ಬದಿಯಡ್ಕ: ಬದಿಯಡ್ಕದ ಹಿರಿಯ ದಂತ ವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ (57) ಅವರ ನಿಗೂಢ ಸಾವಿನ ಕುರಿತು ತನಿಖೆಯ ಅಂಗವಾಗಿ ಕುಂದಾಪುರಕ್ಕೆ ತೆರಳಿದ್ದ ಬದಿಯಡ್ಕ ಪೊಲೀಸರು ಅಲ್ಲಿನ ಸಿಸಿ ಕೆಮರಾ ದೃಶ್ಯಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದಾರೆ.
ಡಾ| ಕೃಷ್ಣಮೂರ್ತಿ ಅವರು ಕುಂದಾಪುರಕ್ಕೆ ತಲುಪಿದ ಬಳಿಕ ಬಟ್ಟೆಬರೆ ಬದಲಾಯಿಸಿ ನಡೆದು ಹೋಗುತ್ತಿರುವ ದೃಶ್ಯಗಳು ಅಲ್ಲಿನ ಸಿಸಿ ಕೆಮರಾದಲ್ಲಿ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಬದಿಯಡ್ಕ ಪೊಲೀಸರು ಕುಂದಾಪುರಕ್ಕೆ ತೆರಳಿ ಮಾಹಿತಿ ಸಂಗ್ರಹಕ್ಕೆ ತೊಡಗಿದ್ದಾರೆ.
ನ. 8ರಂದು ಡಾ| ಕೃಷ್ಣಮೂರ್ತಿ ಬದಿಯಡ್ಕ ದಿಂದ ನಾಪತ್ತೆಯಾಗಿದ್ದರು. ನ. 9ರಂದು ಅವರ ಮೃತದೇಹ ಕುಂದಾಪುರ ಸಮೀಪದ ರೈಲು ಹಳಿಯಲ್ಲಿ ಪತ್ತೆಯಾಗಿತ್ತು. ಸಾವಿನಲ್ಲಿ ನಿಗೂಢತೆ ಇರುವುದಾಗಿ ಸಂಬಂಧಿಕರು ಆರೋಪಿ ಸಿದ್ದರು. ಈ ಹಿನ್ನೆಲೆಯಲ್ಲಿ ಬದಿಯಡ್ಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ದ್ದಾರೆ. ಕುಂದಾಪುರದ ಪೊಲೀಸರು ಕೆಲವು ದಿನಗಳ ಹಿಂದೆ ಬದಿಯಡ್ಕಕ್ಕೆ ಬಂದು ಮಾಹಿತಿ ಸಂಗ್ರಹಿಸಿದ್ದರು.