Advertisement
ತತ್‌ಕ್ಷಣ ಇವರು ಕಾರು ನಿಲ್ಲಿಸಿದಾಗ ಆರೋಪಿಗಳಾದ ಮಹಮ್ಮದ್ ರಿಯಾಜ್, ಅಶ್ಫಕ್ ಅಹ್ಮದ್, ಮೊಹಮ್ಮದ್ ಅಶ್ರಫ್, ಅಹ್ಮದ್ ಅವರು ತಲವಾರಿನಿಂದ ಬೀಸಿದ್ದಾರೆ ಎನ್ನಲಾಗಿದೆ. ಅವರಿಂದ ತಪ್ಪಿಸಿಕೊಂಡ ಮೊಹಮ್ಮದ್ ಆಸಿಫ್ ಅವರು ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳು, ಸರಕಾರದ ಪರ ವಾದ ಆಲಿಸಿದ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನರಹರಿ ಮರಾಠೆ ಅವರು ಆರೋಪಿಗಳಿಗೆ ಜಾಮೀನು ನೀಡುವಂತೆ ಆದೇಶಿಸಿದ್ದಾರೆ. ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ, ನಿತೇಶ್ ಶೆಟ್ಟಿ ಮಟ್ಟಾರು ಮತ್ತು ರಶ್ಮಿತಾ ಆರ್.ಕಲ್ಮಾಡಿ ವಾದಿಸಿದ್ದರು. Advertisement
ಕೊಲೆಯತ್ನ ಆರೋಪಿಗಳಿಗೆ ಜಾಮೀನು: ಬಿಡುಗಡೆ
08:11 AM Jun 02, 2020 | mahesh |
Advertisement
Udayavani is now on Telegram. Click here to join our channel and stay updated with the latest news.