Advertisement

ಬದರಿನಾರಾಯಣ ಸ್ವಾಮಿ ದೇಗುಲ ನೆಲಕ್ಕುರುಳುವ ಭೀತಿ

04:49 PM Aug 08, 2022 | Team Udayavani |

ಮೇಲುಕೋಟೆ: ದಕ್ಷಿಣ ಬದರಿಕಾಶ್ರಮವೆಂದೇ ಪ್ರಖ್ಯಾತವಾದ ಮೇಲುಕೋಟೆಯ ಶ್ರೀಬದರಿ ನಾರಾಯಣಸ್ವಾಮಿ ದೇಗುಲ ಮಳೆ ಹಿನ್ನೆಲೆಯಲ್ಲಿ ಅಪಾಯದ ಅಂಚಿನಲ್ಲಿದೆ.

Advertisement

ನವೀಕರಣ ಅವಶ್ಯ: ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯಕ್ಕಿಂತಲೂ ಪುರಾತನ ದೇಗುಲ ಎಂಬ ಇತಿಹಾಸ ಹೊಂದಿರುವ ಬದರಿನಾರಾ ಯಣನ ಸನ್ನಿಧಿಯ ಇಡೀ ಕಟ್ಟಡ ಸೋರುತ್ತಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗುತ್ತಿದೆ. ಇಲ್ಲಿನ ಕಲ್ಲಿನ ಬೃಹತ್‌ ತೊಲೆಯೊಂದು ಕುಸಿದಿದ್ದು, ಇತರ ತೊಲೆಗಳು ಶಿಥಿಲಾವಸ್ಥೆ ತಲುಪಿ ಕುಸಿಯುವ ಹಂತದಲ್ಲಿವೆ. ಕಟ್ಟಡಕ್ಕೆ ಪೂರ್ಣ ಹಾನಿಯಾಗುವ ಮುನ್ನ ಪ್ರಾಚ್ಯವಸ್ತು ಇಲಾಖೆ ಪುರಾತನ ದೇಗುಲ ವನ್ನು ನವೀಕರಣ ಮಾಡಬೇಕಾದ ಅಗತ್ಯವಿದೆ.

ಉಪದೇಶದ ನಂಬಿಕೆ: ಚೆಲುವನಾರಾಯಣಸ್ವಾಮಿ ದೇವಾ ಲಯದ ಮುಂಭಾಗವೇ ಬೃಹತ್‌ ಎಲಚಿವೃಕ್ಷದ ಕೆಳಗೆ ದೇವಾಲಯವಿದ್ದು, ಸಾಕ್ಷಾತ್‌ ಬದರಿ ನಾರಾಯಣಸ್ವಾಮಿ ಲಕ್ಷ್ಮೀ ದೇವಿಯನ್ನು ತೊಡೆ ಮೇಲೆ ಕೂರಿಸಿಕೊಂಡು ದ್ವಯಮಂತ್ರ ಉಪದೇಶ ಮಾಡುತ್ತಿದ್ದಾನೆ ಎಂಬ ನಂಬಿಕೆಯಿದೆ. ಅಂಜಲಿ ಮುದ್ರೆಯಲ್ಲಿ ಕುಳಿತ ಆಚಾರ್ಯ ರಾಮಾನುಜರ ಮೂರ್ತಿಯೂ ಇಲ್ಲಿದ್ದು, ಕ್ಷೇತ್ರಕ್ಕೆ ಆಚಾರ್ಯರು ಆಗಮಿಸಿದಾಗ, ಹೇಗಿದ್ದರೋ ಹಾಗೆ ಬಿಳಿಯ ವಸ್ತ್ರ ತೊಟ್ಟಿದ್ದಾರೆ.

ದರ್ಶನದಿಂದ ಪೂರ್ಣ ಫಲ: ಉತ್ತರ ಬದ್ರಿನಾಥನ ದರ್ಶನ ಪಡೆದ ಭಕ್ತರು ದಕ್ಷಿಣ ಬದರೀ ಕಾಶ್ರಮವಾದ ಮೇಲುಕೋಟೆಯ ಬದರಿನಾರಾ ಯಣನನ್ನು ದರ್ಶನ ಪಡೆದರೆ ಪೂರ್ಣಫಲ ದೊರೆ ಯುತ್ತದೆ ಎಂಬ ನಂಬಿಕೆ ಇದೆ. ಇನ್ನು ಉತ್ತರ ಬದರಿ ಕಾಶ್ರಮಕ್ಕೆ ಹೋಗಲು ಸಾಧ್ಯವಾಗದಿದ್ದರೆ ಇಲ್ಲಿ ಬಂದು ದರ್ಶನ ಮಾಡಿದರೆ ಅಷ್ಠೆàಫಲ ದೊರೆಯು ತ್ತದೆ ಎಂಬ ನಂಬಿಕೆಯಿದೆ. ಮೇಲು ಕೋಟೆಯ ಚೆಲುವನಾರಾಯಣನ ದರ್ಶನ ವೇಳೆ ಕ್ಷೇತ್ರ ದೇವತೆ ಬದರಿನಾರಾಯಣನ ದರ್ಶನ ಭಾಗ್ಯ ಭಕ್ತ ರಿಗೆ ಪೂರ್ಣಫಲ ಕರುಣಿಸುತ್ತದೆ ಎಂಬ ನಂಬಿಕೆ ಇದೆ.

ಬೃಹತ್ಎಲಚಿ ವೃಕ್ಷದ ಅಚ್ಚರಿ : ಎಲಚಿ ವೃಕ್ಷ ಮಧ್ಯಮ ವರ್ಗ ಪ್ರಭೇದದ ಗಿಡವಾಗಿದ್ದರೂ ಮೇಲುಕೋಟೆಯಲ್ಲಿ ಬದರಿ ನಾರಾಯಣಸ್ವಾಮಿ ದೇಗುಲದ ಮೇಲೆ ಬೃಹದಾಕಾರವಾಗಿ ಬೆಳೆದು ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲ ಮರದ ಬೇರು ಭಕ್ತರಿಗೆ ಎಲ್ಲಿಯೂ ಕಾಣ ಸಿಗುವುದಿಲ್ಲ. ಧನುರ್ಮಾಸದ ವೇಳೆ ಪ್ರತಿದಿನ ಈ ವೃಕ್ಷಕ್ಕೆ ಚೆಲುವನಾರಾಯಣ ಸ್ವಾಮಿಯ ಸನ್ನಿ ಧಿಯಿಂದ ಪೂಜೆ ನೆರವೇರುತ್ತದೆ.

Advertisement

ಮಕ್ಕಳಿಗೆ ಶ್ರೇಯಸ್ಸು : ಬದರೀಕ್ಷೇತ್ರದ ಎಲಚಿಮರದ ಹಣ್ಣು/ ಕಾಯಿಯನ್ನು ಸಂಗ್ರಹಿಸಿ ಸಂಕ್ರಾಂತಿಯಂದು ಎಳ್ಳು, ಅಕ್ಷತೆಯೊಂದಿಗೆ ಎಲಚಿಹಣ್ಣನ್ನು ಸೇರಿಸಿ ಮಗುವಿನ ತಲೆ ಮೇಲೆ ಸುರಿಯುವ ಸಂಪ್ರದಾಯವಿದೆ. ಇದರ ಆಶೀರ್ವಾದ ಪಡೆದ ಮಗು ತೇಜಸ್ವಿಯಾಗಿ ಬುದ್ಧಿವಂತನಾಗಿ ವಿದ್ಯೆ ಕಲಿತು ಬೆಳೆಯುತ್ತಾನೆ ಎಂಬ ನಂಬಿಕೆ ಇದೆ.

ಮಳೆ ಹಾನಿಗೆ ಒಳಗಾದ ದೇಗುಲದ ಸ್ಥಿತಿ ಪರಿಶೀಲಿಸಿದ್ದೇನೆ. ನವೀಕರಣ ಅಗತ್ಯವಾಗಿದ್ದು, ಮಳೆ ನಿಂತ ನಂತರ ಕಾಮಗಾರಿ ಆರಂಭಿಸಿ ಜೀರ್ಣೋದ್ಧಾರ ಮಾಡಲಾಗುವುದು. –ಮಹೇಶ್‌, ಎಂಜಿನಿಯರ್‌, ಪ್ರಾಚ್ಯ ವಸ್ತು ಇಲಾಖೆ, ಮೈಸೂರು

 

ಸೌಮ್ಯ ಸಂತಾನಂ

Advertisement

Udayavani is now on Telegram. Click here to join our channel and stay updated with the latest news.

Next