Advertisement
ಲಾಯಿಲ ಗ್ರಾಮದ ಕಾಶಿಬೆಟ್ಟು ಕೃಷ್ಣಯ್ಯ ವಾಸುದೇವ ಶೆಟ್ಟಿ ಅವರ ಪುತ್ರ ಉಜಿರೆ ಎಸ್ ಡಿಎಂ ಕಾಲೇಜು ದ್ವಿತೀಯ ಪದವಿ ವಿದ್ಯಾರ್ಥಿ ಸನತ್ ಶೆಟ್ಟಿ (21) ಮಣ್ಣಿನಡಿ ಸಿಲುಕಿದ್ದು, ತೆರವಿಗೆ ಎಸ್ ಡಿಆರ್ ಎಫ್, ಪೊಲೀಸ್, ಅಗ್ನಿಶಾಮಕದಳ, ಶ್ರೀ.ಕ್ಷೇ.ಧ. ವಿಪತ್ತು ನಿರ್ವಹಣಾ ತಂಡ ಸತತ ಕಾರ್ಯಾಚರಣೆಯಲ್ಲಿ ಹರಸಾಹಸ ಪಟ್ಟಿದೆ.
Related Articles
Advertisement
15 ಅಡಿ ಆಳದಲ್ಲಿ ಬೃಹದಾಕಾರದ ಕಲ್ಲು, ಬಂಡೆ, ಮಣ್ಣಿನಡಿ ಸನತ್ ಶೆಟ್ಟಿ ಸಿಲುಕಿದ್ದು, ಕಾರ್ಯಾಚರಣೆ ಬಲು ತ್ರಾಸದಾಯಕವಾಗಿದೆ.
ಈತನ ಜತೆಗಿದ್ದ ಸ್ನೇಹಿತರಾದ ಆದಿತ್ಯ ಹಾಗೂ ಸೌರಬ್ ಸಹಿತ ಇತರರು ಪ್ರಾಣಪಾಯದಿಂದ ಪಾರಾಗಿದ್ದು, ಸೌರಬ್ ಗೆ ಸಣ್ಣಪುಟ್ಟ ಗಾಯವಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಭಯೋತ್ಪಾದಕರು : ಬಿ ಸಿ ಪಾಟೀಲ್
ಘಟನೆ ವಿವರ
ಉಜಿರೆ ನಿವಾಸಿಯಾಗಿರುವ ಸನತ್ ಶೆಟ್ಟಿ ಸಹಿತ ಮೂವರು ಕ್ರಿಕೆಟ್ ಪಂದ್ಯಾಟವಾಡಲು ಸಂಸೆಯಲ್ಲಿರುವ ತನ್ನ ಸ್ನೇಹಿತನಾದ ಆದಿತ್ಯ ಮನೆಗೆ ರವಿವಾರ ತೆರಳಿದ್ದರು. ರವಿವಾರ ಅಲ್ಲೇ ತಂಗಿದ್ದು, ಸೋಮವಾರ ಮಧ್ಯಾಹ್ನ ಜಲಪಾತ ವೀಕ್ಷಿಸಿ ಉಜಿರೆ ಮರಳುವವರಿದ್ದರು. ಹಿಂದಿರುಗುವ ವೇಳೆ ಜಲಪಾತದಂಚಿನಲ್ಲಿದ್ದ ಗುಡ್ಡ ಕುಸಿತವಾಗಿ ಸನತ್ ಶೆಟ್ಟಿಮೇಲೆ ಬಿದ್ದಿದೆ.