ಬಾಗಲಕೋಟೆ: ಕೃಷಿ ಡಿಪ್ಲೋಮಾ ಪದವೀಧರರು ವಿಶ್ವವಿದ್ಯಾಲಯಗಳಿಂದ ಬಿಡುಗಡೆಯಾದ ಹೊಸ ಸಂಶೋಧನೆಗಳನ್ನು ರೈತರಿಗೆ ತಲುಪಿಸಬೇಕು ಹಾಗೂ ರೈತರಿಗೆ ಉತ್ತಮ ಮಾರ್ಗದರ್ಶನ ನೀಡಿ ಕಾಳಜಿಯುತ ಕಾರ್ಯನಿರ್ವಹಣೆ ಮಾಡಿ ಮಣ್ಣಿನ
ಆರೋಗ್ಯ ಕಾಪಾಡಿ ವಿಷಮುಕ್ತ ಆಹಾರ ಉತ್ಪಾದನೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.
ನಗರದ ಹೊರವಲಯದಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ಜರುಗಿದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ಡಿಪ್ಲೋಮಾ ಪದವಿಮಾಣ ಪತ್ರಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ತೋಟಗಾರಿಕೆ ವಿವಿಯ ಪ್ರಭಾರಿ ಕುಲಪತಿ ಹಾಗೂ ಶಿಕ್ಷಣ ನಿರ್ದೇಶಕ ಡಾ|ಎನ್.ಕೆ. ಹೆಗಡೆ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ಡಿಪ್ಲೋಮಾ ಪದವಿದರರು 48 ವಾರಗಳ ಕಲಿಕೆಯಲ್ಲಿ ಹೊಸ ಸಂಶೋಧನೆಗಳನ್ನು ಕಲಿತು ಕ್ಷೇತ್ರ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ರೈತರಿಗೆ ಮಾಹಿತಿ ನೀಡಬೇಕು. ನೈಸರ್ಗಿಕ ಕೃಷಿ ಹೆಚ್ಚು ಪ್ರೋತ್ಸಾಹ ನೀಡಿ ವಿಷಮುಕ್ತ ಬೆಳೆ ಬೆಳೆದು ಕ್ಯಾನ್ಸರ ನಂತಹ ಭಯಾನಕ ರೋಗಗಳಿಂದ ಮುಕ್ತರಾಗಬೇಕು ಎಂದು ತಿಳಿಸಿದರು.
ಇದೇ ವೇಳೆ 36 ಜನ ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಿಸಿದರು. ಪ್ರಥಮ ಸ್ಥಾನ ಪಡೆದ ಮಹೇಶ ಕೋಟಿ ಮತ್ತು ಜಯತೀರ್ಥ
ದೇಸಾಯಿ ಅವರಿಗೆ ಬಂಗಾರದ ಪ್ರಮಾಣ ಪತ್ರ, ದ್ವಿತೀಯ ಸ್ಥಾನ ಪಡೆದ ಮಂಜುನಾಥ ಅಂಗಡಿ ಇವರಿಗೆ ಬೆಳ್ಳಿ ಪ್ರಮಾಣ ಪತ್ರ ಹಾಗೂ ತೃತೀಯ ಸ್ಥಾನ ಪಡೆದ ಪ್ರಕಾಶ ಅಂಗಡಿ ಇವರಿಗೆ ಕಂಚಿನ ಪ್ರಮಾಣ ಪತ್ರ ನೀಡಿ ಗೌರವಿಸಿದರು.
Related Articles
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಡಿಎಇಎಸ್‌ಐ ಮತ್ತು ಎಸ್‌ಎಎಂಇಟಿಐ (ಉತ್ತರ) ಪ್ರಾಧ್ಯಾಪಕರು ಹಾಗೂ ರಾಜ್ಯ ನೋಡಲ್ ಅ ಕಾರಿ ಡಾ|ಎಂ. ಗೋಪಾಲ ಪ್ರಮಾಣ ವಚನ ಬೋಧನೆ ಮಾಡಿದರು.
ತೋವಿವಿ ಸಂಶೋಧನಾ ನಿರ್ದೇಶಕ ಡಾ|ಎಚ್.ಪಿ. ಮಹೇಶ್ವರಪ್ಪ, ಡಿಎಇಎಸ್‌ಐ ನೋಡಲ್ ಅ ಧಿ ಹಾಗೂ ಪ್ರಾಧ್ಯಾಪಕ
ಡಾ|ವಸಂತ ಗಾಣಿಗೇರ, ಜಂಟಿ ಕೃಷಿ ಇಲಾಖೆಯ ಸದಾಶಿವ ಅಲ್ಲೂಳ್ಳಿ, ಡಿಎಇಎಸ್‌ಐ ಫೆಸಿಲಿಟೇಟರ ಚನ್ನಮ್ಮ ಕಮತಿ, ಎಫ್‌ಪಿಒ ಫೆಸಿಲಿಟೇಟರ ಪೂರ್ಣಿಮಾ ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು.
ತೋವಿವಿಯ ತಾಂತ್ರಿಕ ಅಧಿಕಾರಿ ಮತ್ತು ಪ್ರೊ. ಡಾ|ಕಾಂತೇಶ ಗಾಂಡೋಳಕರ ಸ್ವಾಗತಿಸಿದರು. ತೋ.ಮ.ವಿ ಸಹಾಯಕ ಪ್ರಾಧ್ಯಾಪಕ ಡಾ|ಎಸ್. ಎಂ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಿಎಇಎಸ್‌ಐ ಸಂಯೋಜಕ ಶ್ರಿ ವಿಶ್ವೇಶ್ವರ ವಂದಿಸಿದರು.