Advertisement

ಪಾಕ್‌ ಸೇನಾಧಿಕಾರಿಗಳ ವಿರುದ್ಧ ಜಾಮೀನುರಹಿತ ವಾರಂಟ್‌ ಜಾರಿ

12:30 AM Feb 04, 2019 | Team Udayavani |

ಮುಂಬೈ: 26/11ರ ಮುಂಬೈ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಇಬ್ಬರು ಸೇನಾಧಿಕಾರಿಗಳ ವಿರುದ್ಧ ಇಲ್ಲಿನ ಸೆಷನ್ಸ್‌ ನ್ಯಾಯಾಲಯ ಜಾಮೀನುರಹಿತ ವಾರಂಟ್‌ ಜಾರಿ ಮಾಡಿದೆ. 

Advertisement

ಮೇಜರ್‌ ಅಬ್ದುಲ್‌ ರೆಹ ಮಾನ್‌ ಪಾ  ಮತ್ತು ಮೇಜರ್‌ ಇಕ್ಬಾಲ್‌ ಎಂಬ ವರ ವಿರುದ್ಧ ವಾರಂಟ್‌ ಹೊರಡಿಸಲಾಗಿದೆ. ಈ ಪೈಕಿ ಪಾಷಾ ಅವರು ನಿವೃತ್ತರಾಗಿದ್ದು, ಮೇ. ಇಕ್ಬಾಲ್‌ ಈಗಲೂ ಪಾಕ್‌ನ ಐಎಸ್‌ಐ ಅಧಿಕಾ ರಿಯಾಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ ಎಂದು ಪ್ರಕರಣದ ಆರೋಪಿ, ಲಷ್ಕರ್‌ ಉಗ್ರ ಡೇವಿಡ್‌ ಕೋಲಮನ್‌ ಹೆಡ್ಲಿ ತಿಳಿಸಿರುವುದಾಗಿ ವಕೀಲರು ಹೇಳಿದ್ದಾರೆ. 

ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪಪಟ್ಟಿಯಲ್ಲಿ ಈ ಇಬ್ಬರೂ ಅಧಿಕಾರಿಗಳನ್ನು ವಾಂಟೆಡ್‌ ಎಂದು ಉಲ್ಲೇಖೀಸಲಾಗಿದೆ. ಪ್ರಕರಣದ ಸಂಚಿನ ಕುರಿತು ಹೆಡ್ಲಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದು, ಈ ಇಬ್ಬರು ಸೇನಾಧಿಕಾರಿಗಳ ಪಾತ್ರದ ಕುರಿತೂ ಹೇಳಿದ್ದಾನೆ. ಮುಂಬೈ ದಾಳಿಯ ಪ್ರಾಯೋಜಕತ್ವವನ್ನು ಪಾಕಿಸ್ತಾನದ ಉಗ್ರ ಸಂಘಟನೆಗಳು ನಡೆಸಿದ್ದರೂ, ಅವುಗಳಿಗೆ ಅಲ್ಲಿನ ಸೇನೆಯ ಅಧಿಕಾರಿಗಳು ಸಂಪೂರ್ಣ ಬೆಂಬಲ ನೀಡಿದ್ದರು ಎಂದು ಹೆಡ್ಲಿ ತಿಳಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next