Advertisement

ಬ್ಯಾಡ್ಮಿಂಟನ್‌: ಅಶ್ಮಿತಾ ಅಚ್ಚರಿ ಫಲಿತಾಂಶ

11:13 PM Jan 11, 2022 | Team Udayavani |

ಹೊಸದಿಲ್ಲಿ: ಕೊರೊನಾ ಕಾರಣದಿಂದ ಎರಡು ಬಾರಿ ರದ್ದುಗೊಂಡಿದ್ದ “ಇಂಡಿಯಾ ಓಪನ್‌ ಟೂರ್ನಿ’ ಮಂಗಳವಾರ ಆರಂಭಗೊಂಡಿದೆ. ಇದರಲ್ಲಿ ಪಿ.ವಿ. ಸಿಂಧು ಮತ್ತು ಭಾರತದ ಯುವ ಶಟ್ಲರ್‌ ಅಶ್ಮಿತಾ ಚಾಲಿಹಾ ಶುಭಾರಂಭ ಮಾಡಿದ್ದಾರೆ.

Advertisement

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಯಾವುದೇ ಶ್ರೇಯಾಂಕ ಹೊಂದಿಲ್ಲದ ಗುವಾಹಟಿಯ ಅಶ್ಮಿತಾ ರಶ್ಯದ 5ನೇ ಶ್ರೇಯಾಂಕದ ಯವೆYàನಿ ಕೊಸೆಸ್ಕಾಯಾ ಅವರನ್ನು 24-22, 21-16 ನೇರ ಗೇಮ್‌ಗಳಿಂದ ಮಣಿಸಿ ಅಚ್ಚರಿಯ ಫಲಿತಾಂಶ ದಾಖಲಿಸಿದರು.

ಮತ್ತೂಂದು ಪಂದ್ಯದಲ್ಲಿ ಅವಳಿ ಒಲಿಂಪಿಕ್ಸ್‌ ಪದಕ ವಿಜೇತೆ, ಅಗ್ರ ಶ್ರೇಯಾಂಕದ ಪಿ.ವಿ. ಸಿಂಧು ಭಾರತೀಯ ಎದುರಾಳಿ ಶ್ರೀಕೃಷ್ಣಪ್ರಿಯಾ ಕುದರವಳ್ಳಿ ವಿರುದ್ಧ 21-5, 21-16 ಅಂತರದಿಂದ ಮೇಲುಗೈ ಸಾಧಿಸಿದರು.

ಇದನ್ನೂ ಓದಿ:ಪ್ರೊ ಕಬಡ್ಡಿ 8ನೇ ಆವೃತ್ತಿ: ಅಗ್ರಸ್ಥಾನಕ್ಕೇರಿದ ಪಾಟ್ನಾ ಪೈರೇಟ್ಸ್‌

ಪುರುಷರ ವಿಭಾಗ
ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮ, ಕೆ. ಶ್ರೀಕಾಂತ್‌ ದ್ವಿತೀಯ ಸುತ್ತಿಗೆ ಏರಿದ್ದಾರೆ. ಆದರೆ ಪುರುಷರ ಡಬಲ್ಸ್‌ನಲ್ಲಿ ಪ್ರೇಮ್‌ ಸಿಂಗ್‌ ಚೌಹಾಣ್‌-ರಾಜೇಶ್‌ ವರ್ಮ ಪರಾಭವಗೊಂಡರು. ಮಿಶ್ರ ಡಬಲ್ಸ್‌ ನಲ್ಲಿ ಗಾಯತ್ರಿ ಗೋಪಿಚಂದ್‌-ಕೆ. ಸಾಯಿ ಪ್ರತೀಕ್‌ ಜಯ ಸಾಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next