Advertisement

ಬಾಹುಬಲಿ ಮರು ಪ್ರದರ್ಶನ ರದ್ದು, ಕ್ಷಮೆ ಕೇಳದಿದ್ದರೆ ಆಕ್ರೋಶ ನಿರಂತರ

12:17 PM Apr 08, 2017 | Team Udayavani |

ಬೆಂಗಳೂರು: ತೆಲುಗಿನ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ “ಬಾಹುಬಲಿ’ ಚಿತ್ರ, ಶುಕ್ರವಾರ ದೇಶಾ0ದ್ಯಂತ ಮರು ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ಮಾತ್ರ “ಬಾಹುಬಲಿ’ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡಪರ ಸಂಘಟನೆಗಳು ಚಿತ್ರಪ್ರದರ್ಶನ ರದ್ದುಪಡಿಸುವಲ್ಲಿ ಯಶಸ್ವಿಯಾಗಿವೆ.

Advertisement

ಕರ್ನಾಟಕದಲ್ಲಿ “ಬಾಹುಬಲಿ’ ಚಿತ್ರವನ್ನು ಮರು ಬಿಡುಗಡೆ ಮಾಡಲು ಕನ್ನಡ ಪರ ಸಂಘಟನೆಗಳ ಭಾರೀ ವಿರೋಧವಿದೆ ಎಂಬು ತಿಳಿದಿದ್ದರೂ ಬೆಂಗಳೂರು ಎಲಿಮೆಂಟ್ಸ್‌ ಮಾಲ್ ಹಾಗೂ ಒರಾಯನ್‌ ಮಾಲ್ಗಳಲ್ಲಿ ಶುಕ್ರವಾರ “ಬಾಹುಬಲಿ’ ಚಿತ್ರ ಪ್ರದರ್ಶನ ಮಾಡಲಾಗಿತ್ತು.

ಈ ಬಗ್ಗೆ ವಿಷಯ ತಿಳಿದುಕೊಂಡ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, “ಬಾಹುಬಲಿ’ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಮಾಲ್ಗಳಿಗೆ ಮುತ್ತಿಗೆ ಹಾಕಿ, ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಲ್‌ಗ‌ಳ ಮುಖ್ಯಸ್ಥರಿಗೆ “ಬಾಹುಬಲಿ’ ಚಿತ್ರವನ್ನು ಯಾವುದೇ ಕಾರಣಕ್ಕೂ ಪ್ರದರ್ಶನ ಮಾಡಬಾರದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಬಹಿರಂಗ ಕ್ಷಮೆಗೆ ಆಗ್ರಹ: ಇದೇ ಸಂದರ್ಭದಲ್ಲಿ ಮಾತನಾಡಿದ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “ನಾನೊಬ್ಬ ಕನ್ನಡಪರ ಹೋರಾಟಗಾರನಾಗಿ “ಬಾಹುಬಲಿ’ ಚಿತ್ರದ ವಿರುದ್ಧ ಮಾತನಾಡುತ್ತಿಲ್ಲ. ಆದರೆ, ಆ ಚಿತ್ರದಲ್ಲಿ ಕಟ್ಟಪ್ಪನ ಪಾತ್ರ ನಿರ್ವಹಿಸಿರುವ ಸತ್ಯರಾಜ್‌ ವಿರುದ್ಧ ಮಾತನಾಡುತ್ತಿದ್ದೇನೆ.

ಅವರೊಬ್ಬ ನಟರಾಗಿ, ಕಾವೇರಿ ಹೋರಾಟ ಸಂದರ್ಭದಲ್ಲಿ ವಿವೇಚನೆ ಇಲ್ಲದೆ ನಡೆದುಕೊಂಡಿರುವುದಲ್ಲದೆ, ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಹಾಗಾಗಿ ಅವರು ಕನ್ನಡಿಗರ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ಅವರು ನಟಿಸಿರುವ ಯಾವ ಚಿತ್ರ ಬಿಡುಗಡೆಗೂ ಇಲ್ಲಿ ಅವಕಾಶ ಮಾಡಿಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. 

Advertisement

ಈ ಪ್ರತಿಭಟನೆ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹಲವು ಪದಾಕಾರಿಗಳು, ಸದಸ್ಯರು, ಕನ್ನಡ ಪರ ಹೋರಾಟ ಸಂಘಟನೆಗಳು ಮುಖ್ಯಸ್ಥರು ಇತರರು ಭಾಗವಹಿಸಿದ್ದರು.

ಭಾರೀ ಪ್ರತಿಭಟನೆ ಎಚ್ಚರಿಕೆ
“ಬಾಹುಬಲಿ’ ಚಿತ್ರದಲ್ಲಿ ಕಟ್ಟಪ್ಪನ ಪಾತ್ರ ಮಾಡಿದ್ದ ನಟ ಸತ್ಯರಾಜ್‌, ಈ ಹಿಂದೆ ಕಾವೇರಿ ಹೋರಾಟದ ಸಮಯದಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂಬ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು, ಸತ್ಯರಾಜ್‌ಗೆ ಕ್ಕಾರ ಹಾಕುವುದರ ಜತೆಗೆ ಅವರು ನಟಿಸಿರುವ “ಬಾಹುಬಲಿ’ ಚಿತ್ರವನ್ನು ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಪ್ರದರ್ಶನ ಮಾಡಬಾರದು ಎಂದು ಘೋಷಣೆ ಕೂಗಿದರು.

ಎಲಿಮೆಂಟ್ಸ್‌ ಮಾಲ್‌ನಲ್ಲಿ ಪ್ರದರ್ಶನವಾಗುತ್ತಿದ್ದ “ಬಾಹುಬಲಿ’ ಚಿತ್ರ ಪ್ರದರ್ಶನ ರದ್ದುಪಡಿಸಿದ ಬಳಿಕ ಮಾತನಾಡಿದ, ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌, “ನಟ ಸತ್ಯರಾಜ್‌ ಕನ್ನಡ ವಿರೋ. ಅತ್ಯಂತ ಅವಿವೇಕಿ  ಅವರು ನಟಿಸಿರುವ ಯಾವುದೇ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು. “ಬಾಹುಬಲಿ’ ಮತ್ತು “ಬಾಹುಬಲಿ-2′ ಈ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡುವಂತಿಲ್ಲ. ಹಾಗೊಂದು ವೇಳೆ ಬಿಡುಗಡೆ ಮಾಡಿದರೆ, ಮುಂದೆ ಭಾರೀ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next