ಬಜಾಜ್ ಆಟೋ ಭಾರತದಲ್ಲಿ ಬಜಾಜ್ ಪ್ಲಾಟಿನಾ 110 ಎಚ್-ಗೇರ್ ಬೈಕ್‌ನ್ನು ಬಿಡುಗಡೆಗೊಳಿಸಿದೆ. ಈ ಪ್ಲಾಟಿನಾ 110 ಎಚ್-ಗೇರ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಪ್ಲಾಟಿನಾ 110 ಎಚ್-ಗೇರ್ ಅತ್ಯಂತ ಆರಾಮದಾಯಕ ಪ್ಲಾಟಿನಾ ಎಂದು ಹೇಳಲಾಗಿದೆ. ಹೊಸ ವಿನ್ಯಾಸದ ಈ ಬೈಕ್‌ನಲ್ಲಿರುವ ವಿಶೇಷ ಹೈ-ಗೇರ್ ಹೆದ್ದಾರಿ ಸವಾರಿಯಲ್ಲಿ ಸುಧಾರಿತ ವಿದ್ಯುತ್ ಮತ್ತು ಇಂಧನದ ಖರ್ಚಿನ ಹೊರೆ ತಗ್ಗಿಸುತ್ತದೆ. ಈ ಬೈಕ್ 115 ಸಿ.ಜಿ. ಎಂಜಿನ್ ಹೊಂದಿದ್ದು, 8.4 ಬಿಎಚ್‌ಪಿ ಗರಿಷ್ಠ ಶಕ್ತಿಯನ್ನು 7,000 ಆರ್‌ಪಿಎಂ ಮತ್ತು 5,000 ಆರ್‌ಪಿಎಮ್‌ನಲ್ಲಿ 9.81 ಎನ್‌ಎಂ ಮಾಕ್ಸ್ ಟೋರ್ಕ್‌ನ್ನು ಹೊಂದಿದೆ. ಎಂಜಿನ್ 5 ಸ್ಪೀಡ್ ಗೇರ್ ಬಾಕ್ಸ್‌ಗೆ ಸಂಬಂಧಿಸಿದೆ. ಈ ಬೈಕ್‌ನ ಬೆಲೆ ಡ್ರಮ್ ವೆರಿಯಂಟಾಗಿ 53, 376 ರೂ. ಮತ್ತು ಡಿಸ್ಕ್ ರೂರೆಂಟ್‌ಗೆ 55,373 ರೂ. ನಿಂದ ಭಾರತದ ಮಾರುಕಟ್ಟೆಯಲ್ಲಿ ಪ್ರಾರಂಭವಾಗುತ್ತದೆ.
ಫೋರ್ಡ್ ಇಕೊ ನ್ಪೋರ್ಟ್ಸ್ ಥಂಡರ್
ಫೋರ್ಡ್ ಕಾರು ತಯಾರಕರು ಟಾಟಾ ಟಾಟಾ ನೆಕ್ಸಾನ್, ಮಾರುತಿ ವಿಟಾರಾ ಬ್ರೆಸ್ಸಾ, ಹುಂಡೈ ವೆನ್ಯು ಮತ್ತು ಮಾಹೇಂದ್ರಾ ಎಕ್ಸ್‌ಯುವಿ 300 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಇಕೊ ಸ್ಪೋರ್ಟ್ಸ್ ಥಂಡರ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಈ ಮಾಡೆಲ್ ಡ್ಯುಯೆಲ್ ಟೋನ್ ಬಣ್ಣಗಳಲ್ಲಿ ಇರಲಿದೆ. ಇದರ ಮಿರರ್, ಮುಂಭಾಗದ ಗ್ರಿಲ್, ಫಾಗ್ ಲ್ಯಾಂಪ್ ಬೆಝೆಲ್, ಬಾನೆಟ್‌ಗಳಲ್ಲಿ ಕಪ್ಪು ಬಣ್ಣವನ್ನು ಬಳಸಲಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಸನ್ ರೋಫ್ ಅಳವಡಿಸಲಾಗಿದೆ. ಇದರಲ್ಲಿ 9ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ. ಇದರಿಂದ ಮೊಬೈಲನ್ನು ಬ್ಲೂಟೂತ್ ಅನ್ನು ಸಂಪರ್ಕಿಸುವ ಮೂಲಕ ಕಾರಿನಲ್ಲಿ ಮೊಬೈಲ್‌ನ ಮ್ಯಾಪ್, ವಾಯ್ಸ ಕಮಾಂಟ್ ಮೂಲಕ ಕರೆಗಳನ್ನು ಸ್ವೀಕರಿಸಬಹುದು. ಇದಕ್ಕೆ 1.5 ಲೀಟರ್ ಟಿಐವಿಸಿಟಿ ಮತ್ತು 1.5 ಲೀಟರ್ ಟಿಡಿಸಿಐ ಎಂಜಿನ್‌ಳನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋರೂಂ ಬೆಲೆ 10.18 ಲಕ್ಷಗಳಿಂದ ಶುರುಮಾಗಲಿದೆ.