Advertisement
ಆಸ್ಪತ್ರೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವ ವೈದ್ಯರು ಸೇರಿದಂತೆ ಅಲ್ಲಿನ ಸಿಬ್ಬಂದಿಗಳಿಗೆ ಸೂಕ್ತ ವಸತಿ ವ್ಯವಸ್ಥೆ (ಕ್ವಾರ್ಟರ್) ಸೇರಿದಂತೆ ತೀವ್ರ ನಿಗಾ ಘಟಕಕ್ಕೆ (ಐಸಿಯು) ವೈದ್ಯಕೀಯ ಸಿಬ್ಬಂದಿ, ಅತ್ಯಾಧುನಿಕ ಶವಪರೀಕ್ಷಾ ಕೇಂದ್ರ, ಮೇಲ್ಮಟ್ಟದ ಜಲಾಗಾರದಂತ ಸಣ್ಣಪುಟ್ಟ ಸಮಸ್ಯೆಗಳೇ ಕಿರಿಕಿರಿಯುಂಟು ಮಾಡುತ್ತಿವೆ.
Related Articles
Advertisement
ವಾಸಕ್ಕೆ ಯೋಗ್ಯವಲ್ಲದ ವಸತಿ ಗೃಹ: ಈಗಾಗಲೇ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸುಮಾರು 50 ವರ್ಷಕ್ಕೂ ಅಧಿಕ ಹಳೆಯದೆನ್ನಬಹುದಾದ ವಸತಿಗೃಹಗಳಿವೆ. ಅವೆಲ್ಲವೂ ಶಿಥಿಲಾವಸ್ಥೆ ತಲುಪಿದ್ದು, ವಾಸಕ್ಕೆ ಯೋಗ್ಯವಿಲ್ಲದಂತಾಗಿವೆ. ಹೀಗಾಗಿ ಒಟ್ಟು 11 ಜನ ವೈದ್ಯರ ನಡುವೆ ಕೇವಲ ಇಬ್ಬರು ಡಾಕ್ಟರ್ ಗಳಿಗೆ ವಸತಿ ಸೌಕರ್ಯ ಲಭ್ಯವಾಗಿದೆ. 30ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೇವಲ 8 ವಸತಿ ಗೃಹಗಳು ಲಭ್ಯವಾಗಿವೆ. ಇಲ್ಲಿನ ವೈದ್ಯರು ದುಬಾರಿ ಹಣಕೊಟ್ಟು ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವಂತಾಗಿದೆ.
ನೀರಿನ ಕೊರತೆ: ಸ್ಥಳೀಯ ಆಸ್ಪತ್ರೆಗೆ ನಿತ್ಯವೂ ಸುಮಾರು 50ಸಾವಿರಕ್ಕೂ ಅ ಧಿಕ ಲೀ.ನೀರಿನ ಅವಶ್ಯಕತೆಯಿದೆ. ಆದರೆ, ಎಲ್ಲವೂ ಸೇರಿ ಈಗಿರುವ ಸಂಗ್ರಹಣಾ ಸಾಮರ್ಥ್ಯ ಕೇವಲ 8 ಸಾವಿರ ಲೀ. ಇದರಿಂದ ನೀರಿನ ಸಂಗ್ರಹಣೆ ಸಾಧ್ಯ ವಾಗದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಗಿದೆ. ಹೀಗಾಗಿ ಕನಿಷ್ಟ ಎನಿಲ್ಲವೆಂದರೂ 1 ಲಕ್ಷ ಲೀ.ನೀರಿನ ಸಾಮರ್ಥ್ಯದ ಮೇಲ್ಮಟ್ಟದ ಜಲಗಾರವೊಂದು ಅವಶ್ಯಕತೆಯಿದೆ.
ಹೆರಿಗೆಗಾಗಿ ನಿತ್ಯವೂ ಗ್ರಾಮೀಣದ ಪ್ರದೇಶದಿಂದ ಮಹಿಳಾ ರೋಗಿಗಳು ದಾಖಲಾಗುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಮಾತ್ರ ಮಹಿಳಾ ವೈದ್ಯರಿಲ್ಲದೇ ಗರ್ಭಿಣಿಯರು ನಲಗುವಂತಾಗಿದೆ. ಮೊದಲಿದ್ದ ವೈದ್ಯೆಯೊಬ್ಬರು ವರ್ಗಾವಣೆಗೊಂಡು ಬೇರೆಡೆ ತೆರಳಿದ್ದರಿಂದ ಸದ್ಯ ಖಾಲಿಯಿರುವ ಹುದ್ದೆ ಇಂದಿಗೂ ಭರ್ತಿಯಾಗಿಲ್ಲ.
ಯಾವುದೇ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲವೆನ್ನುವಂತೆ ರಾಜ್ಯದಲ್ಲಿಯೇ ಉತ್ತಮ ಹೆಸರು ಪಡೆದಿರುವ ಈ ಆಸ್ಪತ್ರೆ ಸುತ್ತಮುತ್ತಲಿನ ತಾಲೂಕಿನಲ್ಲಿ ಹೆಸರುವಾಸಿ. ಬಡವರು, ಶ್ರೀಮಂತರೆನ್ನದೇ ಬರುವ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಒಳರೋಗಿಗಳ ಜೊತೆ ತಂಗುವವರಿಗೆ ಊಟಕ್ಕಾಗಿ ಅಡುಗೆ ಕೋಣೆ ಹಾಗೂ ಡೈನಿಂಗ್ ಹಾಲ್ ಅವಶ್ಯವಿದೆ.
ಶವಪರೀಕ್ಷಾ ಕೇಂದ್ರಕ್ಕೆ ಸಮಸ್ಯೆತಾಲೂಕಿನಲ್ಲಿ ಪ್ರಮುಖ ಆಸ್ಪತ್ರೆಯಾದ್ದರಿಂದ ಪ್ರತಿದಿನ ದುರಂತ ಸಾವನ್ನಪ್ಪಿದವರ ಶವಪರೀಕ್ಷೆಗೆ ಸುಸಜ್ಜಿತ ಶವಾಗಾರವಿಲ್ಲ, ಈಗಿರುವುದರಲ್ಲಿ ಕೇವಲ ಒಂದು ಶವಪರೀಕ್ಷೆ ಮಾಡಲಷ್ಟೇ ಶಕ್ತವಾಗುತ್ತಿದ್ದು, ಎರಡ್ಮೂರು ಜನ ಸಾವನ್ನಪ್ಪಿದ ಪ್ರಕರಣದ ಸಂದರ್ಭದಲ್ಲಿ ಏಕ ಕಾಲದಲ್ಲಿ ಶವಪರೀಕ್ಷೆ ಕಷ್ಟಸಾಧ್ಯ ಹೀಗಾಗಿ ಸುಸಜ್ಜಿತವಾದ ಶವಪರೀಕ್ಷಾ ಕೇಂದ್ರದ ಅಗತ್ಯವಿದೆ. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ರಾಜ್ಯದಲ್ಲಿಯೇ ಉತ್ತಮ ಹೆಸರು ಪಡೆದಿದೆ. ಅದರ ಖ್ಯಾತಿಗೆ ತಕ್ಕಂತೆ ವೈದ್ಯಕೀಯ ಸೇವೆ ಸಿಗುತ್ತಿದೆ. ಸೂಕ್ತ ಸಿಬ್ಬಂದಿ ನೇಮಕ ಹಾಗೂ ಐಸಿಯು ಪ್ರಾರಂಭಿಸುವ ಕೆಲಸವಾಗಬೇಕು.
ಗಂಗಣ್ಣ ಏಲಿ,
ರೈತ ಮುಖಂಡ ಶಿವಾನಂದ ಮಲ್ಲನಗೌಡರ