Advertisement

ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರ: ಖಾಯಂ ವೈದ್ಯರೇ ಇಲ್ಲ

06:20 AM Aug 13, 2017 | |

ಬಜಪೆ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಿಸುವುದಿರಲಿ, ಈಗಿರುವ ಕೇಂದ್ರದಲ್ಲೇ ವೈದ್ಯರಿಲ್ಲದೇ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದಾರೆ. ನೂತನ ಕಟ್ಟಡ ಕಾಮಗಾರಿಗೆ ಮಾ.26 ರಂದು ಚಾಲನೆ ನೀಡ ಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲೆªರ್ಜೆಗೇರಿ, ಇಲ್ಲಿನ ಜನರ ಬಹುಕಾಲದ ಬೇಡಿಕೆ ಶೀಘ್ರವೇ ಈಡೇರಬಹುದು ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಕೇಂದ್ರದ ಬಹುತೇಕ ಹುದ್ದೆಗಳು ಭರ್ತಿ ಯಾಗಿಲ್ಲ. ಇಲ್ಲಿ ಖಾಯಂ ವೈದ್ಯರೇ ಇಲ್ಲದಂತಾಗಿದೆ. ಇಲ್ಲಿ ವೈದ್ಯರು ಸಹಿತ ಹಿರಿಯ ಪುರುಷ ಆರೋಗ್ಯ ಸಹಾಯಕ-1, ಕಿರಿಯ ಪುರುಷ ಆರೋಗ್ಯ ಸಹಾಯ ಕರು-5, ಕಿರಿಯ ಆರೋಗ್ಯ ಸಹಾಯಕಿ -1, ಕಿರಿಯ ಮಹಿಳಾ ಆರೋಗ್ಯ ಸಹಾ ಯಕಿ-1 ಇದೆ. ಉಳಿದ ಕೆಲವು ಹುದ್ದೆ ಗಳಲ್ಲಿ ಸಿಬಂದಿ ಕೆಲವು ದಿನ ಮಾತ್ರ ಇಲ್ಲಿ ಲಭ್ಯರಿರುತ್ತಾರೆ.

Advertisement

ವೈದ್ಯರ ನಿಯೋಜನೆ
ಕೇಂದ್ರದಲ್ಲಿ  ಬೊಂದೇಲ್‌ ಪ್ರಾಥ ಮಿಕ ಆರೋಗ್ಯ ಕೇಂದ್ರದ ವೈದ್ಯರು ವಾರಕ್ಕೆ ಎರಡು ದಿನ ಮಾತ್ರ ಲಭ್ಯರಿ ರುತ್ತಾರೆ. 27 ಹುದ್ದೆಗಳಲ್ಲಿ ಸರಿ ಸುಮಾರು ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಒಬ್ಬರು ಸರಕಾರದ ಸುತ್ತೋಲೆ ಪ್ರಕಾರ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರು ಬೇರೆಡೆ ವರ್ಗಾವಣೆಗೊಂಡಿದ್ದಾರೆ. ಸ್ಟಾಫ್ ನರ್ಸ್‌ ಒಬ್ಬರು, ಲ್ಯಾಬ್‌ ಟೆಕ್ನೀಷಿಯನ್‌ ಒಬ್ಬರು, ಮೆಡಿಸಿನ್‌ ವಿಭಾಗದಲ್ಲಿ  ಒಬ್ಬರು ಮೂರುದಿನ  ಜಿಲ್ಲಾ  ಟಿ.ಬಿ. ಸೆಂಟರ್‌ಗೆ ಹೋಗುತ್ತಿದ್ದಾರೆ. ಗ್ರೂಪ್‌ ಡಿ ದರ್ಜೆಯ ಇಬ್ಬರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನಿಬ್ಬರಲ್ಲಿ ಒಬ್ಬರು ಒಒಡಿ ಮತ್ತು ತಾಲೂಕು ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ವಾಹನ ಇಲ್ಲದ ಕಾರಣ, ಇಲ್ಲಿನ ಚಾಲಕ ಬೇರೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.ಕರ್ನಾಟಕ ಆರೋಗ್ಯ ಪದ್ಧತಿ ಅಭಿ ವೃದ್ಧಿ ಮತ್ತು ಸುಧಾರಣಾ ಯೋಜನೆ ಯಡಿ 1.45ಕೋಟಿ ರೂ. ವೆಚ್ಚದಲ್ಲಿ 6ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ ನಡೆಯುತ್ತಾ ಇದೆ. 

ಮಳೆಗಾಲ ಶೀತ, ಜ್ವರ, ಮಲೇರಿಯಾ, ಡೆಂಗ್ಯೂ ಕಾಣಿಸಿಕೊಳ್ಳುವ ಕಾಲವಾಗಿದೆ. ಹಾಗಾಗಿ ಹೆಚ್ಚಿನಡೆ ಶೀತ ನೆಗಡಿ, ಕೆಮ್ಮು, ಜ್ವರ ಹಾಗೂ ಮಲೇರಿಯಾ, ಡೆಂಗ್ಯೂ ಭಯ ಆವರಿಸಿದೆ. ಹೀಗಾಗಿ ಆರೋಗ್ಯ ಕೇಂದ್ರಗಳಲ್ಲಿನ ಸಮಸ್ಯೆಗಳು° ಸರಿಪಡಿಸ ಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ವಲಸೆ ಕಾರ್ಮಿಕರು
ವಲಸೆ ಬಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಂಎಸ್‌ಇ ಝಡ್‌ ಹಾಗೂ ಎಂಆರ್‌ಪಿಎಲ್‌ ಕಂಪೆನಿಗಳು ಈ ವ್ಯಾಪ್ತಿಯಲ್ಲಿ ಇದ್ದು, ಇದರ ಹೆಚ್ಚಿನ ಕಾರ್ಮಿಕರು ವಲಸೆ ಬಂದವರು. ಇವರಿಗೆ ಆರೋಗ್ಯ ಕುರಿತು ಮಾಹಿತಿ ಕೊರತೆಯೂ ಎದ್ದು ಕಾಣುತ್ತಿದೆ. ಈಗಾ ಗಲೇ ಗ್ರಾಮ ಸಭೆಗಳಲ್ಲಿ ಖಾಯಂ ವೈದ್ಯ ರನ್ನು ನೇಮಿಸುವಂತೆ ಆಗ್ರಹಿಸಿದ್ದು, ಜಿಲ್ಲಾ ಡಳಿತ ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಗ್ರಹ.

ಗ್ರಾಮಗಳ ವ್ಯಾಪ್ತಿ
ಪಂಚಾಯತ್‌ 8 ಗ್ರಾಮಗಳನ್ನೊಳಗೊಂಡಿದೆ. ಪೆರ್ಮುದೆ ಗ್ರಾಮ ಪಂಚಾಯತ್‌ನ ಪೆರ್ಮುದೆ ಗ್ರಾಮ, ಪಡುಪೆರಾರ ಗ್ರಾಮ ಪಂಚಾಯತ್‌ನ ಪಡುಪೆರಾರ ಮತ್ತು ಮೂಡುಪೆರಾರ ಗ್ರಾಮ. ಕಂದಾವರ ಗ್ರಾಮ ಪಂಚಾಯತ್‌ನ ಕಂದಾವರ, ಕೊಳಂಬೆ ಮತ್ತು ಅದ್ಯಪಾಡಿ ಗ್ರಾಮ, ಬಜಪೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಜಪೆ ಗ್ರಾಮಗಳು ಬರುತ್ತವೆ. 42,000 ಜನಸಂಖ್ಯೆಯನ್ನೊಳಗೊಂಡಿದೆ.  36 ಅಂಗನವಾಡಿಗಳು, 16 ಆಶಾಕಾರ್ಯಕರ್ತೆಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 14 ಆಶಾಕಾರ್ಯಕರ್ತೆಯರ ಅವಶ್ಯಕತೆ ಇಲ್ಲಿದೆ.

Advertisement

ವೈದ್ಯರ ನೇಮಕ ಮಾಡಬೇಕು 
ಬಜಪೆ ಪರಿಸರದಲ್ಲಿ ಯಾವುದೇ ಆಸ್ಪತ್ರೆಗಳು ಇಲ್ಲ.ತುರ್ತು ಚಿಕಿತ್ಸೆಗೆ  ಮಂಗಳೂರಿಗೆ ಹೋಗಬೇಕು.ರಾತ್ರಿ ಹಾಗೂ ರವಿವಾರ ಯಾರೂ ಖಾಸಗಿ ವೈದ್ಯರೂ ಸಿಗುವುದಿಲ್ಲ. ಬೇರೆಡೆಗಳಿಂದ ಬಂದ ಕಾರ್ಮಿಕರು ಇಲ್ಲಿ ಇದ್ದಾರೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ  ಇದೆ.ಖಾಯಂ ವೈದ್ಯರನ್ನು ನೇಮಕ ಮಾಡಬೇಕು.
ಜೋಕಿಂ ಡಿಕೋಸ್ತಾ, ಮಾಜಿ ಸದಸ್ಯ, ತಾ.ಪಂ. ಸದಸ್ಯ 

Advertisement

Udayavani is now on Telegram. Click here to join our channel and stay updated with the latest news.

Next