ಬಾಗಲಕೋಟೆ : ಡೆತ್ ನೋಟ್ ಬರೆದಿಟ್ಟು ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯಲ್ಲಿ ನಡೆದಿದೆ.
ತಾಯಿ ಉಮಾ ಸುರೇಶ ಮಾಸರೆಡ್ಡಿ(42) ಹಾಗೂ ಇಬ್ಬರು ಮಕ್ಕಳಾದ ಐಶ್ವರ್ಯ(23) ಹಾಗೂ ಸೌಂದರ್ಯ(19) ಮೃತ ದುರ್ದೈವಿಗಳು.
ಮೃತರು ಹುನಗುಂದ ತಾಲೂಕಿನ ಸೂಳೇಬಾವಿ ಗ್ರಾಮದವರು ಎನ್ನುವ ಮಾಹಿತಿ ಲಭ್ಯವಾಗಿದ್ದು, ಐಶ್ವರ್ಯ ಬೆಂಗಳೂರಲ್ಲಿ ಬಿಇ ಸಿವಿಲ್ ಓದುತ್ತಿದ್ದರೆ, ಸೌಂದರ್ಯ ಬಾಗಲಕೋಟೆಯಲ್ಲಿ ಬಿಎಸ್ಸಿ ಓದುತ್ತಿದ್ದಳು ಎನ್ನಲಾಗಿದೆ.
ಕಮತಗಿ ಪಟ್ಟಣದ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹವನ್ನು ನೀರಿನಿಂದ ಮೇಲೆ ತಂದಿದ್ದಾರೆ.
ಮೇಲ್ನೋಟಕ್ಕೆ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗಿದ್ದು ಡೆತ್ ನೋಟ್ ಒಂದು ಪತ್ತೆಯಾಗಿದೆ ಆದರೆ ಅದರಲ್ಲಿ ಏನಿದೆ ಎಂದು ಇನ್ನಷ್ಟೇ ತಿಳಿದುಬರಬೇಕಾಗಿದೆ.
Related Articles
ಅಮೀನಗಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕುಷ್ಟಗಿ: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸ್ನೇಹಿತರ ದುರಂತ ಅಂತ್ಯ