Advertisement

ಬೈಲಹೊಂಗಲ ತಾಲೂಕು ಸಾಹಿತ್ಯ ಸಮ್ಮೇಳನ

04:53 PM Jan 23, 2021 | Team Udayavani |

ಬೈಲಹೊಂಗಲ: ಐತಿಹಾಸಿಕ ನಾಡು, ಶರಣರ ಬೀಡಾದ ಬೈಲಹೊಂಗಲ ತಾಲೂಕಿನ ಯರಡಾಲದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಜ.23 ರಂದು ತಾಲೂಕು 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಗ್ರಾಮದ ಪ್ರಮುಖ ಸ್ಥಳಗಳನ್ನು ತಳಿರು-ತೋರಣದಿಂದ ಶೃಂಗರಿಸಲಾಗಿದ್ದು, ಸಾರೋಟು ವಾಹನದಲ್ಲಿ ಮೆರವಣಿಗೆ ಮೂಲಕ ಸಮ್ಮೇಳನದ ಸರ್ವಾಧ್ಯಕ್ಷೆ ಅನ್ನಪೂರ್ಣಾ ಕನೋಜರನ್ನು ವೇದಿಕೆಗೆ ಕರೆತರಲಾಗುವುದು. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ಗೋಧಿ  ಹುಗ್ಗಿ, ಅನ್ನ-ಸಾರು, ಮಿರ್ಚಿ ಬಜ್ಜಿ ಸವಿಯಲಿದ್ದಾರೆ. ಚಿಂತನಗೋಷ್ಠಿ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿವೆ.

Advertisement

ಗ್ರಾಮದ ಹಿನ್ನೆಲೆ: ಬೈಲಹೊಂಗಲ ಪಟ್ಟಣದಿಂದ ಎಂ.ಕೆ. ಹುಬ್ಬಳ್ಳಿ ಮಾರ್ಗದಲ್ಲಿ ಸುಮಾರು 10 ಕಿ.ಮೀ. ಅಂತರದಲ್ಲಿರುವ ಈ ಗ್ರಾಮವು ಚೆನ್ನಮ್ಮನ ಕಿತ್ತೂರು ಮತಕ್ಷೇತ್ರ ಹಾಗೂ ಕೆನರಾ ಲೋಕಸಭಾ ಪ್ರದೇಶ ವ್ಯಾಪ್ತಿಗೆ ಬರುತ್ತದೆ. ಎರಡು ಆಲದ ಮರಗಳು ಇಲ್ಲಿ ಇದ್ದುದರಿಂದ ಬಸವಾದಿ ಶರಣರು ಬಸವ ಕಲ್ಯಾಣದಿಂದ ಸುಕ್ಷೇತ್ರ ಉಳವಿ ಕಡೆಗೆ ಅಮೋಘವಾದ ವಚನ ಸಾಹಿತ್ಯ ಸಾಗಿಸುವಾಗ ವಿಶ್ರಾಂತಿ ಪಡೆದು ಹೊರಟಾಗ ಯರಡಾಲ ಎಂಬ ನಾಮಕರಣ ಮಾಡಿ ಹೋಗಿದ್ದಾರೆಂಬ ಪ್ರತೀತಿ ಇದೆ.

ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಮರಡಿ ಬಸವೇಶ್ವರ ಹಾಗೂ ಶ್ರೀ ಗುರು ಮಡಿವಾಳೇಶ್ವರ ದೇವಸ್ಥಾನಗಳು ಭಕ್ತರನ್ನು ಆಕರ್ಷಿಸುತ್ತವೆ. ಗ್ರಾಮವು ಇದೀಗ ಕನ್ನಂಡಾಬೆ ಜಾತ್ರೆಗೆ ಸಜ್ಜಾಗಿದ್ದು, ಗ್ರಾಮದ ಜನರು ಸಮ್ಮೇಳನ ಯಶಸ್ವಿಯಾಗಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ಕಾರ್ಯಕ್ರಮದ ವಿವರ: ಯರಡಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ನಿರ್ಮಿಸಲಾಗಿರುವ ದಿ. ಮುಗುಟಸಾಬ್‌ ಮುಲ್ಲಾ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿವೆ. ಬೆಳಗ್ಗೆ 8 ಗಂಟೆಗೆ ನಿವೃತ್ತ ಶಿಕ್ಷಕ ಬಸಪ್ಪ ತಿಗಡಿ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್‌ ಪರಿಷತ್‌ ಧ್ವಜಾರೋಹಣ, ಗೌರಾದೇವಿ ತಾಳಿಕೋಟಿಮಠ ನಾಡಧ್ವಜಾರೋಹಣವನ್ನು ನೆರವೇರಿಸುವರು.

ಇದನ್ನೂ ಓದಿ:ಸರ್ಚ್ ಎಂಜಿನ್ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ: ಆಸ್ಟ್ರೇಲಿಯಾಕ್ಕೆ ಗೂಗಲ್ ಬೆದರಿಕೆ

Advertisement

8-30 ಕ್ಕೆ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ವೇ.ಮೂ.ದುಂಡಯ್ಯಸ್ವಾಮಿ ಹಿರೇಮಠ ಪೂಜೆ ಸಲ್ಲಿಸುವರು. 10-30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೈಲಹೊಂಗಲ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ನೇಗಿನಹಾಳದ ಶ್ರೀ ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಮಹಾಂತೇಶ ದೊಡಗೌಡರ ಅಧ್ಯಕ್ಷತೆ, ಶಾಸಕ ಮಹಾಂತೇಶ ಕೌಜಲಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮಾಜಿ ಲೋಕಸಭಾ ಸದಸ್ಯ ಎಸ್‌.ಬಿ. ಸಿದ್ನಾಳ ಗ್ರಂಥ ಲೋಕಾರ್ಪಣೆ ಮಾಡಲಿದ್ದು, ಸಮ್ಮೇಳನಾಧ್ಯಕ್ಷತೆಯನ್ನು ಅನ್ನಪೂರ್ಣ ಕನೋಜ ವಹಿಸಲಿದ್ದಾರೆ.

ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next