದ್ಧಿಕ ಬೆಳವಣಿಗೆಯೂ ದೊಡ್ಡ ಪವಾಡವೇ.
Related Articles
Advertisement
ಯಾವ್ಯಾವ ಭಾಷೆ ಗೊತ್ತು?ಸಂಸ್ಕೃತ, ಪ್ರಾಕೃತ, ಹಿಂದಿ, ಗುಜರಾತಿ, ಮರಾಠಿ, ಮಾರ್ವಾಡಿ, ಇಂಗ್ಲಿಷ್, ಪಂಜಾಬಿ, ಕನ್ನಡ, ಉರ್ದು ಸನ್ಯಾಸ ಜೀವನ
ಯಾವ ಜೀವಿಗೂ ಹಿಂಸೆ ಮಾಡುವಂತಿಲ್ಲ
ತಣ್ಣೀರು ಕುಡಿಯುವಂತಿಲ್ಲ
ಕೂದಲಿಗೆ ಕತ್ತರಿ, ಬ್ಲೇಡ್ ಹಾಕುವಂತಿಲ್ಲ. ಕೂದಲು ಬೆಳೆದಾಗ ಅದನ್ನು ಕೈಯಿಂದ ಕಿತ್ತೇ ತೆಗೆಯಬೇಕು ಸೂರ್ಯೋದಯದ ನಂತರ, ಸೂರ್ಯಾಸ್ತಕ್ಕೂ ಮೊದಲು ಮಿತಾಹಾರ ಸೇವನೆ ಮಾಡಬಹುದು ಶತಾವಧಾನ ಎಂದರೇನು ?
ನಿಮಗೆ ಎಷ್ಟು ಜನರ ಮೊಬೈಲ್ ನಂಬರ್ ನೆನಪಿದೆ? ಹತ್ತು ಸಂಖ್ಯೆಯ ಮೊಬೈಲ್ ನಂಬರ್ ಅನ್ನು ಒಂದೇ ಒಂದು ಬಾರಿ ಹೇಳಿದರೆ ಅದು ನಿಮ್ಮ ನೆನಪಿನಲ್ಲಿ ಉಳಿಯುತ್ತದಾ? ಐದಾರು ಜನ ಒಟ್ಟಿಗೇ ಪ್ರಶ್ನೆ ಕೇಳಿದರೆ, ಪ್ರಶ್ನೆಯನ್ನು ನೆನಪಿಟ್ಟುಕೊಂಡು ನೀವು ಎಲ್ಲರಿಗೂ ಉತ್ತರಿಸಬಲ್ಲಿರಾ? ಇದು ಕಷ್ಟದ ವಿಷಯ. ಯಾಕೆಂದರೆ, ಸಾಮಾನ್ಯ ಜನರು ಒಂದು ಬಾರಿಗೆ 3-4 ವಿಷಯಗಳನ್ನು ನೆನಪಿಟ್ಟುಕೊಂಡರೆ, ಅಸಾಮಾನ್ಯರು 10-15 ವಿಷಯಗಳನ್ನು ಸ್ಮರಣೆ ಮಾಡಬಲ್ಲರು. ಆದರೆ, ಶತವಧಾನ ಎಂದರೆ, ನೂರು ಸಂಗತಿಗಳನ್ನು ಒಟ್ಟಿಗೇ ಕೇಳಿ ನೆನಪಿಟ್ಟುಕೊಳ್ಳುವುದು. ಈ ಅವಳಿ ಮುನಿಗಳಿಗೆ ಶತಾವಧಾನ ಸಿದ್ಧಿಸಿದೆ. ಪ್ರೇಕ್ಷಕರು ಒಬ್ಬೊಬ್ಬರಾಗಿ ಎದ್ದು ನಿಂತು ತೋರಿಸುವ ಅಥವಾ ಕೇಳುವ 100 ವಿವಿಧ ವಿಷಯ, ವಸ್ತುಗಳನ್ನು ನೆನಪಿನಲ್ಲಿಟ್ಟುಕೊಂಡು, ಪ್ರಶ್ನೋತ್ತರ ಸಮಯ ಮುಗಿದ ನಂತರ ಅವುಗಳಿಗೆ ಅನುಕ್ರಮವಾಗಿ ಉತ್ತರಿಸುತ್ತಾರೆ. ಪ್ರಶ್ನೆಗಳನ್ನು ಹಿಂದು-ಮುಂದು ಅಥವಾ ಮಧ್ಯೆ-ಮಧ್ಯೆದಲ್ಲಿ ನೆನಪಿಟ್ಟು ಕೊಳ್ಳುವ, ಯಾರು, ಯಾವ ಪ್ರಶ್ನೆಯನ್ನು, ಯಾರ ನಂತರ ಕೇಳಿದರು ಎಂದು ಹೇಳುವ ಚಾಕಚಕ್ಯತೆಯೂ ಇವರಿಗಿದೆ. ಅವಳಿ ಮುನಿಗಳಿಗೆ ಏನೇನು ಗೊತ್ತು?
ಯಾವುದೇ ದೇಶದ ಹೆಸರು ಹೇಳಿದರೂ, ಅದರ ರಾಜಧಾನಿ, ರಾಷ್ಟ್ರಭಾಷೆ ಹಾಗೂ ಅಲ್ಲಿನ ಇತರೆ ಭಾಷೆಗಳು ಯಾವುದೆಂದು ಹೇಳುತ್ತಾರೆ. ಗಣಿತದ ಕಠಿಣ ಒಗಟುಗಳನ್ನು ಬಿಡಿಸುತ್ತಾರೆ. ದರ್ಶನ ಅವಧಾನದಲ್ಲಿ ಪ್ರೇಕ್ಷಕರು ತೋರಿಸುವ ವಸ್ತುಗಳನ್ನು ನೆನಪಿಟ್ಟುಕೊಂಡು, ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಜೈನ ಆಗಮ ಗ್ರಂಥದ ಪಠ್ಯಗಳನ್ನು, 5 ಸಾವಿರ ಶ್ಲೋಕಗಳನ್ನು ಸುಲಲಿತವಾಗಿ ಹೇಳಬಲ್ಲರು. ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕಗಳು, ಖುರಾನ್ ಆಯಾತ್, ಬೈಬಲ್ ಅಧ್ಯಾಯಗಳ ವಾಕ್ಯಗಳಲ್ಲಿ, ಗುರು ಗ್ರಂಥಾ ಸಾಹಿಬ್‌ನಲ್ಲಿ ಪರಿಣತರು. 10 ವಿವಿಧ ಭಾಷೆಗಳಲ್ಲಿ ಮಾತನಾಡಲು ಗೊತ್ತು.
ಕಣ್ಣಿಗೆ ಪಟ್ಟಿ ಕಟ್ಟಿಕೊಂಡು 22, 33 ಮತ್ತು ಪಿರಮಿಡ್ ಕ್ಯೂಬ್‌ಅನ್ನು ಸರಿಪಡಿಸುತ್ತಾರೆ. ಪ್ರಶ್ನೆಗಳು, ಪವಿತ್ರ ತೀರ್ಥ ಸ್ಥಳಗಳು, ಉತ್ಸವಗಳು, ಸಂತರು, ತತ್ವಜ್ಞಾನಿಗಳು, ವಿಜ್ಞಾನಿಗಳು, ರಾಷ್ಟ್ರ ನಾಯಕರು ಮತ್ತು ಯೋಗಾಸನಗಳನ್ನು ಗುರುತಿಸಬಲ್ಲರು. ಪ್ರಿಯಾಂಕಾ ಎನ್.