Advertisement

42 ಟನ್‌ ಅಕ್ರಮ ಪಡಿತರ ಅಕ್ಕಿ ವಶ

02:32 PM Oct 14, 2021 | Team Udayavani |

ಜಮಖಂಡಿ: ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 42 ಟನ್‌ ತೂಕದಅಕ್ಕಿ ಮೂಟೆಯ ಚೀಲಗಳನ್ನುತಹಶೀಲ್ದಾರ್‌, ಆಹಾರ ಇಲಾಖೆ,ಹಾಗೂ ಪೊಲೀಸರು ಜಂಟಿಯಾಗಿದಾಳಿ ನಡೆಸಿ ವಶಪಡಿಸಿಕೊಂಡ ಘಟನೆನಗರದ ಹೊರವಲಯದಲ್ಲಿ ನಡೆದಿದೆ.

Advertisement

ನಂದೆಪ್ಪ ಸಂಗಪ್ಪ ಉಳ್ಳಾಗಡ್ಡಿಎಂಬುವರ ಜಮೀನಿನ ಪತ್ರಾಸ್‌ಶೆಡ್‌ನ‌ಲ್ಲಿ ಅಕ್ರಮವಾಗಿ ಸಂಗ್ರಹಿಸಿಇಡಲಾಗಿದ್ದ ಅಂದಾಜು 6.30ಲಕ್ಷ ಮೌಲ್ಯದ 889 ಅಕ್ಕಿ ತುಂಬಿದಚೀಲಗಳನ್ನು ಲಾರಿಯಲ್ಲಿ ತುಂಬುವಸಂದರ್ಭದಲ್ಲಿ ಖಚಿತ ಮಾಹಿತಿ ಪಡೆದುಅಧಿ ಕಾರಿಗಳು ದಾಳಿ ನಡೆಸಿದರು.

ಮಹಿಳೆ ಸೇರಿದಂತೆ ಆರು ಜನರನ್ನುಬಂಧಿಸಲಾಗಿದೆ. ಲಾರಿ, ಟಾಟಾ ಗೂಡ್ಸ್‌ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. 11ಜನರ ವಿರುದ್ಧ ಗ್ರಾಮೀಣ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.ತಹಶೀಲ್ದಾರ್‌ ಪ್ರಶಾಂತ ಚನಗೊಂಡ,ಆಹಾರ ಇಲಾಖೆ ನಿರೀಕ್ಷಕ ನಿಂಗಪ್ಪದೇಸಾಯಿ, ಶಿರಸ್ತದಾರ ಎಸ್‌.ಡಿ.ದಳವಾಯಿ, ಶಹರ ಠಾಣೆ ಪಿಎಸ್‌ಐ.ಬಸವರಾಜ ಕೊಣ್ಣೂರೆ, ಗ್ರಾಮೀಣಠಾಣೆ ಪಿಎಸ್‌ಐ ವಸಂತ ಬಂಡಗಾರ,ಎಎಸ್‌ಐಗಳಾದ ಎಸ್‌.ಎಸ್‌.ನಾಯಕ,ಬಿ.ಎಸ್‌.ಬಿರಾದರ, ಗ್ರಾಮ ಲೆಕ್ಕಾ ಧಿಕಾರಿಮಾಳಪ್ಪ ರೇವನ್ನವರ, ಆರಕ್ಷಕರಾದಎಚ್‌.ಸಿ.ಕುಂಬಾರ, ಸಿ.ಎಂ.ಕುಂಬಾರ,ಬಿ.ವಿ.ಗುಲಬಾಳ, ವೈ.ಐ.ಕಾಜಗಾರ,ಜಿ.ಟಿ. ಮೋಕಾಶಿ, ನಾಗರಾಜ ಬಿಸಲದ್ದಿನ್ನಿ,ಎಂ.ಎಲ್‌.ಭಜಂತ್ರಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next