ಉಡುಪಿ: ಬೇಕ್ ದಿ ಬ್ರೈನ್ಸ್ (Bake the Brains) ಯೆಂಬ ಬೇಕರಿ ಹಾಗೂ ಆಹಾರೋದ್ಯಮ ಕ್ಷೇತ್ರದ ಅವಕಾಶ ಮತ್ತು ತರಬೇತಿ ಕಾರ್ಯಕ್ರಮವನ್ನು ಸೆ.25 ರಂದು ಬುಧವಾರ ಸಂಜೆ 3.30 ರಿಂದ 7.30 ರವರೆಗೆ ಬ್ರಹ್ಮಾವರದ ಹೋಟೆಲ್ ಸಿಟಿ ಸೆಂಟರ್ ನ ಚಂದನ್ ಹಾಲ್ ನಲ್ಲಿ ನಡೆಯಲಿದೆ.
ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು ಹಾಗೂ ಮಾರಾಟಗಾರರ ಸಂಘ (ರಿ), ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ ಬ್ರಹ್ಮಾವರದ ಹೋಟೆಲ್ ಸಿಟಿ ಸೆಂಟರ್ ನ ಚಂದನ್ ಹಾಲ್ ನಲ್ಲಿ ನಡೆಯಲಿದೆ.
ಬೇಕರಿ ಉತ್ಪನ್ನಗಳ ದೀರ್ಘ ಬಾಳಿಕೆ ಬಗ್ಗೆ, ಉತ್ತಮ ಗುಣಮಟ್ಟದ ಉತ್ಪನ್ನಗಳ ತಯಾರಿಕೆಯ ಬಗ್ಗೆ, ವಿನೂತನ ಮಾದರಿಯ ಉತ್ಪನ್ನಗಳ ಪ್ರದರ್ಶನ, ನೂತನ ಶೈಲಿಯ ಪ್ಯಾಕಿಂಗ್ ತಂತ್ರಜ್ಞಾನಗಳ ಬಗ್ಗೆ ಸಮಗ್ರ ತರಬೇತಿ ಕಾರ್ಯಗಾರವನ್ನು ಮೈಸೂರು ಸಿಎಫ್ ಟಿಆರ್‌ಐ ಆಹಾರ ವಿಜ್ಞಾನಿ ಪ್ರಭಾ ಶಂಕರ್, ಆಹಾರ ಉದ್ಯಮದಲ್ಲಿ ಹಣಕಾಸಿನ ನೆರವು ವಿಷಯದ ಬಗ್ಗೆ ಎಂಎಸ್‌ಎಂಇ ಜಂಟಿ ನಿರ್ದೇಶಕ ದೇವರಾಜ್ ಎಂ ಮಾಹಿತಿ ನೀಡಲಿದ್ದಾರೆ.
ನೊಂದಣಿಯಾದವರಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ.
ಜಿಲ್ಲೆಯ ಎಲ್ಲಾ ಬೇಕರಿ ಇಂಡಸ್ಟ್ರಿಯ ಮಾಲೀಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು ಹಾಗೂ ಮಾರಾಟಗಾರರ ಸಂಘ (ರಿ.) ಬ್ರಹ್ಮಾವರ ಪ್ರಕಟಣೆ ನೀಡಿದೆ.