ಗದಗ: ಉಳ್ಳವರಿಗೆ ಬೇಡವಾದ ವಸ್ತುಗಳನ್ನು ಇಲ್ಲದವರಿಗೆ ತಲುಪಿಸುವ ನಿಟ್ಟಿನಲ್ಲಿ ಇಲ್ಲೊಂದು”ಬಡವರ ಸೇವಾ ಸಿಂಧು’ ಸದ್ದಿಲ್ಲದೇಕಾರ್ಯನಿರ್ವಹಿಸುತ್ತಿದೆ. ಯಾರು ಬೇಕಾದರೂ ತಮಗೆ ಬೇಡವಾದ ವಸ್ತುಗಳನ್ನು ಇಲ್ಲಿತಂದಿಡಬಹುದು. ಬೇಕಾದವರು ಅವುಗಳನ್ನು ಯಾರಹಂಗಿಲ್ಲದೇ ಉಚಿತವಾಗಿ ಕೊಂಡೊಯ್ಯಬಹುದು.
ಅರೆ, ಇದೇನಪ್ಪಾ ಇಂದಿನ ದುಬಾರಿ ಕಾಲದಲ್ಲಿ ಉಚಿತವಾಗಿ ಎಲ್ಲಿ ಸಿಗುತ್ತದೆ ಎಂದು ಹುಬ್ಬೇರಿಸಬೇಡಿ.ಲಾಯನ್ಸ್ ಕ್ಲಬ್ ಸದಸ್ಯರ ಪ್ರಯತ್ನದಿಂದ ನಗರದಹಳೇ ಕೋರ್ಟ್ ಸಮೀಪದಲಾಯನ್ಸ್ ಕ್ಲಬ್‌ಸಭಾಂಗಣದ ಮುಂದೆ ಇಂಥದ್ದೊಂದು ವೇದಿಕೆತಲೆ ಎತ್ತಿದೆ. ಕ್ಲಬ್‌ನ ಮುಂಭಾಗದಲ್ಲಿ ಸುಮಾರು 6ಅಡಿ ಎತ್ತರ ಹಾಗೂ 4 ಅಡಿ ಅಗಲದಷ್ಟು ಗೋಡೆಹಾಗೂ ಅದರಲ್ಲಿ 2×2 ಅಳತೆಯ 8 ಗೂಡುಗಳನ್ನುನಿರ್ಮಿಸಿದ್ದಾರೆ. ಜೊತೆಗೆ ಆಹಾರ ಪದಾರ್ಥಗಳು ಕೆಡದಂತಿರಲಿ ಎಂಬ ಉದ್ದೇಶದಿಂದ 180ಲೀ. ಸಾಮರ್ಥ್ಯದ ಫ್ರಿಜ್ಡ್ ಕೂಡಾ ಅಳವಡಿಸಿದ್ದಾರೆ. ಜೊತೆಗೆ “ಹೊಟ್ಟೆ ಹಸಿವರು ಅನ್ನ ತೆಗೆದುಕೊಳ್ಳಿ.ಅನ್ನದಾನ ಮಾಡುವವರು ಇಲ್ಲಿ ದಾನ ಮಾಡಿ’ ಎಂಬಘೋಷವಾಕ್ಯವುಳ್ಳ ಫಲಕವನ್ನೂ ಅಳವಡಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಕಳೆದ ಒಂದು ವಾರದಿಂದ ಆರಂಭಗೊಂಡಿರುವ”ಬಡವರ ಸೇವಾ ಸಿಂಧು’ ಅನೇಕರಿಗೆ ಉಪಯುಕ್ತವಾಗುತ್ತಿದೆ. ಅನೇಕರು ತಮಗೆ ಬೇಡವಾದ ಹೊಸ ಮತ್ತು ಹಳೆ ಬಟ್ಟೆ, ಚಳಿ ಮತ್ತು ಮಳೆಗಾಲದ ಉಡುಪುಗಳು, ಹೊದಿಕೆ, ಚಾಪೆ,ಪಾತ್ರೆ, ಹಳೆಯ ಪಠ್ಯ ಪುಸ್ತಕ, ಭಾಗಶಃ ಖಾಲಿಉಳಿದಿರುವ ನೋಟ್ ಬುಕ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಸ್ವತ್ಛಗೊಳಿಸಿಯೇ ತಂದು ಇಡುತ್ತಿದ್ದಾರೆ.ಸ್ಥಳೀಯ ಬಟ್ಟೆ ವ್ಯಾಪಾರಿಗಳು, ಟೇಲರ್‌ಗಳು ತಮ್ಮ ಬಳಿ ಗ್ರಾಹಕರು ಕೊಂಡೊಯ್ಯದ ಹೊಸ ಅಂಗಿ, ಪ್ಯಾಂಟ್‌ಗಳನ್ನೂ ತಂದಿಡುತ್ತಿದ್ದಾರೆ. ಅದರೊಂದಿಗೆಕೆಲವರು ಅನ್ನ, ಸಾಂಬರ್ ಮತ್ತಿತರೆ ಆಹಾರಪದಾರ್ಥಗಳನ್ನೂ ತಂದಿಡುತ್ತಿದ್ದಾರೆ. ಈ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸವಾಗುತ್ತಿದೆ ಎಂಬುದು ಗಮನಾರ್ಹ. ಆ ಪೈಕಿ ಬಹುತೇಕವಸ್ತುಗಳು ದಿನವಿಡೀ ಇಲ್ಲಿನ ಕಪಾಟುಗಳಲ್ಲಿದ್ದರೂಬೆಳಗಾಗುವುದರೊಳಗೆ ಖಾಲಿಯಾಗಿರುತ್ತವೆ ಎನ್ನುತ್ತಾರೆ ಸ್ಥಳೀಯ ವರ್ತಕರು.
ಒಟ್ಟಾರೆ ಲಾಯನ್ಸ್ ಕ್ಲಬ್‌ನ ಸಾಮಾಜಿಕಕಳಕಳಿಯಿಂದ ಅತ್ಯಲ್ಪ ಮೊತ್ತದಲ್ಲಿ ತಲೆ ಎತ್ತಿರುವ ಬಡವರ ಸೇವಾ ಸಿಂಧು ಹಲವರಿಗೆ ನೆರವಾಗುತ್ತಿದೆ ಎಂಬುದು ಸುಳ್ಳಲ್ಲ.
ಈಗಾಗಲೇ ವಿವಿಧೆಡೆ ಈ ರೀತಿಯ ವ್ಯವಸ್ಥೆಗಳಿರುವುದನ್ನು ಮನಗಂಡು ನಗರದಲ್ಲಿ ಲಾಯನ್ಸ್ ಕ್ಲಬ್‌ನಿಂದ ನಿರ್ಮಿಸಿದ್ದೇವೆ.ಓರ್ವ ಸದಸ್ಯ ಫ್ರಿಜ್ಡ್, ಮತ್ತಿತರರು ಇಟ್ಟಿಗೆ, ಸಿಮೆಂಟ್ ಹೀಗೆ ವಿವಿಧವಸ್ತುಗಳನ್ನು ದೇಣಿಗೆ ನೀಡಿದ್ದರಿಂದ ಇದು ಸಾಧ್ಯವಾಗಿದೆ. ಪಕ್ಕದಲ್ಲೇ ಇರುವ ನಮ್ಮ ಶಾಲೆಯ ಶಿಕ್ಷಕರು ಪ್ರತಿನಿತ್ಯ ಪ್ರಿಜ್ಡ್ ಸ್ವತ್ಛಗೊಳಿಸುತ್ತಾರೆ. ಅನೇಕ ಸದಸ್ಯರುಪ್ರತಿನಿತ್ಯ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ವ್ಯವಸ್ಥೆಯಿಂದ ಅನೇಕರಿಗೆ ಉಪಯುಕ್ತವಾಗುತ್ತಿದ್ದು, ತೃಪ್ತಿ ತಂದಿದೆ.
-ಅಶ್ವತ್ಥ ಸುಲಾಖೆ ಲಾಯನ್ಸ್ ಕ್ಲಬ್ ಅಧ್ಯಕ್ಷ