Advertisement

ಕೆರೆ ಬತ್ತದಂತೆ ನೋಡಿಕೊಳ್ಳಿ

04:31 PM Oct 24, 2020 | Suhan S |

ಹಳೇಬೀಡು: ದ್ವಾರಸಮುದ್ರ ಕೆರೆ ಮುಂದೆಂದೂ ಬತ್ತದಂತೆ ನೋಡಿಕೊಳ್ಳುವ ಜವಾಬ್ದಾರಿ ರೈತರ ಮೇಲಿದೆ ಎಂದು ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ ಹೇಳಿದರು.

Advertisement

ಗ್ರಾಮದ ವಿಶ್ವ ಪ್ರಸಿದ್ಧ ದ್ವಾರಸಮುದ್ರ ಕೆರೆಗೆ ಶುಕ್ರವಾರ ರೈತಸಂಘ, ಆಟೋ ಮಾಲಿಕರು ಮತ್ತು ಚಾಲಕರ ಬಳಗ, ಕೆರೆ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಬಾಗಿನ ಅರ್ಪಿಸಿ ಮಾತನಾಡಿ, ನೀರಾವರಿ ಹೋರಾಟಕ್ಕೆ ವಿವಿಧ ಮಠಾಧೀಶರು, ಜನಸಾಮಾನ್ಯರಿಂದ ದೊರೆತ ಅಭೂತ ಪೂರ್ವ ಬೆಂಬಲ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಹೋರಾಟದ ಪ್ರತಿಫ‌ಲವಾಗಿ ಏತ ನೀರಾವರಿ ಯೋಜನೆಯಿಂದ ಅಲ್ಪಮಟ್ಟಿನ ಯಶಸ್ಸು ನೀಡಿದ್ದು, ಮಳೆಯಿಂದಾಗಿ ಕೆರೆ ಭರ್ತಿಯಾಗಿದೆ. ನಮ್ಮ ಹೋರಾಟಕ್ಕೆ ವರುಣಆಶೀರ್ವಾದ ಮಾಡಿದ್ದಾನೆ. ಶೀಘ್ರದಲ್ಲಿಸರ್ಕಾರ ತಡೆ ಹಿಡಿದಿರುವ ರಣಘಟ್ಟ ಯೋಜನೆಯ 100 ಕೋಟಿ ರೂ. ಹಣ ಬಿಡುಗಡೆ ಮಾಡಲಿ ಎಂದು ಮನವಿ ಮಾಡಿದರು.

ನೀರು ಸಂರಕ್ಷಿಸಿ: ಮನುಗುಂದಿ ಮಠದ ಬಸವಾನಂದ ಸ್ವಾಮೀಜಿ ಮಾತನಾಡಿ, ನೀರಿನ ಸಂರಕ್ಷಣೆ, ಮಿತವಾಗಿ ಬಳಕೆ ಮಾಡದೇ ಹೋದರೆ ವಿಷವಾಗಿ ಅದು ನಮ್ಮ ಮನುಕುಲಕ್ಕೆ ಕಂಟಕವಾಗುತ್ತದೆ. ರೈತರು ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳಬೇಕು. ಉತ್ತಮ ಮಳೆಯಿಂದ ನೀರು ಶೇಖರಣೆ ಆಗೆ, ಶುದ್ಧೀಕರಿಸಿ ಬಳಕೆ ಮಾಡಿದರೆ ಹಲವು ರೋಗಗಳಿಂದ ಮುಕ್ತರಾಗಬಹುದು. ಆಸ್ಪತ್ರೆಗೆ ಲಕ್ಷಾಂತರ ರೂ. ಖರ್ಚು ಮಾಡುವುದು ತಪ್ಪುತ್ತದೆ ಎಂದು ತಿಳಿಸಿದರು.

ತಂಬಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮಿ ಮಾತನಾಡಿ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದ ರೈತರುದಶಕಗಳಿಂದಲೂ ನೀರಾವರಿ ಯೋಜನೆ ಜಾರಿಆಗದೇ ನೋವು ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು.

Advertisement

ಹೋರಾಟ ಅನಿವಾರ್ಯ: ಪುಷ್ಪಗಿರಿ ಮಠದ ಕಾರ್ಯದರ್ಶಿ ಎಸ್‌.ಎಚ್‌.ರಾಜಶೇಖರ್‌ ಮಾತನಾಡಿ, ದ್ವಾರಸಮುದ್ರ ಕೆರೆ ಭರ್ತಿಆಗಿರುವುದಕ್ಕೆ ಹೆಚ್ಚಿನ ಸಂತೋಷ ಪಡಬೇಕಿಲ್ಲ. ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಜಾರಿ ಆಗುವವರೆಗೂ ಹೋರಾಟದ ಅನಿರ್ವಾತೆ ಇದೆ ಎಂದು ತಿಳಿಸಿದರು.

ಮುಂಗಾರು ಮತ್ತು ಹಿಂಗಾರು ಮಳೆ ಸಮೃದ್ಧಿ ಆಗಿ ಆಗಿರುವುದರಿಂದ ಇತಿಹಾಸಪ್ರಸಿದ್ಧ ದ್ವಾರಸಮುದ್ರ ಕೆರೆಗೆ ಸಾಕಷ್ಟು ನೀರುಹರಿದುಬಂದು, ಭರ್ತಿಯಾಗಿ ಕೋಡಿ  ಹರಿದಿದೆ. ದಶಕಗಳಿಂದ ಈ ಭಾಗದ ರೈತರುಅನುಭವಿಸುತ್ತಿದ್ದ ಯಾತನೆ ನಿಲ್ಲಬೇಕಾದರೆ, ರಣಘಟ್ಟ ರಾಜ ಕಾಲುವೆ ಮೂಲಕ ದ್ವಾರಸಮುದ್ರ ಕೆರೆಗೆ ನೀರು ಹರಿಯಬೇಕಿದೆ ಎಂದು ಹೇಳಿದರು.

ಶಾಶ್ವತ ನೀರಾವರಿ ಯೋಜನೆ ಜಾರಿ ಆಗಲಿ: ಈ ಭಾಗಕ್ಕೆ ಶಾಶ್ವತ ನೀರಾವರಿ ದೊರೆತಂತಾಗಿದೆ. ದ್ವಾರಸಮುದ್ರಕೆರೆ ಭರ್ತಿ ಯಾಗಿರುವುದರಿಂದ ತಾತ್ಕಾಲಿಕ ಖುಷಿ ದೊರೆತಿದೆ. ಹಳೇಬೀಡು, ಮಾದಿಹಳ್ಳಿ ಹೋಬಳಿಯ ಸುತ್ತಮುತ್ತಲಿನ ನೂರಾರು ಹಳ್ಳಿಗಳ ರೈತರು ಸಮೃದ್ಧಿಯಾಗಿ ಜೀವನ ಸಾಗಿಸುತ್ತಾರೆ. ಆದರೆ, ಮಳೆ ಕೈಕೊಟ್ಟರೆ ಬದುಕು ಮೂರಾಬಟ್ಟೆಯಾಗುತ್ತದೆ. ಆದ್ದ ರಿಂದ ಶಾಶ್ವತ ಯೋಜನೆ ಜಾರಿಯಾದರೆ ರೈತರು ಮತ್ತು ಈ ಭಾಗದ ಜನಸಾಮಾನ್ಯರಿಗೆ ನೆಮ್ಮದಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೋಳಗುಂದ ಮಠದ ಜಯಚಂದ್ರಶೇಖರ ಸ್ವಾಮೀಜಿ, ಯಳನಾಡು ಮಠದ ಜ್ಞಾನಪ್ರಭು ದೇಶಕೇಂದ್ರ ಸ್ವಾಮೀಜಿ, ಮಡಾಳು ಮಠ ರುದ್ರಮುನಿ ಸ್ವಾಮೀಜಿಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ರೈತಸಂಘದಮುಖಂಡಾರಮಲ್ಲಿಕಾರ್ಜುನ್‌, ಹಾಲಪ್ಪ, ಶಿವಕುಮಾರ್‌, ಗುರುಶಾಂತಪ್ಪ, ಬಸವರಾಜು, ಗಂಗೂರು ಶಿವಕುಮಾರ್‌, ಕಾಂತರಾಜು, ತುಕರಾಂ, ರಘನಾಥ್‌ ಮುಂತಾದವರು ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next