ಬೈಲಹೊಂಗಲ : ತಾಲೂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಮಾರ್ಕಂಡೇಯ ಯೋಜನೆ ಹಾಗೂ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯೋಚಿತ ಪರಿಹಾರ ನೀಡಬೇಕೆಂದು ಆಗ್ರಹಿಸಿ ರವಿವಾರ ಸಮೀಪದ ಮತ್ತಿಕೊಪ್ಪ ಕೆಎಲ್ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರದ್ಲಾಂಚೆ ಅವರಿಗೆ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಚಚಡಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ರೈತ ಬಾಂಧವರಿಗೆ ಯಾವುದೇ ರೀತಿ ನ್ಯಾಯೋಚಿತ ಪರಿಹಾರವನ್ನು ನೀಡದೆ ಅವರ ಭೂಮಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆದಕಾರಣ ಇದಕ್ಕೆ ಸಂಬಂಧಿಸಿದಂತೆ ರೈತರಿಗೆ ತಿಳುವಳಿಕೆ ನೋಟಿಸುಗಳನ್ನು ಸರಿಯಾದ ಪ್ರಮಾಣದಲ್ಲಿ ಮುಟ್ಟಿಸಲು ಹಾಗೂ ನ್ಯಾಯೋಚಿತವಾದ ಮೊದಲನೆಯ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡದೆ ರೈತರ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಕಾನೂನಿನ ಪ್ರಕಾರ ಅವರಿಗೆ ಮೊದಲನೆಯ ಪರಿಹಾರವನ್ನು ನೀಡಿ ಯೋಜನೆಯ ಕೆಲಸವನ್ನು ಪ್ರಾರಂಭಿಸಬೇಕು.
ನಮ್ಮ ಭಾಗದ ನೀರಾವರಿಗಾಗಿ ಮಾಡಿದ ಯೋಜನೆಯಾಗಿರುವುದರಿಂದ ಯಾವುದೇ ರೀತಿಯ ತೊಂದರೆಗಳು ಆಗದೆ ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಸಿಗಬೇಕಾದ ಪರಿಹಾರವನ್ನು ನೀಡಿ ಕಾಲುವೆ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ರೈತ ಸಾಕಷ್ಟು ಪ್ರಮಾಣದಲ್ಲಿ ಬೆಳೆಯನ್ನು ಬೆಳೆದಿದ್ದು ಅದು ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ಅದರ ಜೊತೆಯಲ್ಲಿ ಅಧಿಕಾರಿಗಳು ಭೂ ಸ್ವಾಧೀನ ಪಡಿಸಿಕೊಂಡಿದ್ದಾರೆ. ಇದಕ್ಕೆಲ್ಲ ಸರಿಯಾದ ಪರಿಹಾರವನ್ನು ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಸಮಸ್ಯೆಗಳ ಅನಾವರಣ: ಜಿಲ್ಲಾಧಿಕಾರಿ ಸುನೀಲಕುಮಾರ್ ಸ್ಪಂದನೆ
ರಾಜ್ಯ ರೈತ ಸಂಘ ಜಿಲ್ಲಾ ಗೌರವ ಅಧ್ಯಕ್ಷ ಮಹಾಂತೇಶ ಹಿರೇಮಠ, ಜಿಲ್ಲಾ ಸಂಚಾಲಕ ಮನೋಜ್ ಕೆಳಗೇರಿ, ಬಾಳಪ್ಪ ಚಿಕ್ಕೋಡಿ, ನಾಗವ್ವ ಪೂಜಾರಿ, ಮಹಾನಂದ ಹಡಪದ್, ಸರಸ್ವತಿ ಬ್ಯಾಹಟ್ಟಿ, ನಿಂಗಪ್ಪ ಕಸಳ್ಳಿ, ಶಿವಪ್ಪ, ಲಕ್ಷ್ಮಣ್, ಮಹೇಶ, ಲಕ್ಷ್ಮಣ್ ವಡ್ಡರಹಟ್ಟಿ, ನಾಗಪ್ಪ ಕಸಳ್ಳಿ, ಪಕೀರಪ್ಪ ಕೂದಲ ನವರ್, ವಾಸು ಕೊಲ್ಲೂರು, ಬಸವರಾಜ್ ಕುರುಕುಂದ ಇದ್ದರು.