Advertisement
ಉಡುಪಿಯ ಹಾಶಿಮಿ ಮಸೀದಿಯಲ್ಲಿ ರಾಜ್ಯ ಆಡಳಿತ ಹೊರಡಿಸಿದ ಮಾರ್ಗಸೂಚಿಗಳೊಂದಿಗೆ ಈದ್ ಆಚರಿಸಲಾಯಿತು. ಬೆಳಿಗ್ಗೆ 7.30ಕ್ಕೆ ನಡೆದ ಸಾಮೂಹಿಕ ಪ್ರಾರ್ಥನೆ ನಂತರ ಮೌಲಾನಾ ಹಾಶಿಮ್ ಉಮ್ರಿ ಅವರ ಈದ್ ಅಲ್ ಅಧ್ಸ್‌ನ ( Eid Al Adha) ಮಹತ್ವವನ್ನು ಹೇಳಿದರು
Related Articles
Advertisement
ಬೆಳಗ್ಗೆ ಜಾಮೀಯಾ ಮಸೀದಿ ಮತ್ತು ತೋಪನಂಗಡಿ ಮಸೀದಿಯಲ್ಲಿ ಮುಸಲ್ಮಾನ ಬಾಂಧವರು ಮಾಸ್ಕ್ ಧರಿಸಿ ಸಾಮೂಹಿಕ ಅಂತರ ಕಾಪಾಡಿಕೊಂಡು ನಮಾಜ್ ಸಲ್ಲಿಸಿದರು. ಕೊವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಳ್ಳಲಾಗಿದ್ದು, ಕೈಕುಲುಕಿ, ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳಲು ನಿರ್ಬಂಧ ವಿಧಿಸಲಾಗಿತ್ತು.
ಶಿರ್ವ ಜಾಮೀಯಾ ಮಸೀದಿಯ ಆಡಳಿತ ಮಂಡಳಿಯ ವತಿಯಿಂದ ಮಕ್ಕಳು ಮತ್ತು ವೃದ್ಧರಿಗೆ ಮನೆಯಲ್ಲಿಯೇ ನಮಾಜ್ ಸಲ್ಲಿಸಲು ಸೂಚಿಸಲಾಗಿದ್ದು, ಪ್ರಾರ್ಥನೆ ಸಲ್ಲಿಸಿದ ಬಳಿಕ ಮನೆಮಂದಿಯೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕೊರೊನಾ ಮಹಾಮಾರಿಯಿಂದಾಗಿ ನೆರೆಹೊರೆಯವರೊಂದಿಗೂ ಶುಭಾಶಯ ವಿನಿಮಯ ಮಾಡಿಕೊಳ್ಳಲು ಆತಂಕದ ಪರಿಸ್ಥಿತಿ ಇದೆ. ಬಕ್ರೀದ್ ಹಬ್ಬದ ಪ್ರಾರ್ಥನೆಯೊಂದಿಗೆ ಕೊರೊನಾ ಭೀತಿ ದೂರವಾಗಿ ಸಮಾಜದಲ್ಲಿ ನೆಮ್ಮದಿಯ ಜನಜೀವನ ನೆಲೆಗೊಳ್ಳಲಿ ಎಂದು ಶಿರ್ವಸುನ್ನಿ ಜಾಮೀಯಾ ಮಸೀದಿಯ ಖತೀಬರಾದ ಸಿರಾಜುದ್ದೀನ್ ಝೈನಿ, ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಹುಸೇನ್ ಅಬ್ದುಲ್ ಕಲಂದರ್ ಮತ್ತು ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಹಸನಬ್ಬ ಶೇಕ್ ಆಶಯ ವ್ಯಕ್ತಪಡಿಸಿದ್ದಾರೆ.