Advertisement

ಸ್ವಿಸ್ ಓಪನ್ ಸೂಪರ್ ಪ್ರಶಸ್ತಿ ಗೆದ್ದ ಸಾಯಿರಾಜ್-ಚಿರಾಗ್ ಜೋಡಿ

05:03 PM Mar 26, 2023 | Team Udayavani |

ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಭಾನುವಾರ ಭಾರತದ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾದ ರೆನ್ ಕ್ಸಿಯಾಂಗ್ ಯು ಮತ್ತು ತಾನ್ ಕಿಯಾಂಗ್ ಅವರನ್ನು ಸೋಲಿಸಿ ಪ್ರಶಸ್ತಿ ಗೆಲುವಿನೊಂದಿಗೆ ತಮ್ಮ ಭರ್ಜರಿ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

Advertisement

2022 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಎರಡನೇ ಶ್ರೇಯಾಂಕದ ಭಾರತೀಯ ಜೋಡಿ, ಆಕ್ರಮಣಕಾರಿ ಹೋರಾಟದಲ್ಲಿ ವಿಶ್ವದ ನಂ. 21 ಜೋಡಿಯನ್ನು 21-19, 24-22 ರಿಂದ 54 ನಿಮಿಷಗಳಲ್ಲಿ ಸೋಲಿಸಿದರು.

ಕಳೆದ ವಾರ ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಅವರು ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ ನಿರಾಸೆಯನ್ನು ನಿವಾರಿಸುವುದರೊಂದಿಗೆ ಭಾರತಕ್ಕೆ ಈ ಋತುವಿನ ಮೊದಲ ಪ್ರಶಸ್ತಿ ದೊರಕಿದ ಸಂಭ್ರಮ.

ಒಟ್ಟಾರೆಯಾಗಿ, 2019 ರಲ್ಲಿ ಥಾಯ್ಲೆಂಡ್ ಓಪನ್ ಮತ್ತು 2018 ರಲ್ಲಿ ಹೈರಾಬಾದ್ ಓಪನ್ ಅನ್ನು ಭದ್ರಪಡಿಸುವುದರ ಜೊತೆಗೆ ಕಳೆದ ವರ್ಷ ಇಂಡಿಯಾ ಓಪನ್ ಮತ್ತು ಫ್ರೆಂಚ್ ಓಪನ್ ಗೆದ್ದಿದ್ದ ಭಾರತೀಯ ಜೋಡಿಗೆ ಇದು ಐದನೇ ವೃತ್ತಿಜೀವನದ ವಿಶ್ವ ದರ್ಜೆಯ ಪ್ರಶಸ್ತಿಯಾಗಿದೆ. ಸಾತ್ವಿಕ್ ಮತ್ತು ಚಿರಾಗ್ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next