Advertisement

Baikampady ಜಂಕ್ಷನ್‌ ರಸ್ತೆಗೆ ಗುಣವಾಗದ ಕಾಯಿಲೆ!

03:14 PM Sep 13, 2024 | Team Udayavani |

ಬೈಕಂಪಾಡಿ: ಇಲ್ಲಿನ ಕೈಗಾರಿಕಾ ಪ್ರದೇಶಕ್ಕೆ ಹೋಗುವ ರಸ್ತೆ ತೀರಾ ಹದೆಗೆಟ್ಟಿದ್ದು ಕೈಗಾರಿಕಾ ವಲಯಕ್ಕೆ ಪ್ರವೇಶ ಪಡೆಯುವ ಟ್ರಕ್‌, ಕಂಟೈನರ್‌ ಸಹಿತ ಘನ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಸರಿಸುಮಾರು 30 ಸಾವಿರ ಕಾರ್ಮಿಕರು ದಿನನಿತ್ಯ ಸಂಚರಿಸುವ ಪ್ರಮುಖ ರಸ್ತೆ ಇದಾಗಿದೆ.

Advertisement

ಸಾವಿರಾರು ದ್ವಿಚಕ್ರ ವಾಹನ, ಜೋಕಟ್ಟೆಗೆ ಹೋಗುವ ಬಸ್‌ ಸಹಿತ ಇತರ ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ಹೊಂಡಗುಂಡಿಗಳಿಂದಾಗಿ ‘ಅಯ್ಯೋ ಯಾಕಾದರೂ ಇಲ್ಲಿಂದ ಹೋಗುವ ದುಃಸ್ಥಿತಿ ನಮಗೆ ಬಂತೋ?’ ಎಂದು ಸವಾರರು ಹಳಹಳಿಸುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧೀನದಲ್ಲಿದ್ದರೂ ಅಭಿವೃದ್ಧಿಗಾಗಿ ಭೂ ಸ್ವಾಧೀನವನ್ನು ಕೇಂದ್ರ ಸರಕಾರ ಮಾಡಿಕೊಡಬೇಕಾಗಿದೆ. ಈ ಕಾರಣದಿಂದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ಸ್ಥಳೀಯ ಪಾಲಿಕೆ ಈ ಸಮಸ್ಯೆ ನಮ್ಮ ವ್ಯಾಪ್ತಿಗೆ ಸೇರಿದ್ದಲ್ಲ ಎಂದು ಕಣ್ಮುಚ್ಚಿ ಕುಳಿತಿವೆ. ಈ ಹಿಂದೆ ಬೃಹತ್‌ ಹೊಂಡವಾದಾಗ ಇಂಟರ್‌ ಲಾಕ್‌ ಹಾಕಲಾಗಿತ್ತು. ಘನ ವಾಹನಗಳ ಭಾರಕ್ಕೆ ಅವು ನಾಶವಾಗಿವೆ.

ಪ್ರಮುಖ ಕೈಗಾರಿಕಾ ಪ್ರದೇಶ ಇದಾಗಿರುವುದರಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ವ್ಯವಹಾರಗಳ ಒಟ್ಟಾರೆ ಉತ್ಪಾದಕತೆ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ತತ್‌ಕ್ಷಣವೇ ಬೈಕಂಪಾಡಿ ಜಂಕ್ಷನ್‌ ರಸ್ತೆಯ ದುರಸ್ತಿಗೆ ಕ್ರಮ ಜರಗಿಸಬೇಕು ಎಂದು ಕೆನರಾ ಕೈಗಾರಿಕಾ ಸಂಘ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.