Advertisement

ಸಾಮಾಜಿಕ ನ್ಯಾಯದ ಮಹಾನ್‌ ಗ್ರಂಥ

08:01 PM Apr 15, 2021 | Team Udayavani |

ಬಾದಾಮಿ: ಡಾ|ಬಿ.ಆರ್‌.ಅಂಬೇಡ್ಕರ ಅವರು ದೀನ ದಲಿತರ, ಶೋಷಿತರ ಧ್ವನಿಯಾಗಿ ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟು ದೇಶದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ನ್ಯಾಯ ದೊರಕುವಂತೆ ಮಾಡಿರುವ ಮಹಾ ಮಾನವತವಾದಿಯಾಗಿ ಕಂಗೊಳಿಸಿದರು ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ ಹೇಳಿದರು.

Advertisement

ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬುಧವಾರ ಡಾ|ಬಾಬು ಜಗಜೀವನ್‌ ರಾಮ್‌ ಸಮುದಾಯ ಭವನದಲ್ಲಿ ಜರುಗಿದ ಡಾ|ಬಿ.ಆರ್‌. ಅಂಬೇಡ್ಕರ ಅವರ 130 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ ಅವರು ರಚಿಸಿರುವ ಸಂವಿಧಾನ ಎಂಬ ಗ್ರಂಥ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ ನ್ಯಾಯದ ಮಹಾನ್‌ ಗ್ರಂಥವಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್‌ ಸುಹಾಸ್‌ ಇಂಗಳೆ ಮಾತನಾಡಿ, ಅಂಬೇಡ್ಕರ ಅವರು ದೇಶಕ್ಕೆ ಮತ್ತು ದೇಶದ ಪ್ರಜೆಗಳಿಗೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮುತ್ತಣ್ಣ ಬೆಣ್ಣೂರ ಡಾ|ಬಿ.ಆರ್‌. ಅಂಬೇಡ್ಕರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಪಿ. ಪಾಟೀಲ ಸ್ವಾಗತಿಸಿದರು, ನಧಾಫ ವಂದಿಸಿದರು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ರಾಮವ್ವ ಪೂಜಾರ, ಸದಸ್ಯರಾದ ನಾಗರಾಜ ಕಾಚಟ್ಟಿ, ರೆಹಮಾನ ಕೆರಕಲಮಟ್ಟಿ, ಆರ್‌.ಎಫ್‌. ಬಾಗವಾನ, ತಾ.ಪಂ. ಅಧ್ಯಕ್ಷೆ ರೇಖಾ ತಿರಕಪ್ಪನವರ, ಪ್ರಭಾರಿ ಕ್ಷೇತ್ರ ಶಿಕ್ಷಣಾ  ಧಿಕಾರಿ ಎಂ.ಪಿ.ಮಾಗಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ಅಥಣಿ, ಸಿಪಿಐ ರಮೇಶ ಹಾನಾಪೂರ, ಪುರಸಭೆ ಮುಖ್ಯಾ  ಧಿಕಾರಿ ಜ್ಯೋತಿಗಿರೀಶ, ಸೇರಿದಂತೆ ತಾಲೂಕಾ ಮಟ್ಟದ ಅಧಿ ಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.

ಆಚರಣೆ: ಇಲ್ಲಿನ ನಗರ ಯೋಜನಾ ಪ್ರಾ  ಧಿಕಾರ ಕಛೇರಿಯಲ್ಲಿ ಅಧ್ಯಕ್ಷ ನಾಗರಾಜ ಕಾಚಟ್ಟಿ, ಸದಸ್ಯರಾದ ಎ.ಎ.ಪೀರಜಾದೆ, ಬೇಲೂರಪ್ಪ ವಡ್ಡರ, ರೆಹಮಾನ ಕೆರಕಲಮಟ್ಟಿ .ಡಾ|ಬಿ.ಆರ್‌. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅದೇ ರೀತಿ ಸರಕಾರಿ ಕಛೇರಿಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಬಿಜೆಪಿ, ಕಾಂಗ್ರೇಸ್‌ ಮತ್ತು ಜೆಡಿಎಸ್‌ ಕಾರ್ಯಾಲಯದಲ್ಲಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next