Advertisement

ಜಿಲ್ಲಾದ್ಯಂತ ಬಕ್ರೀದ್‌ ಸಂಭ್ರಮ;ಪರಸ್ಪರ ಶುಭಕೋರಿಕೆ

12:34 PM Sep 03, 2017 | Team Udayavani |

ದೇವನಹಳ್ಳಿ: ಪಟ್ಟಣದ ಬಿ.ಬಿ.ರಸ್ತೆಯಲ್ಲಿರುವ ಟಿಪ್ಪು ಈದ್ಗಾ ಮೈದಾನದಲ್ಲಿರುವ ಟಿಪ್ಪು ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ಬಕ್ರೀದ್‌ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಸಹೋದರರು ಪರಸ್ಪರ ಒಬ್ಬರನ್ನೊಬ್ಬರು ತಬ್ಬಿಕೊಂಡು ಶುಭಾಷಯ ಕೋರಿದರು. 

Advertisement

ಸಮುದಾಯದ ಮುಖಂಡ ಮುನಾವರ್‌ ಮಾತನಾಡಿ, ಈ ಭಾಗವು ಬಯಲು ಸೀಮೆ ಪ್ರದೇಶವಾಗಿದ್ದು, ಕುಡಿಯುವ ನೀರಿಗೆ ಬಹಳ ತೊಂದರೆಯಾಗಿದೆ. ಸರ್ಕಾರ ಶಾಶ್ವತ ನೀರಾವರಿಗಳನ್ನು ಕಲ್ಪಿಸಬೇಕು. ವಿಜಯಪುರ ನಗರವನ್ನು ತಾಲೂಕನ್ನಾಗಿ ಮಾಡಬೇಕೆಂದು ಪ್ರಾರ್ಥಿಸಲಾಗಿದೆ ಎಂದು ಹೇಳಿದರು.

ಧರ್ಮ ಬೇಧ ಬೇಡ: ಮುಖಂಡ ಸೈಫ‌ುಲ್ಲಾ ಮಾತನಾಡಿ, ತ್ಯಾಗ-ಬಲಿದಾನಕ್ಕೆ ಹೆಸರಾದ ಈ ಹಬ್ಬದಲ್ಲಿ ಹಿಂದು-ಮುಸ್ಲಿಂ ಎಂಬ ಬೇಧ ಬಿಡಬೇಕು. ಎಲ್ಲಾ ಧರ್ಮದವರು ಒಂದೇ ಎಂಬ ಭಾವನೆ ಮೂಡಬೇಕು. ದೇವರು ಯಾವುದೇ ಜಾತಿ-ಮತವನ್ನು ಸೃಷ್ಟಿಸಿಲ್ಲ. ಮಾನವ ತನ್ನ ಅನುಕೂಲಕ್ಕೆ ತಕ್ಕ ಹಾಗೇ ಜಾತಿ-ಮತ ಸೃಷ್ಟಿಸಿಕೊಂಡು, ಬೇಧ- ಭಾವ ತೋರುತ್ತಿದ್ದಾರೆ. ವಾಸ್ತವದಲ್ಲಿ ನಾಮ ಹಲವು ಇದ್ದರೂ ದೇವನೊಬ್ಬನೇ ಎಂದರು. ಅಮೀರ್‌ ಜಾನ್‌, ಖಲೀಲ್‌ ಸಾಬ್‌, ಸೈಫ‌ುಲ್ಲಾ, ಸಲೀಂ, ಅಪುÕ, ತೌಸಿಫ್, ರಫಿ ಸಾಬ್‌, ಶಬ್ಬೀರ್‌, ಫ‌ಕ್ರುದ್ದೀನ್‌ ಸಾಬ್‌, ಅಬ್ದುಲ್‌ ನವೀದ್‌ ಮತ್ತಿತರರು ಇದ್ದರು. 

ಹೊಸಕೋಟೆ: ಸಮಾಜದಲ್ಲಿ ಶಾಂತಿ, ನೆಮ್ಮದಿ ಪಾಲಿಸಬೇಕು. ಇದಕ್ಕಾಗಿ ಜನರು ಸ್ವಧರ್ಮಕ್ಕೆ
ನೀಡುವಷ್ಟೇ ಗೌರವವನ್ನು ಇತರ ಧರ್ಮಗಳ ಕುರಿತೂ ನೀಡಬೇಕು ಎಂದು ಹೈದರಾಬಾದಿನ
ಮಿನ್‌ಹಜ್‌ ಉಲ್‌ಕುರಾನ್‌ ಸಂಸ್ಥೆಯ ನಿರ್ದೇಶಕ ಮೌಲಾನಾ ಹಬೀಬ್‌ ಅಹಮದ್‌ ಅಲ್‌ಹುಸೇನಿ ಹೇಳಿದರು.

ಪಟ್ಟಣದ ಬಸ್‌ ಸ್ಟಾಂಡಿನಲ್ಲಿರುವ ಜಾಮೀಯ ಮಸೀದಿಯಲ್ಲಿ ಬಕ್ರೀದ್‌ ಹಬ್ಬದ
ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಜಾತಿ, ಮತ, ಧರ್ಮಗಳ
ನಡುವೆ ಉತ್ತಮ ಭ್ರಾತೃತ್ವ ಬೆಳೆಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಬೇಕು.
ಭಯೋತ್ಪಾದನಾ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಿ ರಾಷ್ಟ್ರ ರಕ್ಷಣೆಯಲ್ಲಿ ತೊಡಗಲು
ಕಂಕಣಬದ್ಧರಾಗಬೇಕು ಎಂದರು.

Advertisement

ಧಾರ್ಮಿಕ ಆಚರಣೆಗಳನ್ನು ಆಡಂಬರಕ್ಕೆ ಸೀಮಿತಗೊಳಿಸದೆ ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಪರಿಗಣಿಸಬೇಕು. ಆಗ ಮಾತ್ರ ಉದ್ದೇಶ ಸಾರ್ಥಕಗೊಳ್ಳಲಿದೆ ಎಂದರು. ಜಾಮಿಯ ಮಸೀದಿ ಅಧ್ಯಕ್ಷ ಅಫ್ರಾಲ್‌ ಖಾನ್‌, ಪದಾಧಿಕಾರಿಗಳು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. 

ಮಳೆ ಅಡ್ಡಿ: ಪ್ರತಿ ಹಬ್ಬಗಳ ಸಂದರ್ಭದಲ್ಲಿಯೂ ಸೂಲಿಬೆಲೆ ರಸ್ತೆಯಲ್ಲಿ ಈದ್ಗಾ ಮೈದಾನದಲ್ಲಿ
ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಶನಿವಾರ ಬೆಳಗ್ಗೆ ಸುಮಾರು 2-3 ಗಂಟೆಗಳ ಕಾಲ
ಸುರಿದ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದ್ದ ಕಾರಣ ಪಟ್ಟಣದಲ್ಲಿನ ಎ.ಆರ್‌.ಬಡಾವಣೆ, ಖಾಜಿ
ಮೊಹಲ್ಲಾ, ವಿಶ್ವೇಶ್ವರಯ್ಯ ಬಡಾವಣೆ, ಕಣ್ಣೂರಹಳ್ಳಿ ರಸ್ತೆ, ಕುಂಬಾರಪೇಟೆ ಇನ್ನಿತರ ಮಸೀದಿಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next