Advertisement
ನನ್ನ ಅವಧಿಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಭೂಮಿ ಪಡೆದಿರುವುದು ಖುಷಿ ತಂದಿದೆ. ಅಲ್ಲದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ 2 ವರ್ಷಗಳ ಸೇವಾ ಅವಧಿ ತೃಪ್ತಿ ತಂದಿದೆ ಎಂದು ಸೇವಾ ನಿವೃತ್ತಿ ಹೊಂದಿದ ಪ್ರಧಾನ ಜಿಲ್ಲಾ ಮತ್ತು ಸತ್ಯ ನ್ಯಾಯಾಧೀಶ ಜಿ.ಎಸ್. ದೇಶಪಾಂಡೆ ಹೇಳಿದರು.
Related Articles
Advertisement
ಕೋರ್ಟ್‌ನಲ್ಲಿ ಕೇಸ್‌ಗಳಿಗೆ ಒಳ್ಳೆಯ ತೀರ್ಪು ನೀಡಬೇಕಾದರೆ ವಕೀಲರ ಪಾತ್ರ ಮುಖ್ಯವಾಗಿರುತ್ತದೆ. ಬಾಗಲಕೋಟೆ ಜಿಲ್ಲೆಗೆಆಗಮಿಸಿದಾಗ ಎಲ್‌ಐಸಿ ಕೇಸ್‌ಗಳು ಬಹಳಷ್ಟು ಇದ್ದು, ಅತಿಹೆಚ್ಚು ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದರು. ನಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ 2.13 ಎಕರೆ ಜಾಗವನ್ನು ಬಿಟಿಡಿಎದಿಂದ ಪಡೆಯಲಾಗಿದೆ. ಕೋರ್ಟ್
ಆವರಣದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದ್ದು, ಅನುದಾನ ಬರುವುದಷ್ಟೇ ಬಾಕಿ ಇರುತ್ತದೆ. ಉತ್ತಮವಾಗಿ ಸೇವೆ ಮಾಡಲು ಎಲ್ಲ ವಕೀಲರು ಸಹಕಾರ ನೀಡಿದ್ದು, ಅವರಿಗೆ ಧನ್ಯವಾದ ತಿಳಿಸಿದರು. ನೂತನವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ ನೇರಳೆ ಮಾತನಾಡಿ, ಈಗಾಗಲೇ ಮೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಬಾಗಲಕೋಟೆಗೆ ಬಂದಿದ್ದು, ಹಿಂದೆ ನೀಡಿದ ಸಹಕಾರವನ್ನು ತಮಗೂ ನೀಡಲು
ತಿಳಿಸಿದರು. ಹೆಚ್ಚುವರಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಜಿ.ಎ. ಮೂಲಿಮನಿ, 1ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾದೀಶೆ ಹೇಮಾ ಪಸ್ತಾಪುರ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, ದಿವಾಣಿ ನ್ಯಾಯಾಧೀಶ ಮುರುಗೇಂದ್ರ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಪಿ.ಪೂಜಾರ, ಸೇರಿದಂತೆ ಜಿಲ್ಲಾ ನ್ಯಾಯಾಲಯದ
ನ್ಯಾಯಾದೀಶರು, ವಕೀಲರು ಉಪಸ್ಥಿತರಿದ್ದರು. ಕುಂಬಾರ ವಕೀಲರು ಪರಿಚಯಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಹಾವರಗಿ ಸ್ವಾಗತಿಸಿದರು.