Advertisement
ಕೊಲೆಯಾದ ಯುವ ಜೋಡಿಗಳನ್ನು ವಿಶ್ವನಾಥ ನೆಲಗಿ( 21) ಹಾಗೂ 17 ವರ್ಷದ ಅಪ್ರಾಪ್ತ ಬಾಲಕಿ ಎಂದು ಗುರುತಿಸಲಾಗಿದೆ. ಈ ಘಟನೆಗೆ ಅಪ್ರಾಪ್ತ ಬಾಲಕಿಯ ತಂದೆ ಬೇವಿನಮಟ್ಟಿಯ ಪರಸಪ್ಪ ಕರಡಿ ಈ ಮರ್ಯಾದಿ ಹತ್ಯಯ ಮೂಲ ರೂವಾರಿ ಎನ್ನವುದು ಅಚ್ಚರಿಗೆ ಕಾರಣವಾಗಿದೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳಾದ ಅಪ್ರಾಪ್ತ ಬಾಲಕಿ ತಂದೆ ಪರಸಪ್ಪ ಕರಡಿ, ಸಂಬಂಧಿಕರಾದ ರವಿ ದುಂಡಪ್ಪ ಹುಲ್ಲನ್ನವರ, ಹನುಮಂತ ಸಿದ್ದಪ್ಪ ಮಲ್ಲಾಡದ, ಬೀರಪ್ಪ ಯಲ್ಲಪ್ಪ ದಳವಾಯಿ ಬಂಧಿತರು.
ನದಿಗೆ ಎಸೆದಿದ್ದಾರೆ. ಇದು ವರೆಗೆ ಶವಗಳು ಪತ್ತೆಯಾಗಿಲ್ಲ.
Related Articles
Advertisement
ಇದನ್ನೂ ಓದಿ : ಪಿಎಂ ಮೋದಿ ಅವರಿಂದ ದೇಶಿ ನಿರ್ಮಿತ ತರಬೇತಿ ವಿಮಾನ ಎಚ್‌ಟಿಟಿ-40 ಲೋಕಾರ್ಪಣೆ
ಘಟನೆ ನಡೆದಿದ್ದು ಹೇಗೆ..? : ಬೇವಿನಮಟ್ಟಿ ಗ್ರಾಮದ ಒಂದು ಜಾತಿಯ ಅಪ್ರಾಪ್ತ ಹುಡುಗಿ ಅದೇ ಗ್ರಾಮದ ವಿಶ್ವನಾಥ ನೆಲಗಿ(24) ಯುವಕ ಕಳೆದ ಎರಡ್ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಾರು. ಈ ವಿಷಯ ಬಾಲಕಿ ಕುಟುಂಬಸ್ಥರು ಒಪ್ಪಲಿಲ್ಲ. ಬುದ್ದಿಮಾತು ಹೇಳಿದ್ದರು ಬಾಲಕಿ ಕೇಳಿರಲಿಲ್ಲ. ಅಲ್ಲದೆ ವಿಶ್ವನಾಥ ಮೇಲೆ ಹಲ್ಲೆ ನಡೆಸಿದ್ದರಿಂದ ಅವರು ಕುಟುಂಬಸ್ಥರು ಅವನನ್ನು ಬೇರೆಡೆ ಕೆಲಸಕ್ಕೆ ಕಳುಹಿಸಿದ್ದರು. ಆದರು ಕೂಡಾ ಮೊಬೈಲ್ ಮೂಲಕ ಪ್ರೇಮಿಗಳು ಸಂಪರ್ಕದಲ್ಲಿ ಇದ್ದರು. ಹುಡುಗಿಯ ಮನೆಯವರು ಮೊಬೈಲ್ ನೋಡುತ್ತಿದ್ದಾಗ ವಿಶ್ವನಾಥನ ಮೆಸೇಜ್ ಕಂಡು ಬಂದಿತ್ತು. ಇದರಿಂದ ಆಕ್ರೋಶಗೊಂಡ ಹುಡುಗಿ ಮನೆಯವರು ನಿಮ್ಮಿಬ್ಬರನ್ನು ಒಂದು ಮಾಡುತ್ತೇವೆ ಅಂತ ನಂಬಿಸಿ. ಆಕೆಯ ಕಡೆಯಿಂದ ಯುವಕನಿಗೆ ಊರಿಗೆ ಬರುವಂತೆ ಕರೆ ಮಾಡಿಸಿದ್ದಾರೆ. ವಿಶ್ವನಾಥ ಕಾಸರಗೂಡನಿಂದ ಗದಗ ಜಿಲ್ಲೆಯ ನರಗುಂದ ಕಡೆ ಬರುವಾಗ. ನಿನ್ನನ್ನು ಆತನ ಜೊತೆ ಬಿಟ್ಟು ಬರೋದಾಗಿ ಹೇಳಿದ ಅಪ್ರಾಪ್ತೆಯ ಮಾವ ಬಾಗಪ್ಪ, ಆಕೆಯ ಸಹೋದರ(ಚಿಕ್ಕಮ್ಮ ಮಗ)ರವಿ ಹುಲ್ಲಣ್ಣವರ, ಮಾವಂದಿರಾದ ಹನುಮಂತ ಮಲ್ನಾಡದ, ಬೀರಪ್ಪ ದಳವಾಯಿ ಆಕೆಯ ಜೊತೆ ತೆರಳಿದ್ದಾರೆ. ಸೆಪ್ಟೆಂಬರ್ 30 ರಂದು ರಾತ್ರಿ ಒಂದು ಬೊಲೆರೊ ಹಾಗೂ ಟಾಟಾ ಏಸ್ ತೆಗೆದುಕೊಂಡು ಗದಗ ಜಿಲ್ಲೆಯ ನರಗುಂದ ಕಡೆ ಹೋಗ್ತಾರೆ. ಅಲ್ಲಿ ಬಸ್ ನಿಲ್ದಾಣದಿಂದ ವಿಶ್ವನಾಥನನ್ನು ಬೊಲೆರೊ ವಾಹನದಲ್ಲಿ ಹಾಕಿಕೊಂಡು ಅ. 1 ರಂದು ಬೆಳಗಿನ ಜಾವ ಬೊಲೆರೊ ವಾಹನದಲ್ಲಿದ್ದ ವಿಶ್ವನಾಥ ಮರ್ಮಾಂಗಕ್ಕೆ ಹಾಗೂ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಟಾಟಾ ಏಸ್‌ನಲ್ಲಿದ್ದ ರಾಜೇಶ್ವರಿಯ ಕತ್ತನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದರೆ. ನಂತರ ವಿಜಯಪುರ ಜಿಲ್ಲೆ ಆಲಮಟ್ಟಿ ರಸ್ತೆ ಸೇತುವೆಯಿಂದ ಕೃಷ್ಣಾ ನದಿಗೆ ಶವ ಎಸೆದಿದ್ದಾರೆ. ನಂತರ ನಾಪತ್ತೆ ಕುರಿತು ದೂರು ನೀಡಿದಾಗ ಪೊಲೀಸರ ತನಿಖೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ಪೂರ್ಣ ಬಳಿಕ ನಿಜವಾದ ಘಟನೆಯ ಹಿನ್ನೆಲೆ
ಹೊರಗೆ ಬರಲಿದೆ.