Advertisement
ಡಾ.ಪ್ರಸಾದ್ ಅವರು ಕನ್ನಡದಲ್ಲಿ “ಅಪ್ಪಾ, ಐ ಲವ್ ಯು,” “ಸಾಲುತ್ತಿಲ್ಲವೇ” ಮತ್ತು ಅಧ್ಯಕ್ಷ ಹಾಡುಗಳನ್ನು ಒಳಗೊಂಡಂತೆ 3,000 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ.
Related Articles
Advertisement
“ಜನರು ತಮ್ಮ ಕೆಲಸವು ಸಮಾಜಕ್ಕೆ ಒಪ್ಪಿಗೆಯಾಗುತ್ತಿದೆಯೋ ಇಲ್ಲವೋ ಎಂದು ತಿಳಿಯಲು ಇತರರ ಅಭಿಪ್ರಾಯಗಳನ್ನು ಕಾಯಬೇಕಾಗಿಲ್ಲ, ಇಂದು ಸಾಮಾಜಿಕ ಮಾಧ್ಯಮವು ನಿಮ್ಮ ಕೆಲಸದ ಬಗ್ಗೆ ತ್ವರಿತ ಮೌಲ್ಯಮಾಪನ ಮತ್ತು ವಿಮರ್ಶೆಗಳನ್ನು ಒದಗಿಸಿಕೊಡುತ್ತದೆ ಎಂದು ಸಾಮಾಜಿಕ ಜಾಲತಾಣಗಳ ವರದಾನದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಂಗೀತದ ವೃತ್ತಿಜೀವನದಲ್ಲಿ ಶ್ರದ್ಧೆ ಮತ್ತು ನಿರಂತರ ಅಭ್ಯಾಸವು ಯಶಸ್ಸಿಗೆ ಪ್ರಮುಖವಾಗಿದೆ ಎಂದು ಪ್ರಸಾದ್ ಪ್ರತಿಪಾದಿಸಿದ್ದಾರೆ.
ಬಜರಂಗಿಗಾಗಿ ಅವರು ಶ್ರೀ ಕೃಷ್ಣ ಹಾಡನ್ನು ಬರೆದ ಸಮಯವನ್ನು ನೆನಪಿಸಿಕೊಂಡ ಡಾ.ಪ್ರಸಾದ್, “ಈ ಹಾಡಿನಲ್ಲಿ ಭಗವಾನ್ ಕೃಷ್ಣ ಮತ್ತು ಹನುಮನನ್ನು ಒಂದೇ ಹಾಡಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಅನೇಕ ಜನರು ಗಮನಿಸಲಿಲ್ಲ, ವಾಸ್ತವದಲ್ಲಿ ಅವರಿಬ್ಬರೂ ವಿಭಿನ್ನ ಯುಗಗಳಿಗೆ ಸೇರಿದವರಾಗಿದ್ದಾರೆ ಮತ್ತು ಹನುಮಾನ್ ಯಾವಾಗಲೂ ಭಗವಾನ್ ರಾಮನ ಹೆಸರಿನ ಜೊತೆ ಜಒತೆಯಲ್ಲೇ ಇರುತ್ತಾನೆ ಎಂದು ಅಭಿಪ್ರಾಯ ಪಟ್ಟರು.
ಅವರ ಮುಂಬರುವ ಯೋಜನೆಗಳ ಬಗ್ಗೆ, ಈ ವರ್ಷ ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳಿಗಾಗಿ ಅವರು ಬರೆದ ಹಾಡುಗಳು, ವಿವಿಧ ಸೆಲೆಬ್ರಿಟಿಗಳೊಂದಿಗಿನ ಅವರ ಸ್ನೇಹ ಮತ್ತು ಸಿನಿ-ಗಾಸಿಪ್ ಗಳ ಉದಯವಾಣಿ ಬಳಗದೊಂದಿಗೆ ಹಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.