ಬಾಗಲಕೋಟೆ: ಸಮಾಜದ ಕೆಳಸ್ತರದಲ್ಲಿ ಹುಟ್ಟಿ ಬದುಕನ್ನೇ ಸವಾಲಾಗಿ ಸ್ವೀಕರಿಸಿ, ಮನುಕುಲಕ್ಕೆ ಮಾದರಿ ಎನ್ನುವಂತಹ ಕೊಡುಗೆ ನೀಡಿದ ಮಹಾನ್ ಚೇತನ ಡಾ|ಬಾಬು ಜಗಜೀವನರಾಮ್ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
Advertisement
ಜಿಪಂ ನೂತನ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ|ಬಾಬು ಜಗಜೀವನರಾಮ್117ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಗಬಾರದೆಂಬ ದೃಢ ನಿರ್ಧಾರ ಇಟ್ಟಿಕೊಂಡು ಅವರ ನೈತಿಕ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರು ಸಾಗಿ ಬಂದ ದಾರಿ ಇಂದಿನ ಯುವಜನತೆಗೆ ಆದರ್ಶವಾದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು. ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರರಾದ ಡಾ|ಬಾಬು ಜಗಜೀವನರಾಮ್ ಅವರ ಕಂಡಂತಹ ಕಷ್ಟಗಳು, ಹೋರಾಟದ ಬದುಕು ಬೆಳೆದು ಬಂದ ದಾರಿ ಇಂದಿನ ಯುವ ಜನರಿಗೆ ದಾರಿದೀಪವಾಗಿದೆ. ಸ್ವಾಭಿಮಾನ ಭಾರತಕ್ಕಾಗಿ ಆಹಾರ
ಸಮತೋಲ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಸಿರು ಕ್ರಾಂತಿ ಹುಟ್ಟುಹಾಕಿದ್ದರು. ಶೋಷಿತ ಮತ್ತು ದುರ್ಬಲರ ವರ್ಗದವರಿಗೂ ತಮ್ಮ ಜೀವನವನ್ನೇ ಮೀಸಲಾಗಿಟ್ಟಿದ್ದರು ಎಂದು ಹೇಳಿದರು.
Related Articles
Advertisement