Advertisement
2023ರ ಫೆ.25ರಂದು ಆರ್.ಐ.ಡಿ.ಎಫ್ -24ರ ಅಡಿಯಲ್ಲಿ 40 ಲಕ್ಷ ರೂ.ವೆಚ್ಚದಲ್ಲಿ ಬಜಪೆ ಪಶು ಚಿಕಿತ್ಸಾಲಯದ ನೂತನ ಕಟ್ಟಡ ಉದ್ಘಾಟನೆಗೊಂಡಿತ್ತು. ಬಜಪೆ ಪಟ್ಟಣ ಪಂಚಾಯತ್‌ನ ಪೆರ್ಮುದೆ, ಎಕ್ಕಾರು ಗ್ರಾಮ ಪಂಚಾಯತ್ ಇದರ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ| ಅಶೋಕ್ ಅವರು ಗಂಜಿಮಠ ಪಶು ಚಿಕಿತ್ಸಾಲಯದ ಹಾಗೂ ತಾಲೂಕು ಸಹಾಯಕ ನಿರ್ದೇಶಕರಾಗಿ ಹೆಚ್ಚುವರಿ ಕಾರ್ಯ ಹಾಗೂ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಪೂರ್ಣ ಪ್ರಮಾಣದ ಪಶು ವೈದ್ಯಕೀಯ ಸೇವೆ ಲಭಿಸುತ್ತಿಲ್ಲ.
ಹೊಸದಾಗಿ ನಿರ್ಮಾಣವಾದ ಪಶು ಚಿಕಿತ್ಸಾಲಯದ ಎದುರೇ ಪಶು ವೈದ್ಯರ ವಸತಿ ಕಟ್ಟಡ ಇದೆ. ಹಿಂದೆ ಇಲ್ಲಿ ವಸತಿ ವೈದ್ಯರು ಕುಟುಂಬ ಸಮೇತ ವಾಸವಾಗಿದ್ದರು. ಆಗ ಇದರಿಂದ ಇಲ್ಲಿನ ಹೈನುಗಾರರಿಗೆ ಭಾರಿ ಪ್ರಯೋಜನ ಆಗುತ್ತಿತ್ತು. ಈಗ ನಿವಾಸಿ ವೈದ್ಯರು ಇಲ್ಲದೆ ಕಟ್ಟಡವೂ ಪಾಳುಬಿದ್ದಿದೆ ಮತ್ತು ಜನರಿಗೂ ಪ್ರಯೋಜನ ಸಿಗುತ್ತಿಲ್ಲ. ಹಳೆಯ ಕಟ್ಟಡವಾದ ಕಾರಣ ಸಂಪೂರ್ಣ ಶಿಥಿಲಗೊಂಡಿದೆಯೇ ಎಂದು ಇಲಾಖಾ ಎಂಜಿನಿಯರ್ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಒಂದೊಮ್ಮೆ ಯೋಗ್ಯವಾಗಿದ್ದರೆ ಅದರ ಸದ್ಬಳಕೆಗೆ ಕ್ರಮ ಕೈಗೊಳ್ಳಬಹುದು. ವೈದ್ಯರು ಇಲ್ಲವೇ ಸಿಬಂದಿಗೆ ಅದನ್ನು ಒದಗಿಸುವ ಚಿಂತನೆ ನಡೆಸಬಹುದು.
Related Articles
Advertisement
ಯಾಕೆ ತುರ್ತು ಅಗತ್ಯ?ಪೆರ್ಮುದೆ, ಎಕ್ಕಾರು, ಬಜಪೆ, ಕೊಳಂಬೆ ಪ್ರದೇಶದಲ್ಲಿ ಜಾನುವಾರು ಹಾಗೂ ನಾಯಿಗಳ ಮೇಲೆ ಚಿರತೆ ದಾಳಿ ಮಾಡುವ ಘಟನೆಗಳು ಹೆಚ್ಚುತ್ತಿವೆ. ಕೆಲವು ಚಿರತೆಗೆ ಬಲಿಯಾದರೆ ಕೆಲವು ಘಾಸಿಕೊಂಡಿವೆ. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವೂ ಇದೆ. ಕೆಲವೊಂದು ಜಾನುವಾರುಗಳು ತುರ್ತು ಚಿಕಿತ್ಸೆ ಸಿಗದೇ ಸಾವನ್ನಪ್ಪಿದೆ. ಇನ್ನೊಂದು ಹಳೆ ಕಟ್ಟಡವೂ ಪಾಳು
ಪಶು ಚಿಕಿತ್ಸಾಲಯದ ಎದುರು ಮೂಲೆಯಲ್ಲಿ ಇನ್ನೊಂದು ಕಳೆ ಕಟ್ಟಡವಿದೆ. ಅಲ್ಲಿ ಹಳೆ ಪೀಠೊಪಕರಣ ಮತ್ತು ಇತರ ವಸ್ತುಗಳನ್ನು ಹಾಕಲಾಗುತ್ತಿತ್ತು. ವೈದ್ಯರ ಕಾರು ಪಾರ್ಕಿಂಗ್‌ಗೆ ಮಾಡಲಾಗುತ್ತಿತ್ತು. ಈಗ ಕಟ್ಟಡ ಪಾಳು ಬಿದ್ದಿದ್ದು ಹೆಂಚುಗಳು ಹೋಗಿವೆ ಹಳೆ ಕಟ್ಟಡಗಳ ಉಪಯೋಗವಾಗಲಿ
– ಬಜಪೆ ಪಶು ಚಿಕಿತ್ಸಾಲಯದ ಹಳೆ ಕಟ್ಟಡವನ್ನು ಔಷಧಗಳ ದಾಸ್ತಾನಿಗೆ ಉಪಯೋಗಿಸಲಾಗುತ್ತಿದೆ. ಪಶು ಚಿಕಿತ್ಸೆಗೆ ಬೇಕಾಗಿರುವ ಆಪರೇಷನ್ ಕೊಠಡಿಗಾಗಿ ಈ ಕಟ್ಟಡವನ್ನು ಬಳಸಲು ಅವಕಾಶವಿದೆ.
– ಪಶು ಚಿಕಿತ್ಸಾಲಯಕ್ಕೆ ಖಾಯಂ ವೈದ್ಯರು ಮತ್ತು ಸಿಬಂದಿ ಬೇಕು.
– 24×7 ಪಶು ಚಿಕಿತ್ಸಾಲಯದ ಬಗ್ಗೆ ಈಗಲೇ ಯೋಜನೆ ಸಿದ್ಧವಾಗಬೇಕು -ಸುಬ್ರಾಯ ನಾಯಕ್ ಎಕ್ಕಾರು