Advertisement

ಕರಾವಳಿಯಲ್ಲಿ ಇಂದು ಬಕ್ರೀದ್‌ ಹಬ್ಬ ಆಚರಣೆ

02:04 AM Jul 21, 2021 | Team Udayavani |

ಮಂಗಳೂರು/ಉಡುಪಿ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಬುಧವಾರ ಕರಾವಳಿಯಲ್ಲಿ ಆಚರಿಸಲಾಗುತ್ತದೆ.

Advertisement

ಸರಕಾರದ ಹೊಸ ಮಾರ್ಗಸೂಚಿಯಂತೆ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ಮಸೀದಿ ಗಳಲ್ಲಿ ಹಬ್ಬ ಆಚರಿಸಲು ಸಿದ್ಧತೆ ನಡಸಲಾಗಿದೆ. ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ. 50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಝ್, ಈದ್‌ ಖುತಾº ನೆರವೇರಲಿದೆ.

ಮಾಸ್ಕ್ ಧಾರಣೆ ಕಡ್ಡಾಯ, 65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷ ಕ್ಕಿಂತ ಕೆಳಗಿನವರು ಮಸೀದಿಗೆ ತೆರಳಬಾರದು. ನಮಾಝ್ ನಿರ್ವಹಿಸುವವರ ಮಧ್ಯೆ ಕನಿಷ್ಠ 6 ಅಡಿ ಅಂತರವಿರಬೇಕು. ಮಸೀದಿಗೆ ಪ್ರವೇಶಿ ಸುವ ಮುನ್ನ ದೇಹದ ಉಷ್ಣಾಂಶ ತಪಾಸಣೆ ಮಾಡಬೇಕು. ಕೈಗಳನ್ನು ಸೋಪು ಅಥವಾ ಸ್ಯಾನಿಟೈಝರ್‌ನಿಂದ ಶುಚಿಗೊಳಿಸಬೇಕು ಸೇರಿದಂತೆ ಹಲವು ನಿಯಮಾವಳಿ ಪಾಲಿಸು ವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಉಡುಪಿ: ಸಿದ್ಧತೆ ಪೂರ್ಣ
ಉಡುಪಿ ಜಿಲ್ಲೆಯಲ್ಲಿ ವಕ್ಫ್ ನೋಂದಾಯಿತ 138 ಸೇರಿದಂತೆ ಒಟ್ಟು 180 ಮಸೀದಿಗಳಿದ್ದು, ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ. 50ರಷ್ಟು ಮಂದಿ ಯನ್ನು ಸೇರಿಸಿ ಸಾಮೂಹಿಕ ಈದ್‌ ನಮಾಝ್ ನಡೆಸಲಾಗುತ್ತದೆ. ಜನಸಂಖ್ಯೆ ಹೆಚ್ಚಿರುವ ಮಸೀದಿಗಳಲ್ಲಿ ಎರಡು ಹಾಗೂ ಮೂರು ಹಂತಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಲಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಮಸೀದಿ ವಠಾರಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next