Advertisement

Bajpe: ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಮಾದಕ ವಸ್ತು ಸಾಗಾಟ… ಓರ್ವನ ಬಂಧನ, ಸೊತ್ತು ವಶ

10:24 AM Aug 03, 2023 | Team Udayavani |

ಬಜಪೆ:ಮಂಗಳೂರು ನಗರದಾದ್ಯಂತ “ಮಾದಕ ವ್ಯಸನ ಮುಕ್ತ ಮಂಗಳೂರು’ ಮಾಡುವ ನಿಟ್ಟಿನಲ್ಲಿ ಮೇಲಾಧಿ ಕಾರಿಗಳು ನೀಡಿದ ಸೂಚನೆಯಂತೆ ಬಜಪೆ ಠಾಣಾ ಪೊಲೀಸರು ಮುರ ನಗರದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಧ್ಯಾಹ್ನ 3.15ರ ಸಮಯಕ್ಕೆ ನಂಬರ್‌ ಫ್ಲೆಟ್‌ ಇಲ್ಲದ ಸ್ವಿಫ್ಟ್‌ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆಯಿತು.

Advertisement

ತತ್‌ಕ್ಷಣ ಪೊಲೀಸರು ಕಾರಿನ ಬಳಿ ತೆರಳಿ ಸೂರಿಂಜೆ ಕಿನ್ನಿಗುಡ್ಡೆ ಹೌಸ್‌ ನಿವಾಸಿ ಅಬ್ದುಲ್‌ ಅಝೀಜ್‌ (34)ನನ್ನು ವಶಕ್ಕೆ ಪಡೆದರು. ಕಾರನ್ನು ಪರಿಶೀಲನೆ ಮಾಡಿದಾಗ 250 ಗ್ರಾಂ ತೂಕದ ಮಾದಕ ವಸ್ತು ಚರಸ್‌ ಪತ್ತೆಯಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.

ಆತನ ಬಗ್ಗೆ ವಿಚಾರಿಸಿದಾಗ ಮೂಡುಬಿದಿರೆ ತೋಡಾರು ನಿವಾಸಿ ಕ್ಯಾಬರೇ ಫೈಜಲ್‌ ಎಂದು ತಿಳಿದು ಬಂದಿದೆ. ಆತನ ಪತ್ತೆಗಾಗಿ ಪೊಲೀಸರು ವ್ಯಾಪಕ ಕಾರ್ಯಚರಣೆ ನಡೆಸುತ್ತಿದ್ದಾರೆ. ಆರೋಪಿಯಿಂದ ಸುಮಾರು 7 ಲಕ್ಷ ರೂ. ಮೌಲ್ಯದ ಚರಸ್‌ ಮತ್ತು ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬಜಪೆ ಠಾಣಾ ಪಿ.ಐ. ಪ್ರಕಾಶ್‌ ನೇತೃತ್ವದ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next