Advertisement

ಬೇಂದ್ರೆ ಜಗತ್ತಿನ ಜ್ಞಾನದ ಬೆಳಕು: ಇಟ್ಟನ್ನವರ

04:00 PM Feb 03, 2021 | Team Udayavani |

ಬೀಳಗಿ: ಬೇಂದ್ರೆ ಅವರು ಜೀವನದಲ್ಲಿ ನೊಂದು ಬೆಂದು ಜಗತ್ತಿಗೆ ಜ್ಞಾನದ ದೀಪವನು ಹಚ್ಚಿದವರು ಎಂದು
ಹಿರಿಯ ಸಾಹಿತಿ ಶ್ರೀರಾಮ ಇಟ್ಟನ್ನವರ ಹೇಳಿದರು.

Advertisement

ಕರ್ನಾಟಕ ಜಾನಪದ ಪರಿಷತ್‌, ರಜನೀಶ ಪ್ರಕಾಶನ, ಬೀಳಗಿಯ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದ ಸ್ವಾಮಿ
ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೇಂದ್ರೆ ಅವರ ನಾಟಕಗಳನ್ನು ರಚಿಸಿ ಪ್ರಖ್ಯಾತಿ ಪಡೆದವರು. ಬಯಲಾಟಗಳು ಮುಂದಿನ ದಿನಮಾನಗಳಲ್ಲಿ ವಿರಳವಾಗುತ್ತವೆ. ಅವುಗಳನ್ನು ಉಳಿಸಲು ಸಂಸ್ಕೃತಿಕ ಮನಸ್ಸುಗಳು ಒಂದಾಗಬೇಕು ಹೇಳಿದರು. ಡಾ| ರಾಜಶೇಖರ ಮಠಪತಿ ಮಾತನಾಡಿ, ಬೇಂದ್ರೆ ಬದುಕು ಹೇಗಿತ್ತೆಂದರೆ, ಅವರು ಬರೆಯುವ ಕಾವ್ಯಗಳಂತೆ ತಮ್ಮ ಜೀವನದಲ್ಲಿ ರೂಢಿಸಿಕೊಂಡವರು. ಅವರ ಕಾವ್ಯಗಳು ಅಧ್ಯಯನಕ್ಕೆ ದೊರಕಿದಷ್ಠು ಹೆಚ್ಚು ಪ್ರಚಲಿತವಾಗಿವೆ ಎಂದರು.

ಚಿತ್ರಸೇನೆ ಗಂಧರ್ವ, ಬೇಂದ್ರೆ ಕಾವ್ಯದ ದೇಶಿಯತೆ ಎಂಬ ಎರಡು ಪುಸ್ತಕಗಳನ್ನ ಬಿಡುಗಡೆ ಮಾಡಲಾಯಿತು. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಸಾನಿದ್ಯ ವಹಿಸಿದ್ದರು. ಪ್ರಾಚಾರ್ಯ ಎಚ್‌.ಬಿ. ಧರ್ಮಣ್ಣವರ, ಕಲ್ಮಠದ ಶ್ರೀ ಗುರುಪಾದ ಮಹಾಸ್ವಾಮಿಗಳು, ಪತ್ರಕರ್ತರಾದ ವೀರೇಂದ್ರ ಶೀಲವಂತ, ಕಿರಣ ಬಾಳಗೋಳ ಇದ್ದರು.

ಓದಿ : ಹಸು ಮೈ ತೊಳೆಯಲು ಹೋದ ಇಬ್ಬರು ನೀರು ಪಾಲು

Advertisement
Advertisement

Udayavani is now on Telegram. Click here to join our channel and stay updated with the latest news.

Next