ಬೈಲಹೊಂಗಲ : ತಾಲೂಕಿನ ದೇಶನೂರ ಗ್ರಾಮದ ರೈತನ ಮಗನಾದ 22 ವರ್ಷದ ಇಂಜಿನಿರಿಂಗ್ ಪದವೀಧರ ಶಿವಾನಂದ ಮಲ್ಲಿಕಾಜುನ ಕೇದಾರಿ ಸಂಯುಕ್ತ ರಕ್ಷಣಾ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 29 ನೇ ರ‍್ಯಾಂಕ್ ಗಳಿಸಿ ಇಂಡಿಯನ್ ಮಿಲಟರಿ ಅಕಾಡೆಮಿ (ಐಎಂಎ) ಸೇರಲು ಸಜ್ಜಾಗಿದ್ದಾರೆ.
ನವೆಂಬರ್ 2021 ರಲ್ಲಿ ನಡೆಸಿದ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ ಪ್ರಕಟಿಸಲಾಗಿದ್ದು ಉತ್ತಿಣಗೊಂಡವರು ಡೆಹ್ರಾಡೂನ್ ನಲ್ಲಿರುವ ಐವಿಎಂ ಯಲ್ಲಿ ತರಬೇತಿ ಪಡೆಯಲಿದ್ದಾರೆ.
ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕೆಂಬ ಬಯಕೆ ಇತ್ತು. ನನಗೆ ಬೇರೆ ಯಾವ ಆಯ್ಕೆಯೂ ಇರಲಿಲ್ಲ. ನಾನು ಕೇವಲ ಸಿಡಿಎಸ್ ಸಿದ್ದತೆಗೆ ಮಾತ್ರವೇ ಗಮನ ಹರಿಸಿದ್ದೆನು. ಇದೀಗ ಸೇನೆಯ ಲೆಪ್ಟಿನೆಂಟ್ ಹುದ್ದೆ ಒಲಿದು
ಬಂದಿದೆ. ಪೋಷಕರು, ಶಿಕ್ಷಕರು, ಹಿತೈಷಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಆಯ್ಕೆಯಾಗಿರುವ ಶಿವಾನಂದ ಕೇದಾರಿ ತಿಳಿಸಿದರು.
ಇದನ್ನೂ ಓದಿ : 1 ಕೆಜಿ ತೂಕ ಇಳಿಸಿಕೊಂಡರೆ ಸಾವಿರ ಕೋಟಿ! ಗಡ್ಕರಿ ಸವಾಲನ್ನು ಗೆದ್ದ ಉಜ್ಜೈನಿ ಸಂಸದ ಅನಿಲ್
ಬೆಳಗಾವಿ ಗೊಗಟೆ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಬಿ.ಇ ಮುಗಿಸಿದ್ದು, ಅದಕ್ಕೂ ಮುಂಚೆ ಪ್ರಾಥಮಿಕ ಶಿಕ್ಷಣದಿಂದ ಪಿಯೂಸಿ ವರೆಗೆ ಬಿಜಾಪೂರ ಸೈನಿಕ ಶಾಲೆಯಲ್ಲಿ ಶಿಕ್ಷಣ ಪೂರೈಸಿದ್ದಾರೆ. ದೇಶನೂರ ವಿರಕ್ತಮಠದಲ್ಲಿ ಕಿತ್ತೂರ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಸಿಡಿಎಸ್ ಪರೀಕ್ಷೆಯಲ್ಲಿ ಪಾಸಾಗಿ ಉನ್ನತ ಹುದ್ದೆ ಪಡೆದಿರುವ ಶಿವಾನಂದ ಕೇದಾರಿ ಅವರನ್ನು ಸತ್ಕರಿಸಿದರು. ಈ ವೇಳೆ ಸಿದ್ದಲಿಂಗೇಶ್ವರ
ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ.ಡಿ. ನಂದೆನ್ನವರ, ಬಸವರಾಜ ಕೇದಾರಿ, ಶ್ರೀಶೈಲ ಕಮತಗಿ, ನಾಗರಾಜ ಮುಚ್ಚಂಡಿ, ಬಿ.ಕೆ.ಪೂಜೇರಿ, ಪಾಲ್ಗೊಂಡಿದ್ದರು.