Advertisement

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌; ಕಂಚು ಗೆದ್ದ ಬಜರಂಗ್‌ ಪೂನಿಯ

11:06 PM Sep 19, 2022 | Team Udayavani |

ಹೊಸದಿಲ್ಲಿ: ಒಲಿಂಪಿಕ್‌ ಕಂಚು ವಿಜೇತ ಬಜರಂಗ್‌ ಪೂನಿಯ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಅಂತಿಮ ದಿನ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

Advertisement

65 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಅವರು ಪ್ಯುರ್ಟೊ ರಿಕೊದ ಸೆಬಾಸ್ಟಿ ಯನ್‌ ರಿವೆರಾ ಅವರನ್ನು 11-9 ಅಂಕಗಳಿಂದ ಮಣಿಸಿದರು. ಇದು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ನಲ್ಲಿ ಬಜರಂಗ್‌ ಗೆದ್ದ ನಾಲ್ಕನೇ ಪದಕ ವಾಗಿದೆ. ಅವರು ಈ ಮೊದಲು 2013 ಮತ್ತು 2019ರಲ್ಲಿ ಕಂಚು ಮತ್ತು 2018ರಲ್ಲಿ ಬೆಳ್ಳಿಯ ಪದಕ ಜಯಿ ಸಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಕಂಚು ಪಡೆದಿದ್ದರು.

ಅಮೆರಿಕದ ಜಾನ್‌ ಮೈಕಲ್‌ ದಿಯಾಕೊಮಿಹಾಲಿಸ್‌ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್‌ ಹೋರಾಟ ದಲ್ಲಿ ಬಜರಂಗ್‌ ಸೋಲನ್ನು ಕಂಡಿದ್ದರು. ಆದರೆ ರೆಪಚೇಜ್‌ ಸುತ್ತಿನಲ್ಲಿ ಅರ್ಮೆನಿಯದ ವಾಗೆನ್‌ ತೆವಾನ್ಯನ್‌ ಅವರನ್ನು 7-6 ಅಂತರದಿಂದ ಸೋಲಿಸಿದ್ದರಿಂದ ಕಂಚಿನ ಪದಕದ ಹೋರಾಟಕ್ಕೆ ಅರ್ಹತೆ ಗಳಿಸಿದ್ದರು. ಪ್ರಿ-ಕ್ವಾರ್ಟರ್‌ಫೈನಲ್‌ ಹೋರಾಟದ ವೇಳೆ ತಲೆಗೆ ಗಾಯವಾಗಿದ್ದರಿಂದ ಅವರು ತಲೆಗೆ ಬ್ಯಾಂಡೇಜ್‌ ಸುತ್ತಿ ಕಂಚಿನ ಪದಕದ ಹೋರಾಟದಲ್ಲಿ ಆಡಿದ್ದರು.

ಕೇವಲ 2 ಪದಕ
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 30 ಮಂದಿ ಸ್ಪರ್ಧಿಸಿದ್ದರು. ಆದರೆ ಭಾರತ ಕೇವಲ 2 ಕಂಚಿನ ಪದಕ ಗೆಲ್ಲಲು ಶಕ್ತವಾಯಿತು. ಬಜರಂಗ್‌ ಅವರಲ್ಲದೇ ವಿನೇಶ್‌ ಪೊಗಟ್‌ ವನಿತೆಯರ 53 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಅವರು ಸ್ವೀಡನ್‌ನ ಎಮ್ಮಾ ಮಾಲ್ಮಗ್ರೆನ್‌ ಅವರನ್ನು 8-0 ಅಂತರದಿಂದ ಕೆಡಹುವ ಮೂಲಕ ಈ ಸಾಧನೆ ಮಾಡಿದ್ದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ರವಿಕುಮಾರ್‌ ದಹಿಯಾ ಈ ಚಾಂಪಿಯನ್‌ಶಿಪ್‌ನಲ್ಲಿ ನಿರೀಕ್ಷಿತ ನಿರ್ವಹಣೆ ನೀಡಲು ವಿಫ‌ಲರಾಗಿದ್ದಾರೆ. ಅವರು ಆರಂಭದಲ್ಲಿಯೇ ಸೋತಿದ್ದರು. ತಂಡದ ಇತರ ಕುಸ್ತಿಪಟುಗಳು ಕೂಡ ಉತ್ತಮ ನಿರ್ವಹಣೆ ನೀಡಲು ಅಸಮರ್ಥರಾಗಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next