Advertisement

ಬಗರ್‌ಹುಕುಂ ಮಂಜೂರಾತಿ ವಿರುದ್ಧ ದೂರು; ಪರಿಶೀಲನೆ

07:34 PM Sep 07, 2022 | Suhan S |

ಸಾಗರ: ಇತಿಹಾಸ ಪ್ರಸಿದ್ಧ ಸಿಗಂದೂರು ದೇವಾಲಯದ ಮುಖ ಮಂಟಪ ಹೊಂದಿರುವ ಕಳಸವಳ್ಳಿ ಗ್ರಾಮದ ದಟ್ಟ ಅರಣ್ಯ ಭೂಮಿಯನ್ನು ಉಳುಮೆ ಇಲ್ಲದೆ ಬಗರ್‌ಹುಕುಂ ಮಂಜೂರು ಮಾಡಿರುವ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.

Advertisement

ಉಪ ತಹಶೀಲ್ದಾರ್ ಮಾಲಿನಿ ನೇತೃತ್ವದ ಅಧಿಕಾರಿಗಳ ತಂಡ ಮಂಜೂರಾತಿ ಕಡತಗಳ ಜತೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲಿ ಯಾವುದೇ ಬೆಳೆ ಇಲ್ಲದೆ ಇರುವ ಬಗ್ಗೆ ಮಾಹಿತಿ ಕಲೆಹಾಕಿತು. ಕಳಸವಳ್ಳಿ ಗ್ರಾಮದ ಸರ್ವೆ ನಂಬರ್ 71 ರಲ್ಲಿ ನಾಲ್ಕು ಎಕರೆ ಭೂಮಿಯನ್ನು ಇಬ್ಬರು ರೈತರಿಗೆ ಅರಣ್ಯ ವ್ಯಾಪ್ತಿಯಲ್ಲಿ 2018 ರಲ್ಲಿ ಸಾಗರ ಬಗರ್‌ಹುಕುಂ ಸಮಿತಿ ಮಂಜೂರು ಮಾಡಿದ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.

ಸ್ಥಳ ಪರಿಶೀಲನೆ ವೇಳೆಯಲ್ಲಿ ಹಾಜರಿದ್ದ ಮಂಜೂರಾತಿ ಪಡೆದ ರೈತರಾದ ನಾಗರಾಜ ಅಡಿಗ ಮತ್ತು ರಾಘವೇಂದ್ರ ಅಡಿಗ ಹಾಜರಿದ್ದರು. ಕಂದಾಯ ಇನ್ಸ್‌ಪೆಕ್ಟರ್ ಮಂಜುನಾಥ್, ಗ್ರಾಮಲೆಕ್ಕಿಗ ಪ್ರಕಾಶ್, ಸಹಾಯಕ ಶ್ರೀಕಾಂತ್, ಸ್ಥಳೀಯರಾದ ರಾಮಪ್ಪ ಕಳಸವಳ್ಳಿ, ಚೇತನ ಜೈನ್, ಲಕ್ಷ್ಮೀಪತಿ ಜೈನ್  ಮತ್ತಿತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next