ಶ್ರೀಮಂತನೊಬ್ಬ ಅರಮನೆಯಂಥಬಂಗಲೆ ಕಟ್ಟಿಸಿದ. ಅದನ್ನು ಬಗೆಬಗೆಯಮಾರ್ಬಲ್‌ಗಳಿಂದ ನಿರ್ಮಿ ಸಲಾಗಿತ್ತು. ಗೃಹಪ್ರವೇಶಕ್ಕೆ ಬಂದವರೆಲ್ಲಾಆ ಮನೆಯನ್ನು, ಅದರ ಅಂದಚೆಂದ ವನ್ನು ಹೊಗಳಿ ಹೋದರು.
ಆ ದಿನ ಹುಣ್ಣಿಮೆ. ಹಾಲುಚೆಲ್ಲಿದಂಥ ಬೆಳದಿಂಗಳುಹರಡಿಕೊಂಡಿತ್ತು.ಶ್ರೀಮಂತನಿಗೆ ನಿದ್ರೆಯೇಬರಲಿಲ್ಲ. ತಾನು ನಿರ್ಮಿಸಿರುವ ಬಂಗಲೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಆಸೆಯಿಂದ ಐದನೇ ಮಹಡಿಗೆಹೋಗಿ ನಿಂತ. ಅಲ್ಲಿಂದ ಒಮ್ಮೆ ಸುತ್ತಲೂಕಣ್ಣು ಹಾಯಿಸಿದ. ಆ ತಂಪಾದ ಬೆಳದಿಂಗಳಲ್ಲಿ, ಹಾಲುಗಲ್ಲಿನಲ್ಲಿ ನಿರ್ಮಾಣವಾಗಿದ್ದ ಆ ಮನೆ ಬಹಳ ಸುಂದರವಾಗಿ ಕಾಣಿಸುತ್ತಿತ್ತು.
ಮನೆಯ ಮೇಲೆ ನಿಂತು ನೋಡಿದರೆ, ಇಡೀ ಊರು ಕಣ್ಣೆದುರುನಿಂತಂತೆ ಭಾಸ ವಾಗುತ್ತಿತ್ತು. ಈ ಖುಷಿಯಲ್ಲಿಯೇ ಶ್ರೀಮಂತ ಒಮ್ಮೆಕೆಳಗೆ ನೋಡಿದ. ಅಷ್ಟೆ: ಅವನಮುಖ ಚಿಕ್ಕದಾಯಿತು. ಕಾರಣ,ಅವನ ಮನೆಯಿಂದ ಹತ್ತು ಹೆಜ್ಜೆದೂರದಲ್ಲಿ ಒಂದು ಚಿಕ್ಕ ಮನೆಯಿತ್ತು. ಮಧ್ಯಮ ವರ್ಗದ ಕುಟುಂಬದವರು ಕಟ್ಟುವಂಥ ಸಾಧಾರಣ ಮನೆ ಅದು.
ಅರಮನೆಯಂಥ ಬಂಗಲೆಯಪಕ್ಕದಲ್ಲಿಯೇ ಈ ಹಳೆಯ ಕಾಲದ ಮನೆಇರುವುದು ತನ್ನ ಅಂತಸ್ತಿಗೆ ಕುಂದುಎಂದು ಶ್ರೀಮಂತ ಯೋಚಿ ಸಿದ. ಆಮನೆಯಲ್ಲಿ ಒಬ್ಬಳು ಮುದುಕಿ ವಾಸಿಸುತ್ತಾಳೆ ಎಂದು ಅವನಿಗೆ ತಿಳಿ ದಿತ್ತು.ಮರುದಿನ ಆಕೆಯನ್ನು ಕರೆದು ಹೇಳಿದ:”ನನ್ನ ಭವ್ಯ ಬಂಗಲೆಯ ಪಕ್ಕದಲ್ಲಿ ನಿನ್ನಮನೆ ಇದ್ದರೆ ಅಷ್ಟೇನೂ ಚೆನ್ನಾಗಿಕಾಣುವುದಿಲ್ಲ. ಈ ಜಾಗವನ್ನು, ಇಂತಿಷ್ಟುಹಣಕ್ಕೆ ನಾನು ಖರೀದಿಸುತ್ತೇನೆ. ನೀನುಬೇರೆಲ್ಲಾದರೂ ಮನೆ ಕೊಂಡುಕೋ…”ಆ ಮುದುಕಿ ಹೇಳಿದಳು: ಸಾಹುಕಾರ್ರೆ,ಈ ಮನೆ ಮಾರಾಟಕ್ಕೆ ಇಲ್ಲ. ನೀವು ಹತ್ತಲ್ಲ,ಇಪ್ಪತ್ತು ಲಕ್ಷ ಕೊಟ್ಟರೂ ನಾನು ಮಾರುವುದಿಲ್ಲ. ಕಾರಣ, ನಿಮ್ಮ ಮಹಲಿನಲ್ಲಿ ಇಲ್ಲದಂಥ ಸಿರಿ- ಸಂಪತ್ತು ನನ್ನ ಕುಟೀರದಲ್ಲಿಇದೆ.
ಅದರ ತುಂಬಾ ನನ್ನ ಗಂಡನಪ್ರೇಮ ತುಂಬಿಕೊಂಡಿದೆ. ಆ ಮನೆಯಪ್ರತಿ ಇಂಚಿನಲ್ಲೂ ನನ್ನ ಯಜಮಾನನಹೆಜ್ಜೆ ಗುರುತುಗಳಿವೆ.ಆತ ನನ್ನನ್ನು ಆಗಲಿ ಹತ್ತು ವರ್ಷವೇಕಳೆದಿದೆ. ಆದರೆ ಅವನ ನೆನಪು ಶಾಶ್ವತ. ಆದೃಷ್ಟಿಯಿಂದ ನನ್ನ ಮನೆ ನನಗೆ ಅರಮನೆಗಿಂತ ಮಿಗಿಲು. ನನ್ನ ಚಿಕ್ಕ ಮನೆಯಲ್ಲಿತುಂಬಿರುವ ಪ್ರೇಮಕ್ಕೆ ಬೆಲೆ ಕಟ್ಟಲುಸಾಧ್ಯವೇ ಇಲ್ಲ. ಇನ್ನೊಂದು ಮಾತುಸಾಹುಕಾರ್ರೆà, ನನ್ನದು ಸಣ್ಣ ಗುಡಿಸಲು.ನಿಮ್ಮದು ಅರಮನೆಯಂಥ ಬಂಗಲೆ.ಗುಡಿಸಲಿನಲ್ಲಿ ನಾನು ಆನಂದದಿಂದಬದುಕಿದ್ದೇನೆ. ಆದರೆ ಅರಮನೆಯಂಥಬಂಗಲೆ ಇದ್ದರೂ ನಿಮಗೆ ಸಂತೋಷದಿಂದಬದುಕಲು ಆಗುತ್ತಿಲ್ಲವಲ್ಲ… ಅವಳಮಾತಿಗೆ ಉತ್ತರಿ ಸಲಾಗದೆ ಶ್ರೀಮಂತ ತಲೆತಗ್ಗಿಸಿದ.