ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇಗುಲಕ್ಕೆ ಸಂಬಂಧಪಟ್ಟ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಗುರುವಾರ ಆಲಯ ಪರಿಗ್ರಹ, ಶಿಲ್ಪಿ ಮಾರ್ಯದೆ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸಪ್ತ ಶುದ್ಧಿ, ವಾಸ್ತು ಪೂಜೆ ನಡೆಯಿತು.
ಬೆಳ್ಳಿಯಿಂದ ತಯಾರಿಸಲಾದ ಮೂಲ ಮಹಿಷಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ಮೂರ್ತಿ ಮತ್ತು ಆಯುಧಗಳನ್ನು ಮೆರವಣಿಗೆಯಲ್ಲಿ ತಂದು ದೈವಸ್ಥಾನಕ್ಕೆ ಸಮರ್ಪಿಸಲಾಯಿತು.
ತಂತ್ರಿಗಳಾದ ವೇ| ಮೂ| ವಿ| ಕೆ.ಎ. ರಮಣ ತಂತ್ರಿ ಕೊರಂಗ್ರಪಾಡಿ, ವೇ| ಮೂ| ವಿ| ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ ಅವರ ನೇತೃತ್ವದಲ್ಲಿ ಮಾ. 17ರಂದು ನೂತನ ಶಿಲಾಮಯ ಆಲಯದಲ್ಲಿ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ. ಅನಂತರ ಅನ್ನಸಂತರ್ಪಣೆ, ನೇಮ ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
Related Articles
ಮೆರವಣಿಗೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ತಂತ್ರಿಗಳಾದ ರಮಣ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಭಟ್, ರಮೇಶ ಶೆಟ್ಟಿ, ನವೀನ ಭಂಡಾರಿ, ಬೈಲೂರು ದೇವಳದ ಮೊಕ್ತೇಶ್ವರ ಮೋಹನ್ ಮುದ್ದಣ ಶೆಟ್ಟಿ, ಕಿರಣ ಕುಮಾರ್ ಬೈಲೂರು, ಅರುಣ ಶೆಟ್ಟಿಗಾರ್, ಸುದರ್ಶನ ಶೇರಿಗಾರ್, ಜಯಕರ ಶೆಟ್ಟಿ ಇಂದ್ರಾಳಿ, ಕೃಷ್ಣರಾಜ್ ಕೊಡಂಚ, ಶ್ರೀನಿವಾಸ ಆಚಾರ್ಯ, ದುರ್ಗಾ ದಾಸ್, ಗೋಪಾಲ್ ಕೃಷ್ಣ ಬಲ್ಲಾಳ, ಸದಾನಂದ ಶೆಟ್ಟಿ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
17ರಂದು ಸಂಜೆ 6ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಪಯ್ಯನೂರು ಜ್ಯೋತಿಷ್ಯ ವಾಚಸ್ಪತಿ ದೈವಜ್ಞ ಎ.ವಿ. ಮಾಧವನ್ ಪೊದುವಾಳ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ.ನಾಡೋಜ ಜಿ.ಶಂಕರ, ಉದ್ಯಮಿ ಶಶಿಧರ ಶೆಟ್ಟಿ, ಉದ್ಯಮಿ ಭರತ್ ಎಂ.ಶೆಟ್ಟಿ, ಶಾಸಕ ಕೆ.ರಘುಪತಿ ಭಟ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ನಗರಸಭಾ ಸದಸ್ಯ ಕೃಷ್ಣರಾವ್ ಕೊಡಂಚ, ಬೈಲೂರು ನಗರಸಭಾ ಸದಸ್ಯ ವಿಜಯ್ ಪೂಜಾರಿ ಪಾಲ್ಗೊಳ್ಳಲಿದ್ದಾರೆ. ಎಂ.ಆರ್.ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 6ಗಂಟೆಗೆ ಭಂಡಾರ ಇಳಿಯುವುದು, ಸಭಾ ಕಾರ್ಯಕ್ರಮ, ರಾತ್ರಿ 9ಗಂಟೆಗೆ ಮಹಿಷಾಂತಾಯ ನೇಮ, ರಾತ್ರಿ 10ಗಂಟೆಯಿಂದ ಧೂಮಾವತಿ, ಬಂಡ ನೇಮೋತ್ಸವ ನಡೆಯಲಿದೆ. ಶನಿವಾರ (ಮಾರ್ಚ್ 18) ಬೆಳಗ್ಗೆ ಪಂಜುರ್ಲ ದೈವದ ನೇಮ.