Advertisement

Kannada Cinema: ಡಿ.17ಕ್ಕೆ ‘ಬಘೀರ’ ಟೀಸರ್‌ ಸಾಧ್ಯತೆ

12:58 PM Dec 07, 2023 | Team Udayavani |

ಶ್ರೀಮುರಳಿ ನಾಯಕರಾಗಿರುವ “ಬಘೀರ’ ಚಿತ್ರದ ಭರದಿಂದ ನಡೆಯುತ್ತಿದೆ. ಈ ನಡುವೆಯೇ ಅಭಿಮಾನಿಗಳ ಕಾತರ ಕೂಡಾ ಹೆಚ್ಚಾಗಿದೆ. ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲದ ಪ್ರಶ್ನೆ ಸಿನಿಮಾ ಪ್ರೇಮಿಗಳದ್ದು. ಈ

Advertisement

ನಡುವೆಯೇ ಮುರಳಿ ಹುಟ್ಟುಹಬ್ಬ ಹತ್ತಿರ ಬರುತ್ತಿದೆ. ಡಿಸೆಂಬರ್‌ 17 ಮುರಳಿ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ “ಬಘೀರ’ ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಡಾ.ಸೂರಿ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸುತ್ತಿದೆ. ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಕಥೆ ಇದೆ. ಮುರಳಿ ಕೂಡಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.

ಈ ಹಿಂದೆ ಅವರು ಹೇಳಿದಂತೆ “ಬಘೀರ’ ಸಿನಿಮಾವನ್ನು ಯಾವುದೋ ಒಂದು ದೃಷ್ಟಿಕೋನದಿಂದ ನೋಡುವಂಥ ಸಿನಿಮಾವಲ್ಲ. ಇದು ಕೇವಲ ಆ್ಯಕ್ಷನ್‌ ಸಿನಿಮಾ, ಡ್ರಾಮಾ, ಸೆಂಟಿಮೆಂಟ್‌ ಅಂಥ ಯಾವುದೋ ಒಂದು ಕೆಟಗೆರಿಗೆ ಸೇರುವ ಸಿನಿಮಾವಲ್ಲ. ಇದರಲ್ಲಿ ಒಳ್ಳೆಯ ವಿಷಯವಿದೆ. ಸೋಶಿಯಲ್‌ ಮೆಸೇಜ್‌ ಇದೆ. ನಮ್ಮ ನಡುವೆಯೇ ಹೇಳಿಕೊಳ್ಳಲಾಗದ ಹಲವು ವಿಚಾರಗಳಿವೆ. ಎಲ್ಲದರಲ್ಲೂ ಪ್ರತಿಯೊಬ್ಬರ ಫ್ಯಾಷನ್‌ ಎದ್ದು ಕಾಣುತ್ತಿದೆ. ಪ್ರತಿಯೊಬ್ಬರ ವರ್ಕ್‌ ಕೂಡ ಸಿನಿಮಾವನ್ನು ಬೇರೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದೆ. ಎಲ್ಲರ ಡೆಡಿಕೇಷನ್‌ ನೋಡಿದಾಗ, ನಾನು ಕೂಡ ಅವರಿಗೆ ತಕ್ಕಂತೆ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಡೆಡಿಕೇಷನ್‌ಮಾಡಬೇಕು ಅಂಥ ಅನಿಸುತ್ತದೆ. ಹಾಗಾಗಿ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ತುಂಬ ಪೋಕಸ್‌ ಆಗಿದ್ದೇನೆ. ಅದಕ್ಕೆ ಏನು ಮಾಡಬೇಕೊ ಅದೆಲ್ಲವನ್ನು ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಚಿತ್ರಕ್ಕಾಗಿ ಮುರಳಿ ಸಾಕಷ್ಟು ವರ್ಕೌಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next