Advertisement

ಬೈರಾಗಿ ಹಾಡು ಬಂತು: ಶಿವಣ್ಣ-ಶರಣ್ ಗಾನ ಬಜಾನ

01:18 PM Jun 03, 2022 | Team Udayavani |

ಶಿವರಾಜ್‌ಕುಮಾರ್‌ ನಟನೆಯ “ಬೈರಾಗಿ’ ಚಿತ್ರ ರಿಲೀಸ್‌ ಅಖಾಡಕ್ಕೆ ಇಳಿದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈಗ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

“ಡಾಲಿ’ ಧನಂಜಯ್‌ ಹಾಗೂ ಪೃಥ್ವಿ ಅಂಬರ್‌ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಮತ್ತೂಂದು ಹಾಡು ರಿಲೀಸ್‌ ಆಗಿದೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿರುವ ಈ ಹಾಡು ಶಿವರಾಜ್‌ ಕುಮಾರ್‌ ಮತ್ತು ಶರಣ್‌ ಕಂಠಸಿರಿಯಲ್ಲಿ ಮೂಡಿಬಂದಿರೋದು ವಿಶೇಷ. “ವಜ್ರಕಾಯ’ ಬಳಿಕ ಶಿವಣ್ಣನ ಸಿನಿಮಾಕ್ಕೆ ಶರಣ್‌ ದನಿಗೂಡಿಸಿದ್ದಾರೆ. ಪ್ರಮೋದ್‌ ಮರವಂತೆ ಸಾಹಿತ್ಯವಿರುವ “ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ…’ ಎಂಬ ಹಾಡು ಸಿಂಗಲ್‌ ಶಾಟ್‌ನಲ್ಲಿ ಶೂಟ್‌ ಮಾಡಿರುವುದು ಮತ್ತೂಂದು ವಿಶೇಷ.

ಹಾಡು ಮಾಸ್‌ ಪ್ರಿಯರನ್ನು ಹೆಚ್ಚೆಚ್ಚು ಸೆಳೆಯುತ್ತಿದೆ. “ರಿದಮ್‌ ಆಫ್ ಶಿವಪ್ಪ’ ಕಾನ್ಸೆಪ್ಟ್’ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ “ಬೈರಾಗಿ’ ತಂಡ ಹೆಜ್ಜೆ ಹಾಕಿದ್ದು, ದೇವನಹಳ್ಳಿ ಬಳಿಯಿರುವ ನೂತನ ಮಾಲ್ ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮುರಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ “ನಖರನಖ’ ಹಾಡಿಗೆ ಆ್ಯಂಥೋನಿ ದಾಸ್‌ ದನಿಗೂಡಿಸಿದ್ದರು.

ಇದನ್ನೂ ಓದಿ:ಉತ್ತರಾಖಂಡ್ ಚಂಪಾವತ್ ಉಪಚುನಾವಣೆ: ಪುಷ್ಕರ್ ಸಿಂಗ್ ಗೆ ಭರ್ಜರಿ ಜಯ, ಠೇವಣಿ ಕಳೆದುಕೊಂಡ “ಕೈ”

ಇದೀಗ “ಸಂಡೆ-ಮಂಡೆ’ ಹಾಡು ಶಿವಣ್ಣ-ಶರಣ್‌ ದನಿಯಲ್ಲಿ ಮೂಡಿಬಂದಿದ್ದು ಜೆ.ಪಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್ ನಲ್ಲಿ ರಿಲೀಸ್‌ ಆಗಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಹಿಟ್ಸ್‌ ದಾಖಲಿಸಿ ಟ್ರೆಂಡಿಂಗ್‌ನಲ್ಲಿದೆ.

Advertisement

ವಿಜಯ್‌ ಮಿಲ್ಟನ್‌ ನಿರ್ದೇಶನವಿರುವ ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್‌, ಅನು ಪ್ರಭಾಕರ್‌, ಅಂಜಲಿ, ಯಶ ಶಿವಕುಮಾರ್‌, ಚಿಕ್ಕಣ್ಣ ಮೊದಲಾದವರ ನಟಿಸಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ಕೃಷ್ಣ ಸಾರ್ಥಕ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಜಿ.ಎಸ್.ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next