Advertisement

ಬ್ಯಾಡ್ಮಿಂಟನ್‌: ಚಿನ್ನದಿಂದ ಬೆಳ್ಳಿಗೆ; ಮಲೇಷ್ಯಾ ವಿರುದ್ಧ 1-3 ಆಘಾತ

10:45 PM Aug 03, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಮಿಶ್ರ ತಂಡ ಬ್ಯಾಡ್ಮಿಂಟನ್‌ ಸ್ಪರ್ಧೆ ಯಲ್ಲಿ ಹಾಲಿ ಚಾಂಪಿಯನ್‌ ಭಾರತ ತನ್ನ ಕಿರೀಟ ಕಳೆದುಕೊಂಡಿದೆ.

Advertisement

ಮಲೇಷ್ಯಾ ವಿರುದ್ಧ 1-3 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಇನ್ನೊಂದೆಡೆ ಕಳೆದ ಗೋಲ್ಡ್‌ಕೋಸ್ಟ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಶರಣಾಗಿ ಬೆಳ್ಳಿ ಜಯಿಸಿದ್ದ ಮಲೇಷ್ಯಾ ಮರಳಿ ಬಂಗಾರದೊಂದಿಗೆ ಸಿಂಗಾರಗೊಂಡಿತು.

ಮಲೇಷ್ಯಾ ಎದುರಿನ 4 ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದಿತ್ತದ್ದು ಪಿ.ವಿ. ಸಿಂಧು ಮಾತ್ರ. ಕೆ. ಶ್ರೀಕಾಂತ್‌, ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿ, ಗಾಯತ್ರಿ ಗೋಪಿಚಂದ್‌-ತಿೃಶಾ ಜಾಲಿ ಜೋಡಿ ಸೋಲನ್ನು ಕಂಡಿತು.

ಶೆಟ್ಟಿ-ರೆಡ್ಡಿ ಜೋಡಿಯನ್ನು ಟೆಂಗ್‌ ಫಾಂಗ್‌ ಆರನ್‌ ಚಿಯಾ-ವೂಯಿ ಯಿಕ್‌ ಸೋಹ್‌ 21-18, 21-15ರಿಂದ ಸೋಲಿಸಿ ಮಲೇಷ್ಯಾಕ್ಕೆ 1-0 ಮುನ್ನಡೆ ಗಳಿಸಿಕೊಟ್ಟಿತು. ಸ್ಪರ್ಧೆಯನ್ನು ಸಮಬಲಕ್ಕೆ ತಂದವರು ಪಿ.ವಿ. ಸಿಂಧು. ಅವರು 60ನೇ ರ್‍ಯಾಂಕಿಂಗ್‌ ಆಟಗಾರ್ತಿ ಗೋಹ್‌ ಜಿನ್‌ ವೀ ವಿರುದ್ಧ ಭಾರೀ ಹೋರಾಟ ನಡೆಸಿ 22-20, 21-17 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್‌ ವೈಫ‌ಲ್ಯ ಭಾರತಕ್ಕೆ ಮುಳುವಾಯಿತು. ವಿಶ್ವದ 14ನೇ ರ್‍ಯಾಂಕಿಂಗ್‌ ಆಟಗಾರನಾಗಿರುವ ಶ್ರೀಕಾಂತ್‌ 42ನೇ ರ್‍ಯಾಂಕಿಂಗ್‌ನ ಜೆ ಯಾಂಗ್‌ ಎನ್‌ಜಿ ವಿರುದ್ಧ 19-21, 21-6, 16-21ರಿಂದ ಶರಣಾದರು. ಇದು ಶ್ರೀಕಾಂತ್‌ ವಿರುದ್ಧ ಆಡಿದ 3 ಪಂದ್ಯಗಳಲ್ಲಿ ಜೆ ಯಾಂಗ್‌ ಸಾಧಿಸಿದ ಮೊದಲ ಗೆಲುವು.

Advertisement

ವನಿತಾ ಡಬಲ್ಸ್‌ನಲ್ಲಿ ತಿನಾಹ್‌ ಮುರಳೀಧರನ್‌-ಕೂಂಗ್‌ ಲೆ ಪಿಯರ್ಲಿ ಸೇರಿಕೊಂಡು ಗಾಯತ್ರಿ ಗೋಪಿಚಂದ್‌- ತಿೃಶಾ ಜಾಲಿ ಜೋಡಿಗೆ 21-18, 21-17 ಅಂತರದ ಸೋಲುಣಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next