Advertisement

ಬಾಗಪ್ಪ ಹರಿಜನ ಶೂಟೌಟ್‌: 6 ಸೆರೆ

04:02 PM Aug 16, 2017 | |

ವಿಜಯಪುರ: ನಗರದ ಕೋರ್ಟ್‌ ಆವರಣದಲ್ಲಿ ನಡೆದಿದ್ದ ಭಾಗಪ್ಪ ಹರಿಜನ ಮೇಲಿನ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಇನ್ನೂ ಮೂವರು ಆರೋಪಿಗಳಗಾಗಿ ಶೋಧ ತೀವ್ರಗೊಳಿಸಿದ್ದಾರೆ. ಭಾಗಪ್ಪ ಹರಿಜನ ಮೇಲೆ ನಡೆದ ಗುಂಡಿನ ದಾಳಿಗೆ ಸುಪಾರಿ ನೀಡಿದ್ದು ಬಹಿರಂಗವಾಗಿದ್ದು, ಸುಪಾರಿ ನೀಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಗುಂಡಿನ ದಾಳಿ ನಡೆಸಿದವನು ಸೇರಿದಂತೆ ಪ್ರಮುಖ ಮೂವರು ಆರೋಪಿಗಳಿಗೆ ತೀವ್ರ ಶೋಧ ನಡೆಸಿದ್ದಾಗಿ ಎಸ್ಪಿ ಕುಲದೀಪ ಜೈನ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದರು. ಈ ತಿಂಗಳ 8ರಂದು ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಐದು ಗುಂಡುಗಳು ತಾಗಿ ಭಾಗಪ್ಪ ತೀವ್ರ ಗಾಯಗೊಂಡಿದ್ದ. ಈ ಪ್ರಕರಣದ ಬಳಿಕ ತೀವ್ರಶೋಧ ನಡೆಸಿದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿ, ಹಳೆಯ ದ್ವೇಷದಿಂದ ಈ ಕೃತ್ಯ ಎಸಗಿದ್ದನ್ನು ಪತ್ತೆ ಹಚ್ಚಿದ್ದಾರೆ. ಭಾಗಪ್ಪನಿಂದ ಜೀವ ಭಯ ಹೊಂದಿದ್ದವರು ಸುಪಾರಿ ನೀಡಿದ್ದು, ಹತ್ಯೆಗೆ ಯತ್ನಿಸಿ ಗುಂಡಿನ ದಾಳಿ ನಡೆಸಿದ ಪ್ರಮುಖ ಆರೋಪಿ ಮಾತ್ರ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ವಿವರಿಸಿದರು. ಬಸಪ್ಪ ಹರಿಜನ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ಹೇಳದಂತೆ ಜೀವ ಬೆದರಿಕೆ ಹಾಕಿದ್ದ ಎಂಬ ಕಾರಣಕ್ಕೆ ಭಾಗಪ್ಪನ ಹತ್ಯೆಗೆ ತಡಕಲ್ಲ ಗ್ರಾಮದ ರಮೇಶ ಬಾಬುರಾವ ಹಡಪದ (44)ಗೆ ಆಲಮೇಲದ ಬ್ಯಾಡಗಿಹಾಳದ ಭೀಮಶ್ಯಾಯಲ್ಲಪ್ಪ ಹರಿಜನ (36), ಶಿರವಾಳ ಗ್ರಾಮದ ನಾಮದೇವ ಲಕ್ಷ್ಮಣ ದೊಡಮನಿ (50), ರಜಾಕ್‌ ಮಮ್ಮುಲಾಲ್‌ ಉರ್ಫ್‌ ಮೊಹ್ಮದ್‌ ಸಾಬ ಕಾಂಬಳೆ ಎಂಬುವರು ಸುಪಾರಿ ನೀಡಿದ್ದರು. ಈ ಪ್ರಕರಣದಲ್ಲಿ ಭಾಸಗಿ ಗ್ರಾಮದ ಪ್ರಭು ತುಕಾರಾಮ ಜಮಾದಾರ (48) ಹಾಗೂ ಶಿರವಾಳ ಗ್ರಾಮದ ಮಲ್ಲೇಶಪ್ಪ ಭೀಮಶ್ಯಾ ಬಿಂಜಗೇರಿ (48) ಅವರನ್ನೂ ಪೊಲೀಸರು
ಬಂಧಿಸಿದ್ದಾಗಿ ಹೇಳಿದರು. ಎಎಸ್ಪಿ ಡಾ| ಶಿವಕುಮಾರ ಗುಣಾರೆ ನೇತೃತ್ವದಲ್ಲಿ ಡಿವೈಎಸ್ಪಿ ಗಳಾದ ರವೀಂದ್ರ ಶಿರೂರ, ಡಿ.ಅಶೋಕ, ಸಿಪಿಐ ಸುನೀಲ ಕಾಂಬಳೆ, ಸಿಪಿಐ ರವೀಂದ್ರ ನಾಯ್ಕೋಡಿ, ನಚಿಕೇತ ಜನಗೌಡರ ಅವರಿದ್ದ ತನಿಖಾ ತಂಡದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಭಾಗಪ್ಪನ ಹತ್ಯೆಗೆ ತಿಂಗಳಿಂದ ಸಂಚು ನಡೆಸಿದ್ದು, ಕೃತ್ಯಕ್ಕೆ ಮುನ್ನ ಆರೋಪಿಗಳು ಕೋರ್ಟ್‌ ಆವರಣದ ಪರಿಸರ ಪರಿಶೀಲಿಸಿದ್ದರು. ಆ. 8ರಂದು ಬುಲೇರೋ ವಾಹನದಲ್ಲಿ ಬಂದಿದ್ದ ಇಬ್ಬರಲ್ಲಿ ಒಬ್ಬ ಭಾಗಪ್ಪನ ಮೇಲೆ ಕೋರ್ಟ್‌ ಆವರಣದಲ್ಲೇ ಕಂಟ್ರಿ ಪಿಸ್ತೂಲ್‌ ಮೂಲಕ ಶೂಟ್‌ ಮಾಡಿ ಪರಾರಿ ಆಗಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದರು. ಘಟನೆಯಲ್ಲಿ ಗಾಯಗೊಂಡಿರುವ ಭಾಗಪ್ಪ ಹರಿಜನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮಾತನಾಡುವ ಸ್ಥಿತಿಯಲ್ಲಿರುವ ಆತನಿಂದ ಹೇಳಿಕೆ ಪಡೆಯಲಾಗಿದೆ. ಅಪರಾಧ ಕೃತ್ಯಗಳ ಹಿನ್ನೆಲೆ ಆತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವಂತೆ ಜಿಲ್ಲಾಡಳಿತಕ್ಕೆ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ದೊರೆತಿಲ್ಲ. ಬಸಪ್ಪ ಹರಿಜನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಭಾಗಪ್ಪ, ಜಾಮೀನಿನ ಮೇಲೆ ಹೊರಗಿದ್ದ. ಈ ಪ್ರಕರಣದಲ್ಲೇ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬಂದಿದ್ದಾಗ ಗುಂಡಿನ ದಾಳಿ ಘಟನೆ ಜರುಗಿದೆ. ಇರದಲ್ಲಿ ಜಿಲ್ಲಾ ಗುಪ್ತಚರ ವ್ಯವಸ್ಥೆ ವಿಫಲತೆ ಕಂಡು ಬಂದಿಲ್ಲ ಎಂದು ವಿವರಿಸಿದರು. ಎಎಸ್ಪಿ ಡಾ.ಶಿವಕುಮಾರ ಗುಣಾರೆ, ಡಿವೈಎಸ್‌ ಪಿಗಳಾದ ರವೀಂದ್ರ ಶಿರೂರ, ಅಶೋಕ ಇದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next