ನವದೆಹಲಿ:ಕೋರ್ಟ್‌ನಲ್ಲಿ ಸಲ್ಲಿಕೆ ಮಾಡಿರುವ ಆರೋಪಪಟ್ಟಿಯಲ್ಲಿ ಆರೋಪಿಯ ವಿರುದ್ಧ ಪ್ರಬಲ ಆರೋಪಗಳಿದ್ದಲ್ಲಿ ಪೂರ್ವ ನಿಯೋಜಿತವಾಗಿ ನೀಡಲಾಗಿರುವ ಜಾಮೀನನ್ನು ರದ್ದು ಮಾಡಲು ಅವಕಾಶ ಇದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾ.ಎಂ.ಆರ್.ಶಾ ಮತ್ತು ನ್ಯಾ.ಸಿ.ಟಿ.ರವಿ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಸೋಮವಾರ ತೆಲಂಗಾಣದ ಪ್ರಕರಣದ ವಿಚಾರಣೆ ವೇಳೆ ಅಂಶ ತಿಳಿಸಿದೆ.
ಕೋರ್ಟ್‌ಗೆ ಕೇವಲ ಆರೋಪಪಟ್ಟಿ ಸಲ್ಲಿಸುವುದರಿಂದ ಆರೋಪಿಗೆ ಜಾಮೀನು ರದ್ದು ಮಾಡಲು ಸಾಧ್ಯವಿಲ್ಲ. ಆದರೆ, ಅದರಲ್ಲಿ ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದರೆ, ಪೂರ್ವ ನಿಯೋಜಿತವಾಗಿ ನೀಡಲಾಗುವ ಜಾಮೀನು ರದ್ದಾಗಲಿದೆ ಎಂದಿತು.
ಆಂಧ್ರಪ್ರದೇಶದ ಹಿರಿಯ ನಾಯಕ ವೈ.ಎಸ್.ವಿವೇಕಾನಂದ ರೆಡ್ಡಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ರಾ ಗಂಗಿ ರೆಡ್ಡಿ ಅವರಿಗೆ ನೀಡಲಾಗಿರುವ ಜಾಮೀನು ರದ್ದು ಮಾಡುವ ಬಗ್ಗೆ ತೆಲಂಗಾಣ ಹೈಕೋರ್ಟ್ ಸಹಮತ ವ್ಯಕ್ತಪಡಿಸಿತ್ತು. ಆ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.