Advertisement

ಬ್ಯಾಡ್ಮಿಂಟನ್‌: ರಾಜ್ಯಕ್ಕೆ 9 ಪದಕ

10:57 PM Mar 28, 2023 | Team Udayavani |

ಬೆಂಗಳೂರು: ಲಕ್ನೋದಲ್ಲಿ ಮುಗಿದ 5ನೇ ರಾಷ್ಟ್ರೀಯ ದಿವ್ಯಾಂಗರ ಬ್ಯಾಡ್ಮಿಂಟನ್‌ ಕೂಟದಲ್ಲಿ ಕರ್ನಾಟಕ 9 ಪದಕಗಳನ್ನು ಗೆದ್ದಿದೆ. ಈ ಪೈಕಿ ಕೆ.ಎಂ. ಪಲ್ಲವಿ ಒಬ್ಬರೇ ಮೂರು ಪದಕ ಜಯಿಸಿದರು.

Advertisement

ಕೇರಳದ ಆಲ್ಫಿಯಾ ಜೇಮ್ಸ್‌ ಜತೆಗೂಡಿದ ಪಲ್ಲವಿ, ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕರ್ನಾಟಕದ ಅಮ್ಮು ಮೋಹನ್‌-ಆಂಧ್ರ ಪ್ರದೇಶದ ರೂಪಾ ಪಡಾಲ ಅವರನ್ನು 21-7, 21-8ರಿಂದ ಮಣಿಸಿ ಚಿನ್ನ ಗೆದ್ದರು.

ಮಿಶ್ರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ರಾಜ್ಯದ ಅಮ್ಮು ಮೋಹನ್‌-ಶಶಾಂಕ್‌ ಕುಮಾರ್‌ ವಿರುದ್ಧ ಪಲ್ಲವಿ-ಅಬು ಹುಬೈದ ಜೋಡಿ ಸೋಲನುಭವಿಸಿತು. ಇಲ್ಲಿ ಪಲ್ಲವಿಗೆ ಕಂಚು ಲಭಿಸಿತು. ರಾಜ್ಯದ ಅಮ್ಮು ಮೋಹನ್‌ ಒಟ್ಟು 3 ಬೆಳ್ಳಿ ಪದಕ ಗೆದ್ದರು. ಸಿ. ಮಂಜುನಾಥ್‌ ಕಂಚು ಗೆದ್ದರು. ಪರೀಕ್ಷಿತ್‌ ಪ್ರಸಾದ್‌, ಸುಮಿತ್‌ ಕುಮಾರ್‌ ಕಂಚಿನ ಪದಕ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next