Advertisement

ಬಾದಾಮಿ ಬರಡು ಭೂಮಿಗೆ ಆಲಮಟ್ಟಿ ಹಿನ್ನೀರು!

06:26 PM Aug 13, 2022 | Team Udayavani |

ಬಾಗಲಕೋಟೆ: ಜಿಲ್ಲೆಯ ಬಾದಾಮಿ ಮತ್ತು ಬಾಗಲಕೋಟೆ ತಾಲೂಕಿನ ಘಟಪ್ರಭಾ ಬಲದಂಡೆ ಕಾಲುವೆಯ ಸುಮಾರು 14525.43 ಹೆಕ್ಟೇರ್‌ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಕಲ್ಪಿಸುವ ಮಹತ್ವದ 411.10 ಕೋಟಿ ರೂ. ಮೊತ್ತದ ಅನವಾಲ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

Advertisement

ಘಟಪ್ರಭಾ ಯೋಜನೆಯಡಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಅಥಣಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಯಬಾಗ, ರಾಮದುರ್ಗ, ಸವದತ್ತಿ, ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ ತಾಲೂಕುಗಳ ಒಟ್ಟಾರೆ 31,0823 ಹೆಕ್ಟೇರ್‌ ಭೂಮಿಗೆ ನೀರಾವರಿ ಒದಗಿಸಲು ಯೋಜಿಸಲಾಗಿದೆ. ಈ ಯೋಜನೆಯಡಿ ಬಲದಂಡೆ ಮುಖ್ಯ ಕಾಲುವೆಯ 199 ಕಿ.ಮೀ ಮತ್ತು ಎಡದಂಡೆ ಮುಖ್ಯ ಕಾಲುವೆಯ 109 ಕಿ.ಮೀ, ಬಲದಂಡೆ ಉಪ
ಕಾಲುವೆ 88 ಕಿ.ಮೀ ಎಡದಂಡೆ ಉಪ ಕಾಲುವೆ 210 ಕಿ.ಮೀ ಮತ್ತು ಬಲದಂಡೆ ಹಂಚು ಕಾಲುವೆ 994 ಕಿ.ಮೀ ಹಾಗೂ ಎಡದಂಡೆ ಹಂಚು ಕಾಲುವೆ 494 ಕಿ.ಮೀ. ಒಳಗೊಂಡಿದೆ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವರದಿ ಆಧರಿಸಿ ಈ ಯೋಜನೆ ಕೈಗೊಳ್ಳಲಾಗಿದೆ.

ಈ ಯೋಜನೆಯಡಿ ಬಲದಂಡೆ ಮುಖ್ಯ ಕಾಲುವೆಯು 199 ಕಿ.ಮೀ ಉದ್ದ ಇದ್ದು, ಡಿಸಾcರ್ಜ್‌ 66.56 ಕ್ಯೂಮೆಕ್ಸ್‌ ಮೂಲಕ 16,9129 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, 2004ರಲ್ಲಿ ಫಟಪ್ರಭಾ ಬಲದಂಡೆ ಮುಖ್ಯ ಕಾಲುವೆ ನಿರ್ಮಾಣದ ನಂತರ 148.00 ಕಿ.ಮೀಯಿಂದ 199 ಕಿ.ಮೀವರೆಗೆ ಸಮರ್ಪಕವಾಗಿ ನೀರು ತಲುಪದೇ ಸುಮಾರು 24,750 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶಗಳು, ಒಣ ಪ್ರದೇಶವಾಗಿದ್ದು, ಇದು ನೀರಾವರಿಯಿಂದ ವಂಚಿತವಾಗಿದೆ. ಈ ವಿವರವಾದ ಯೋಜನಾ ವರದಿಯಲ್ಲಿ ಘಟಪ್ರಭಾ ಬಲದಂಡೆ ಕಾಲುವೆ ಕೇವಲ 2 ಸಾವಿರ ಕ್ಯೂಸೆಕ್‌ ಹರಿವನ್ನು ಮಾತ್ರ ತೆಗೆದುಕೊಳ್ಳುವ ಬದಲು 2000 ಕ್ಯೂಸೆಕ್‌ ಮಾತ್ರ ಬಿಡಲಾಗುತ್ತಿದೆ ಮತ್ತು ಕಾಲುವೆ ಮೇಲ್ಭಾಗದಲ್ಲಿ ವಿನ್ಯಾಸಿಸಿರುವಂತೆ 2100 ಕ್ಯೂಸೆಕ್‌ ಬದಲು 2000 ಕ್ಯೂಸೆಕ್‌ ಮಾತ್ರ ಬಿಡಲಾಗುತ್ತಿದೆ.

ಕಾಲುವೆ ಮೇಲ್ಭಾಗದ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ. ಇದರಿಂದಾಗಿ ಯೋಜಿತ ಬಳಕೆಗಿಂತ ಹೆಚ್ಚಿನ ಪ್ರಮಾಣದ ನೀರು ಕಾಲುವೆ ಮೇಲ್ಭಾಗದಲ್ಲಿ ಬಳಸಲಾಗುತ್ತಿರುವುದರಿಂದ ಘಟಬ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡಾಗಿನಿಂದ ಕಿ.ಮೀ 148.00 ನಂತರದ ಪ್ರದೇಶಕ್ಕೆ ಸಾಕಷ್ಟು ಪ್ರಮಾಣದ ನೀರು ಹರಿಯುತ್ತಿಲ್ಲವಾದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು, ರೈತರುಗಳು ಭಾದಿತ 24750.00 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ
ಕಲ್ಪಿಸುವಂತೆ ಒತ್ತಾಯಿಸುತ್ತಿರುವುದಾಗಿ ಸದರಿ ಯೋಜನೆಗೆ ಅವಶ್ಯವಿರುವ 3.64 ಟಿಎಂಸಿ ನೀರಿನ ಹಂಚಿಕೆ ಅವಶ್ಯವಿದೆ ಎಂದು ಅಂದಾಜಿಸಲಾಗಿದೆ.

ಫಟಪ್ರಭಾ ಬಲದಂಡೆ ಕಾಲುವೆಯ ಕಿ.ಮೀ 148.70 ರಿಂದ ಆಲಮಟ್ಟಿ ಜಲಾಶಯದ ಹಿನ್ನೀರು ಇರುವ ಕಿ.ಮೀ 199.093 ಟೇಲ್‌ ಎಂಡ್‌ ವರೆಗಿನ ಕಾಲುವೆ ಫಟಪ್ರಭಾ ನದಿಗೆ ಸಮಾನಾಂತರವಾಗಿ ಹರಿಯುತ್ತಿರುವುದು ಟೋಪೋಶೀಟ್‌ ಮತ್ತು ಸ್ಥಳ ಪರಿಶೀಲನಾ ಅಧ್ಯಯನದಲ್ಲಿ ಕಂಡುಬಂದಿದೆ.

Advertisement

ಘಟಪ್ರಭಾ ನದಿಯಿಂದ ಘಟಪ್ರಭಾ ಬಲದಂಡೆ ಕಾಲುವೆಯ ಕಿ.ಮೀ 149.700 ವರೆಗಿನ ಅಂತರವು ಸುಮಾರು 19.0 ಕಿ.ಮೀ ಇದ್ದು, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬರುತ್ತಿದ್ದು, ಈ ಸ್ಥಳದಿಂದ ನೀರನ್ನು ಎತ್ತಿ ಜಿಆಬಿಆರ್‌ಸಿಗೆ ಪೂರೈಸಲು ಉದ್ದೇಶಿಸಿದ್ದು, ಈ ರೀತಿ ಮೇಲೆತ್ತಿದ ನೀರಿನಿಂದ 14525.43 ಹೆಕ್ಟೇರ್‌ಗೆ ನೀರಾವರಿ ಒದಗಿಸಲು ಅಂದರೆ ಕಲಾದಗಿ ವಿತರಣಾ ಕಾಲುವೆಯಿಂದ ಮುಚಖಂಡಿ ವಿತರಣಾ ಕಾಲುವೆವರೆಗೆ ನೀರಾವರಿ ಮಾಡಲು ಉದ್ದೇಶಿಸಲಾಗಿದೆ.

ಬಾಗಲಕೋಟೆ ತಾಲೂಕಿನ ದೇವನಾಳ ಗ್ರಾಮದ ಬಳಿ ಅಂದಾಜು 25.0 ಕಿ.ಮೀನಷ್ಟು ದೂರದ ಹೆರಕಲ್‌ ಸೇತುವೆ ಕಮ್‌ ಬ್ಯಾರೇಜ್‌ ಮೇಲ್ಭಾಗದಲ್ಲಿ ಘಟಪ್ರಭಾ ನದಿಯಿಂದ ನೀರು ಎತ್ತಿ ಜಿಆಬಿರ್‌ಸಿ ಸರಪಳಿ 149+700ರಲ್ಲಿ ಡಿಸಾcರ್ಜ್‌ ಪಾಯಿಂಟ್‌ನಲ್ಲಿ ನೀರು ಹರಿಸಿ 14525.43 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಒದಗಿಸಲು ಯೋಜನೆ ರೂಪಿಸಲಾಗಿದೆ. ಅದರಂತೆ ಅನವಾಲ ಏತ ನೀರಾವರಿ ಯೋಜನೆಯ ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗಿದೆ.

ರೈತರು, ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ರೈತರ ಹಿತದೃಷ್ಟಿಯಿಂದ ಬಾಧಿತ 24,570 ಹೆಕ್ಟೇರ್‌ ಅಚ್ಚುಕಟ್ಟಿನ ಪೈಕಿ ಸುಮಾರು 14,525.43ಹೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ (ಕಲಾದಗಿ ವಿತರಣಾ ಕಾಲುವೆಯಿಂದ ಮುಚಖಂಡಿ ವಿತರಣಾ ಕಾಲುವೆವರೆಗೆ) ನೀರಾವರಿ ಸೌಲಭ್ಯ ಕಲ್ಪಿಸಲು411.10 ಕೋಟಿ ರೂ. ಮೊತ್ತಕ್ಕೆ ಸರ್ಕಾರಕ್ಕೆ ಅನುಮೋದನೆ ನೀಡಿದ್ದು, ರೈತರ ಮೊಗದಲ್ಲಿ ಹರ್ಷ ತಂದಿದೆ.

ಜಿಲ್ಲೆಯ ಬರಡು ಭೂಮಿಗೆ ನೀರಾವರಿ ಕಲ್ಪಿಸುವ ಅನವಾಲ ಏತ ನೀರಾವರಿ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 411 ಕೋಟಿ ರೂ. ಮೊತ್ತದ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಗೋವಿಂದ ಕಾರಜೋಳ,
ಜಲ ಸಂಪನ್ಮೂಲ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next