Advertisement

ಬೈಲಹೊಂಗಲ ಪುರಸಭೆ ಉಳಿತಾಯ ಬಜೆಟ್‌

02:10 PM Apr 01, 2022 | Team Udayavani |

ಬೈಲಹೊಂಗಲ: 2022-23 ನೇ ಸಾಲಿನ ಪುರಸಭೆಯ 2.19 ಲಕ್ಷ ರೂ. ಉಳಿತಾಯ ಬಜೆಟ್‌ನ್ನು ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಮಂಡಿಸಿದರು.

Advertisement

ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆದ ಪುರಸಭೆಯ 2022-23 ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಬಜೆಟ್‌ ಮಂಡಿಸಿ ಮಾತನಾಡಿ, ರಾಜ್ಯ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಅನುದಾನಗಳನ್ನು ಸದ್ಭಳಕೆ ಮಾಡಿಕೊಂಡು ಪಟ್ಟಣದ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನುಸುವ್ಯವಸ್ಥಿತವಾಗಿ ಪೂರೈಸುವ ದಿಶೆಯಲ್ಲಿ ಸೌಂದರ್ಯೀಕರಣ ಹೆಚ್ಚಿಸಿ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ನಾಗರೀಕರಿಗೆ ಸಮರ್ಪಕವಾದ ಕುಡಿಯುವ ನೀರು, ನಗರ ನೈರ್ಮಲೀಕರಣ, ಬೀದಿ ದೀಪಗಳ ವ್ಯವಸ್ಥಿತ ನಿರ್ವಹಣೆ, ಉದ್ಯಾನವನಗಳ ನಿರ್ಮಾಣ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರ ಕೆಲಸಗಳಿಗೆ ಕಾಲಮಿತಿ ನಿಗದಿಪಡಿಸಿ ತ್ವರಿತವಾಗಿ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಲೆಕ್ಕಪತ್ರಗಳ ವ್ಯವಸ್ಥಿತ ನಿರ್ವಹಣೆ, ಆಸ್ತಿಗಳ ಗಣಕೀಕೃತ ಉತಾರ ಪೂರೈಕೆ, ಜನನ ಮರಣ ಪ್ರಮಾಣ ಪತ್ರ ಗಣಕೀಕೃತಗೊಳಿಸಲಾಗಿದೆ. ಪುರಸಭೆಯ ಆದಾಯ ಮೂಲಗಳಿಂದ ಆಸ್ತಿ ತೆರಿಗೆ, ನೀರು ಸರಬರಾಜು ಶುಲ್ಕ, ಉದ್ಯಮಿ ಪರವಾನಿಗೆ, ಮಳಿಗೆಗಳ ಬಾಡಿಗೆ ಹಾಗೂ ಇತರೆ ಮೂಲಗಳಿಂದ ನಿರೀಕ್ಷಿಸಲಾದ ಆದಾಯದ ಮೇಲೆ ಈ ಸಾಲಿನ ಆಯ-ವ್ಯಯ ಪತ್ರಿಕೆಯನ್ನು ತಯಾರಿಸಲಾಗಿದ್ದು ಅಲ್ಲದೇ ಸರ್ಕಾರದ ವಿವಿಧ ಅನುದಾನಗಳಿಂದ ಬರುವ ಮೊತ್ತಕ್ಕೆ ಅನುಗುಣವಾಗಿ ಹೊಸ ಯೋಜನೆ ರೂಪಿಸಲಾಗಿದೆ. 2011 ಜನಗಣತಿ ಸಂಖ್ಯೆಗೆ ಅನುಗುಣವಾಗಿ ಪ್ರತಿನಿತ್ಯ ನೀರು ಪೂರೈಕೆ ಕಾರ್ಯಕ್ರಮ ಅನುಸಾuನಗೊಳಿಸಲಾಗುತ್ತಿದೆ. ಈ ದಿಶೆಯಲ್ಲಿ ಮಲಪ್ರಭಾ ನದಿದಡದಲ್ಲಿಇನ್‌ಟೇಕ್‌ ವೆಲ್ ನಿರ್ಮಾಣ ಮಾಡಿ 75 ಲಕ್ಷ ಲೀ.,‌ ನೀರಿನ ಸಾಮರ್ಥ್ಯದ ಜಿಎಲ್‌ಎಸ್‌ಆರ್‌ ಟ್ಯಾಂಕ್‌ ನಿರ್ಮಿಸಲಾಗಿದೆ ಹಾಗೂ ವಿದ್ಯಾನಗರದಲ್ಲಿ 15 ಲಕ್ಷ ಸಾಮರ್ಥ್ಯದ ಒವರ್‌ ಹೆಡ್‌ ಟ್ಯಾಂಕ್‌, ಪತ್ರಿಬಸವ ನಗರ ಕೃಷಿ ಸಂಶೋಧನಾ ಆವರಣದಲ್ಲಿ 15 ಲಕ್ಷ ಲೀ., ಮಿನಿ ವಿಧಾನಸೌಧ ಹತ್ತಿರ10 ಲಕ್ಷ ಲೀ., ಸಾಮರ್ಥ್ಯದ ಒವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಿ ಪಟ್ಟಣದ ಎಲ್ಲ ವಾರ್ಡುಗಳಿಗೆ ನೀರು ಸರಬರಾಜು, ಪೈಪಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ. ಪರಿಶಿಷ್ಟ ಜಾತಿ, ಪಂಗಡದ ಜನರ ಅಭಿವೃದ್ದಿಗಾಗಿ ಪುರಸಭೆಯಿಂದ ರೂ.7.33 ಲಕ್ಷ ಹಾಗೂ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ರೂ.22 ಲಕ್ಷ, ಹಿಂದುಳಿದ ವರ್ಗದ ಅಭಿವೃದ್ದಿಗಾಗಿ ರೂ.1.83000 ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ 1,26,000 ರೂ. ಕಾಯ್ದಿರಿಸಲಾಗಿದೆ ಎಂದರು. ಶಾಸಕ ಮಹಾಂತೇಶಕೌಜಲಗಿ, ಉಪಾಧ್ಯಕ್ಷ ಲಕ್ಷ್ಮೀ ಬಡ್ಲಿ, ಮುಖ್ಯಾಧಿಕಾರಿ ಕವಿರಾಜ ನಾಗನೂರ, ಪುರಸಭೆ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next